LSG vs CSK Highlights, IPL 2025: ಕೊನೆಗೂ ಸತತ 5 ಪಂದ್ಯಗಳ ಸೋಲಿನ ಸರಣಿ ಮುರಿದ ಸಿಎಸ್ಕೆ
Lucknow Super Giants vs Chennai Super Kings Highlights in Kannada: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2025 ರಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿತು. ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಅವರ ತವರು ಮೈದಾನದಲ್ಲಿ 5 ವಿಕೆಟ್‌ಗಳಿಂದ ಮಣಿಸಿದ ಸಿಎಸ್ಕೆ ಸತತ ಐದು ಪಂದ್ಯಗಳ ಸೋಲಿನ ಸರಣಿಯನ್ನು ಮುರಿಯಿತು.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಗೂ ತನ್ನ ಸೋಲಿನ ಸರಣಿಯನ್ನು ಮುರಿದಿದೆ. ಸತತ ಐದು ಪಂದ್ಯಗಳಲ್ಲಿ ಸೋತ ನಂತರ, ಚೆನ್ನೈ ತಂಡವು ಈ ಸೀಸನ್ನಲ್ಲಿ ಎರಡನೇ ಗೆಲುವು ದಾಖಲಿಸಿತು. ಲಕ್ನೋ ನೀಡಿದ 167 ರನ್‌ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ ಕೊನೆಯ ಓವರ್‌ನಲ್ಲಿ ಗುರಿ ಸಾಧಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನಲ್ಲಿ ಎಂಎಸ್ ಧೋನಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್‌ಗೆ ಬಂದ ಧೋನಿ 11 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ 4 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಯಿತು. ಅವರನ್ನು ಹೊರತುಪಡಿಸಿ, ಶಿವಂ ದುಬೆ 37 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದರು. ರಚಿನ್ ರವೀಂದ್ರ 37 ರನ್ ಮತ್ತು ಶೇಖ್ ರಶೀದ್ 27 ರನ್‌ಗಳ ಕಾಣಿಕೆ ನೀಡಿದರು.
LIVE NEWS & UPDATES
-
ಚೆನ್ನೈ ತಂಡಕ್ಕೆ ಗೆಲುವು
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಸೀಸನ್ನಲ್ಲಿ ತನ್ನ ಎರಡನೇ ಗೆಲುವು ಸಾಧಿಸಿದೆ. ಶಿವಂ ದುಬೆ ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟರು. ಚೆನ್ನೈ ಐದು ವಿಕೆಟ್‌ಗಳಿಂದ ಗೆಲುವು ಸಾಧಿಸಿತು.
-
ಠಾಕೂರ್ ಓವರ್‌ನಲ್ಲಿ 13 ರನ್
ಶಾರ್ದೂಲ್ ಠಾಕೂರ್ ಅವರ ಓವರ್‌ನಲ್ಲಿ 13 ರನ್ ಬಂದವು. ಕೊನೆಯ ಎಸೆತದಲ್ಲಿ ಧೋನಿಯ ಬ್ಯಾಟ್‌ನಿಂದ ಸಿಕ್ಸರ್ ಬಂತು. ಅದ್ಭುತವಾದ ಹೊಡೆತ. 18 ಎಸೆತಗಳಲ್ಲಿ 31 ರನ್ ಬೇಕಾಗಿವೆ.
-
-
ಧೋನಿ ಎರಡು ಬೌಂಡರಿ
16ನೇ ಓವರ್- ಆವೇಶ್ ಖಾನ್ ಅವರ ಓವರ್‌ನಲ್ಲಿ ಧೋನಿ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಆ ಓವರ್‌ನಲ್ಲಿ 14 ರನ್‌ಗಳು ಬಂದವು. 4 ಓವರ್‌ಗಳಲ್ಲಿ 44 ರನ್‌ಗಳು ಬೇಕಾಗಿವೆ.
-
ಚೆನ್ನೈ ಐದನೇ ವಿಕೆಟ್
ವಿಜಯ್ ಶಂಕರ್ ಒಂಬತ್ತು ರನ್ ಗಳಿಸಿ ಔಟಾದರು. ಧೋನಿ ಈಗ ಕ್ರೀಸ್‌ನಲ್ಲಿದ್ದಾರೆ.
-
ಜಡೇಜಾ ಔಟ್
ರವಿ ಬಿಷ್ಣೋಯ್ ರವೀಂದ್ರ ಜಡೇಜಾ ಅವರ ವಿಕೆಟ್ ಉರುಳಿಸಿದರು. ಜಡೇಜಾ ಕೇವಲ ಏಳು ರನ್ ಗಳಿಸಲು ಸಾಧ್ಯವಾಯಿತು. ವಿಜಯ್ ಶಂಕರ್ ಮತ್ತು ಶಿವಂ ದುಬೆ ಈಗ ಕ್ರೀಸ್‌ನಲ್ಲಿದ್ದಾರೆ.
-
-
ಚೆನ್ನೈ ಮೂರನೇ ವಿಕೆಟ್
ರಾಹುಲ್ ತ್ರಿಪಾಠಿ ಒಂಬತ್ತು ರನ್ ಗಳಿಸಿ ಔಟಾದರು. ಈಗ ಶಿವಂ ದುಬೆ ಜಡೇಜಾಗೆ ಬೆಂಬಲ ನೀಡಲು ಬಂದಿದ್ದಾರೆ. ತಂಡ ಗೆಲ್ಲಲು 67 ಎಸೆತಗಳಲ್ಲಿ 91 ರನ್ ಗಳ ಅವಶ್ಯಕತೆಯಿದೆ.
-
ರಚಿನ್ ಔಟ್
ಐಡೆನ್ ಮಾರ್ಕ್ರಾಮ್ ಚೆನ್ನೈ ತಂಡಕ್ಕೆ ಎರಡನೇ ಹೊಡೆತ ನೀಡಿದರು.ರಚಿನ್ ರವೀಂದ್ರ 37 ರನ್ ಗಳಿಸಿ ಔಟಾದರು. ಈಗ ರವೀಂದ್ರ ಜಡೇಜಾ ರಾಹುಲ್ ಬೆಂಬಲಕ್ಕೆ ಬಂದಿದ್ದಾರೆ.
-
ಶೇಖ್ ರಶೀದ್ ಔಟ್
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ವಿಕೆಟ್ ಕಳೆದುಕೊಂಡಿದೆ. ಶೇಖ್ ರಶೀದ್ 27 ರನ್ ಗಳಿಸಿ ಔಟಾದರು. ಅವೇಶ್ ಖಾನ್ ಬೌನ್ಸರ್ ನಲ್ಲಿ ಪೂರನ್ಗೆ ಸುಲಭ ಕ್ಯಾಚ್ ನೀಡಿದರು.
-
50 ರನ್ ಪೂರ್ಣ
ರಚಿನ್ ಮತ್ತು ಶೇಖ್ ರಶೀದ್ ಕೇವಲ 4.2 ಓವರ್‌ಗಳಲ್ಲಿ ತಂಡದ ಸ್ಕೋರ್ ಅನ್ನು ಐವತ್ತರ ಗಡಿ ದಾಟಿಸಿದರು. ಈ ಸೀಸನ್ನಲ್ಲಿ ಚೆನ್ನೈ ತಂಡದ ಅತ್ಯಂತ ವೇಗದ ಆರಂಭ ಇದಾಗಿದೆ.
-
ಮೂರನೇ ಓವರ್‌ನಲ್ಲಿ ಮತ್ತೆ 3 ಬೌಂಡರಿ
ಶಾರ್ದೂಲ್ ಠಾಕೂರ್ ಅವರ ಓವರ್‌ನಲ್ಲಿ ಮೂರು ಬೌಂಡರಿಗಳು ಬಂದವು. ಶೇಖ್ ರಶೀದ್ ಎರಡು ಬೌಂಡರಿಗಳನ್ನು ಹೊಡೆದರು ಮತ್ತು ರಚಿನ್ ರವೀಂದ್ರ ಒಂದು ಬೌಂಡರಿಯನ್ನು ಹೊಡೆದರು. 3 ಓವರ್‌ಗಳ ನಂತರ ಚೆನ್ನೈ ತಂಡದ ಸ್ಕೋರ್ 37 ರನ್‌ಗಳು.
-
ಚೆನ್ನೈಗೆ ವೇಗದ ಆರಂಭ
ಮೊದಲ ಓವರ್‌ನಲ್ಲಿ ಶೇಖ್ ರಶೀದ್ ಮತ್ತು ರಚಿನ್ ರವೀಂದ್ರ 10 ರನ್ ಗಳಿಸಿದರು. ರಚಿನ್ ರವೀಂದ್ರ ಎರಡು ಬೌಂಡರಿಗಳನ್ನು ಬಾರಿಸಿದರು ಮತ್ತು ಶೇಖ್ ರಶೀದ್ ಕೂಡ ತಮ್ಮ ಖಾತೆಯನ್ನು ತೆರೆದರು.
-
167 ರನ್ ಟಾರ್ಗೆಟ್
ಲಕ್ನೋ ಸೂಪರ್‌ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ಗೆ 167 ರನ್‌ಗಳ ಗುರಿ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ರಿಷಭ್ ಪಂತ್ ಅವರ 63 ರನ್‌ಗಳ ಇನ್ನಿಂಗ್ಸ್‌ನಿಂದ 166 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
-
ಸತತ 2 ವಿಕೆಟ್
ಕೊನೆಯ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಇಬ್ಬರು ಆಟಗಾರರು ಔಟಾದರು. ಎರಡೂ ಔಟ್‌ಗಳಲ್ಲಿ ಧೋನಿಯ ಕೈವಾಡವಿತ್ತು. ಮೊದಲು ಧೋನಿ ಅಬ್ದುಲ್ ಸಮದ್ ಅವರನ್ನು ರನ್ ಔಟ್ ಮಾಡಿದರು. ಪತಿರಾನ ಎಸೆದ ಮುಂದಿನ ಎಸೆತದಲ್ಲಿ ಧೋನಿ ಪಂತ್ ಕ್ಯಾಚ್ ಪಡೆದರು.
-
ಖಲೀಲ್ ದುಬಾರಿ
19ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ 16 ರನ್ ನೀಡಿದರು. ಮೂರನೇ ಎಸೆತದಲ್ಲಿ ಪಂತ್ ಅದ್ಭುತ ಸಿಕ್ಸರ್ ಬಾರಿಸಿದರು. ಅಬ್ದುಲ್ ಸಮದ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
-
ಪಂತ್ 42 ಎಸೆತಗಳಲ್ಲಿ ಅರ್ಧಶತಕ
ರಿಷಭ್ ಪಂತ್ 42 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಇದು ಪ್ರಸಕ್ತ ಸೀಸನ್ನಲ್ಲಿ ಅವರ ಮೊದಲ ಅರ್ಧಶತಕವಾಗಿದೆ. 18 ಓವರ್‌ಗಳ ನಂತರ ಲಕ್ನೋ ಸ್ಕೋರ್ 139/4.
-
ಕೊನೆಗೂ ಬಡೋನಿ ಔಟ್
ಕೊನೆಗೂ ಬಡೋನಿ ಔಟ್ ಆಗಿದ್ದಾರೆ. ಇದಕ್ಕೂ ಮುನ್ನ ಸಿಕ್ಕ ಜೀವದಾನವನ್ನು ಬಳಸಿಕೊಳ್ಳಲು ಬಡೋನಿಗೆ ಸಾಧ್ಯವಾಗಲಿಲ್ಲ. 22 ರನ್ ಗಳಿಸಿದ ನಂತರ ಬಡೋನಿ ಔಟಾದರು.
-
ಶಾನ್ ಮಾರ್ಷ್ ಬೌಲ್ಡ್
ಜಡೇಜಾ ಎಸೆತದಲ್ಲಿ ಶಾನ್ ಮಾರ್ಷ್ ಬೌಲ್ಡ್ ಆದರು. 30 ರನ್ ಗಳಿಸಿ ಶಾನ್ ಮಾರ್ಷ್ ಔಟಾದರು.
-
ಧೋನಿಗೆ ಎಚ್ಚರಿಕೆ
ನೂರ್ ಅಹ್ಮದ್ ಕೇವಲ 5 ರನ್‌ಗಳನ್ನು ನೀಡಿದರು. ಈ ಓವರ್‌ಗೆ ಮುನ್ನ ಧೋನಿ ಓವರ್‌ಗಳ ನಡುವೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಅವರಿಗೆ ಎಚ್ಚರಿಕೆ ನೀಡಲಾಗಿದೆ
-
ಜಡೇಜಾ ದುಬಾರಿ ಓವರ್
ಜಡೇಜಾ ಅವರ ಎರಡನೇ ಎಸೆತದಲ್ಲಿ ಮಾರ್ಷ್ ಬೌಂಡರಿ ಬಾರಿಸಿದರು ಮತ್ತು ನಾಲ್ಕನೇ ಎಸೆತದಲ್ಲಿ ಪಂತ್ ಬೌಂಡರಿ ಬಾರಿಸಿದರು. ಆ ಓವರ್‌ನಲ್ಲಿ 10 ರನ್‌ಗಳು ಬಂದವು.
-
ಲಕ್ನೋ 50 ರನ್ ಪೂರ್ಣ
ಲಕ್ನೋ ಸೂಪರ್‌ಜೈಂಟ್ಸ್ ಐವತ್ತು ರನ್‌ಗಳನ್ನು ಪೂರ್ಣಗೊಳಿಸಿದೆ. ಜೇಮೀ ಓವರ್ಟನ್ ಎಸೆತದಲ್ಲಿ ಪಂತ್ ಸಿಕ್ಸರ್ ಬಾರಿಸಿದರು.
-
ಪವರ್‌ಪ್ಲೇನಲ್ಲಿ ಕೇವಲ 42 ರನ್
ಅನ್ಶುಲ್ ಕಾಂಬೋಜ್ ಅವರಿಂದ ಮತ್ತೊಂದು ಅದ್ಭುತ ಓವರ್. ಕೇವಲ 8 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಪವರ್ ಪ್ಲೇನಲ್ಲಿ ಲಕ್ನೋ ತಂಡ ಕೇವಲ 42 ರನ್ ಗಳಿಸಲು ಶಕ್ತವಾಯಿತು. ಮಾರ್ಕ್ರಾಮ್ ಮತ್ತು ಪೂರನ್ ಔಟ್ ಆಗಿದ್ದಾರೆ.
-
ಪೂರನ್ ಔಟ್
ನಾಲ್ಕನೇ ಓವರ್‌ನಲ್ಲಿ ನಿಕೋಲಸ್ ಪೂರನ್ ಔಟಾದರು. ಅನ್ಶುಲ್ ಕಾಂಬೋಜ್ ಪೂರನ್ ಅವರನ್ನು ಎಲ್ ಬಿಡಬ್ಲ್ಯು ಔಟ್ ಮಾಡಿದರು. ಪೂರನ್ ಕೇವಲ 8 ರನ್ ಗಳಿಸಿ ಔಟಾದರು.
-
ಲಕ್ನೋ ಮೊದಲ ವಿಕೆಟ್
ಖಲೀಲ್ ಅಹ್ಮದ್ ಲಕ್ನೋಗೆ ಮೊದಲ ಹೊಡೆತ ನೀಡಿದರು. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಅವರು ಐಡೆನ್ ಮಾರ್ಕ್ರಾಮ್ ಅವರ ವಿಕೆಟ್ ಪಡೆದರು. ನಿಕೋಲಸ್ ಪೂರನ್ ಈಗ ಬ್ಯಾಟಿಂಗ್‌ಗೆ ಬರುತ್ತಿದ್ದಾರೆ.
-
ಚೆನ್ನೈ ಸೂಪರ್ ಕಿಂಗ್ಸ್
ಶೇಖ್ ರಶೀದ್, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ವಿಜಯ್ ಶಂಕರ್, ರವೀಂದ್ರ ಜಡೇಜಾ, ಜೇಮಿ ಓವರ್ಟನ್, ಎಂಎಸ್ ಧೋನಿ, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮತಿಶಾ ಪತಿರಾನ.
-
ಲಕ್ನೋ ಸೂಪರ್ ಜೈಂಟ್ಸ್
ಏಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಅವೇಶ್ ಖಾನ್, ಆಕಾಶ್ ದೀಪ್, ದಿಗ್ವೇಶ್ ಸಿಂಗ್ ರಾಠಿ.
-
ಟಾಸ್ ಗೆದ್ದ ಸಿಎಸ್ಕೆ ಬೌಲಿಂಗ್ ಆಯ್ಕೆ
ಟಾಸ್ ಗೆದ್ದ ಸಿಎಸ್ಕೆ ನಾಯಕ ಎಂಎಸ್ ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - Apr 14,2025 7:01 PM