ಭಾರತೀಯ ಉದ್ಯಮಿಯ ಹೈಟೆಕ್ ವೇಶ್ಯಾಗೃಹ ಹಗರಣ, ಒಂದು ಗಂಟೆ ಸಂಭೋಗಕ್ಕೆ ಬರೋಬ್ಬರಿ 50 ಸಾವಿರ ರೂ.
ಹೈಟೆಕ್ ವೇಶ್ಯಾಗೃಹ ಹಗರಣದಲ್ಲಿ ಗ್ರೇಡಿಯಂಟ್ ಸಿಇಒ ಹಾಗೂ ಭಾರತೀಯ ಮೂಲದ ಉದ್ಯಮಿ ಅನುರಾಗ್ ಬಾಜಪೇಯಿ ಅವರ ಹೆಸರು ಕೇಳಿ ಬರುತ್ತಿದ್ದಂತೆ ಅವರನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ. ಹೌದು, ಅನುರಾಗ್ ಬಾಜಪೇಯಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಒಂದು ಗಂಟೆಗೆ ಐವತ್ತು ಸಾವಿರ ರೂಪಾಯಿ ಪಾವತಿಸುತ್ತಿದ್ದರು. ಅದಲ್ಲದೇ ಇದರಲ್ಲಿ ವಿಶ್ವದ ಖ್ಯಾತ ಉದ್ಯಮಿಗಳು ಭಾಗಿಯಾಗಿದ್ದಾರೆ ಎನ್ನುವುದು ತನಿಖೆಯಿಂದ ಬಹಿರಂಗವಾಗಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

ವಾಷಿಂಗ್ಟನ್ ಏಪ್ರಿಲ್ 14: ಕೆಲವೊಮ್ಮೆ ಉದ್ಯಮಿ (business man)ಗಳು ಅಕ್ರಮ ವ್ಯವಹಾರ, ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಿಕ್ಕಿ ಬೀಳುವುದೇ ಹೆಚ್ಚು. ಒಮ್ಮೆ ಗ್ರಹಚಾರ ಕೆಟ್ಟರೆ ಮುಗಿದೇ ಹೋಯಿತು. ಈ ರೀತಿಯಾದಾಗ ವರ್ಷಾನುಗಟ್ಟಲೆ ಗಳಿಸಿದ ಸ್ಥಾನಮಾನ ಎಲ್ಲವೂ ನೀರಿನಲ್ಲಿ ಹೋಮ ಮಾಡಿದ್ದಂತಾಗುತ್ತದೆ. ಹೌದು, ಭಾರತೀಯ ಮೂಲದ ಉದ್ಯಮಿ ಮತ್ತು ಕ್ಲೀನ್ ವಾಟರ್ ಸ್ಟಾರ್ಟ್‌ಅಪ್ ಗ್ರೇಡಿಯಂಟ್‌ನ ಸಹ-ಸಂಸ್ಥಾಪಕ ಹಾಗೂ ಸಿಇಒ ಅನುರಾಗ್ ಬಾಜಪೇಯಿ (anurag bajpeyi) ಉನ್ನತ ಮಟ್ಟದ ಐಷಾರಾಮಿ ವೇಶ್ಯಾಗೃಹ ಹಗರಣ (luxury brothel scandal) ದಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನಲೆಯಲ್ಲಿ ಭಾರತದ ಉದ್ಯಮಿಯನ್ನು ಅಮೇರಿಕಾ (america) ದಲ್ಲಿ ಬಂಧಿಸಿದ್ದಾರೆ. ಹೌದು, ಹಾರ್ವರ್ಡ್ ವಿಶ್ವವಿದ್ಯಾನಿಲಯ (Harvard university) ದ ಬಳಿ ಇರುವ ಐಷಾರಾಮಿ ಅಪಾರ್ಟ್ಮೆಂಟ್ ಗಳಲ್ಲಿ ಅಕ್ರಮ ವೇಶ್ಯಾಗೃಹ ನಡೆಸುತ್ತಿದ್ದ ಪ್ರಕರಣದಲ್ಲಿ ಇವರ ಹೆಸರು ಕೇಳಿ ಬಂದಿದೆ.
ಈ ಹೈಟೆಕ್ ವೇಶ್ಯಾಗೃಹದಲ್ಲಿ ವ್ಯಕ್ತಿಗಳು ಸಂಭೋಗಕ್ಕಾಗಿ ಒಂದು ಗಂಟೆಗೆ 600 ಡಾಲರ್ ಅಂದರೆ ಸರಿಸುಮಾರು 50 ಸಾವಿರ ರೂಪಾಯಿ ಮೊತ್ತವನ್ನು ಪಾವತಿಸಬೇಕಾಗಿತ್ತು. ಅದಲ್ಲದೇ ಈ ಹಗರಣದಲ್ಲಿ ವಿಶ್ವದ ಖ್ಯಾತ ಕಂಪನಿಗಳ ಸಿಇಒಗಳು, ವೈದ್ಯರು, ವಕೀಲರು, ಸರ್ಕಾರಿ ಗುತ್ತಿಗೆದಾರರು, ಸಾರ್ವಜನಿಕ ಅಧಿಕಾರಿಗಳು ಸೇರಿದಂತೆ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇದರಲ್ಲಿ ಗ್ರೇಡಿಯಂಟ್ ಎಂಬ ಸ್ವಚ್ಛ ನೀರಿಗೆ ಸಂಬಂಧಿಸಿದ ಸ್ಟಾರ್ಟ್‌ಅಪ್ ಭಾರತೀಯ ಮೂಲದ ಸಿಇಒ ಅನುರಾಗ್ ಬಾಜಪೇಯಿ ಭಾಗಿಯಾಗಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ. ಅದಲ್ಲದೆ, ಈ ಹೈಟೆಕ್ ವೇಶ್ಯಾಗೃಹಕ್ಕೆ ಬರುವ ವ್ಯಕ್ತಿಗಳು ಗುರುತಿನ ಚೀಟಿ, ಉದ್ಯೋಗದ ವಿವರ ಮತ್ತು ಯಾರ ಶಿಫಾರಸ್ಸಿನ ಮೂಲಕ ಬಂದಿದ್ದಾರೆ ಎಂಬ ಮಾಹಿತಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಜಂಡರ್ ರಿವೀಲ್ ಪಾರ್ಟಿಯಲ್ಲಿ ಮಗುವಿನ ತಂದೆಯಾರೆಂಬ ಗೊಂದಲ, ಗರ್ಭಪಾತಕ್ಕೆ ಕಾರಣವಾಯ್ತು
ಅದಲ್ಲದೇ, ಈ ವೇಶ್ಯಾಗೃಹ ಹಗರಣದಲ್ಲಿ ಅನುರಾಗ್ ಬಾಜಪೇಯಿ ಹೆಸರು ಕೇಳಿ ಬರುತ್ತಿದ್ದಂತೆ ಗ್ರೇಡಿಯಂಟ್ ತನ್ನ ಸಿಇಒ ಪರವಾಗಿ ನಿಂತುಕೊಳ್ಳುವ ಮೂಲಕ ಹೇಳಿಕೆ ನೀಡಿದೆ. ಹೌದು, ಗ್ರೇಡಿಯಂಟ್ ಪ್ರತಿನಿಧಿ ಫೆಲಿಕ್ಸ್ ವಾಂಗ್ ಪ್ರತಿಕ್ರಿಯೆ ನೀಡಿದ್ದು “ನಾವು ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಡುತ್ತೇವೆ. ಇದು ಸರಿಯಾದ ಸಮಯದಲ್ಲಿ ಅನುಕೂಲಕರವಾಗಿ ಪರಿಹರಿಸಲ್ಪಡುತ್ತದೆ ಎನ್ನುವ ವಿಶ್ವಾಸ ನಮಗಿದೆ. ಅದಲ್ಲದೆ ಗ್ರೇಡಿಯಂಟ್ ತಾಂತ್ರಿಕ ನಾವೀನ್ಯತೆಯಲ್ಲಿ ತನ್ನ ಶ್ರೇಷ್ಠತೆ ಮುಂದುವರಿಸುತ್ತದೆ. ಈ ಮೂಲಕ ಶುದ್ಧ ನೀರನ್ನು ನೀಡುವ ಧ್ಯೇಯದತ್ತ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Mon, 14 April 25