IPL 2025: ಡೆಲ್ಲಿ- ಮುಂಬೈ ಪಂದ್ಯದ ವೇಳೆ ಫ್ಯಾನ್ಸ್ ನಡುವೆ ಮಾರಾಮಾರಿ; ವಿಡಿಯೋ ನೋಡಿ
IPL 2025 Fan Fight Goes Viral: ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2025ರ 29ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 12 ರನ್‌ಗಳ ಅತ್ಯಂತ ರೋಮಾಂಚಕ ಜಯ ಸಾಧಿಸಿತು. ಪಂದ್ಯದಲ್ಲಿ ಅಭಿಮಾನಿಗಳ ನಡುವೆ ಭಾರೀ ಜಗಳ ನಡೆದಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಜಗಳದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಐಪಿಎಲ್ 2025 (IPL 2025)ರ 29 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ (DC vs MI) ತಂಡವನ್ನು 12 ರನ್‌ಗಳಿಂದ ಸೋಲಿಸಿ ಈ ಲೀಗ್ನಲ್ಲಿ ಎರಡನೇ ಗೆಲುವು ದಾಖಲಿಸಿತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ತುಂಬಾ ರೋಮಾಂಚನಕಾರಿಯಾಗಿತ್ತು. ಕೊನೆಯವರೆಗೂ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಈ ಪಂದ್ಯ 19ನೇ ಓವರ್ನಲ್ಲಿ ಅಂತ್ಯಗೊಂಡಿತು. ಈ ಓವರ್ನಲ್ಲಿ ಸತತ 3 ರನೌಟ್ ಆಗುವುದರೊಂದಿಗೆ ಮುಂಬೈ ತಂಡಕ್ಕೆ ರೋಚಕ ಜಯ ಸಿಕ್ಕಿತ್ತು. ಆದಾಗ್ಯೂ ಪಂದ್ಯದ ಸಮಯದಲ್ಲಿ ಕ್ರೀಡಾಂಗಣಕ್ಕೆ ಪಂದ್ಯವನ್ನು ನೋಡಲು ಬಂದಿದ್ದ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕ್ರೀಡಾಂಗಣದಲ್ಲಿ ಮಾರಾಮಾರಿ
ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ವೇಳೆ ನಡೆದಿರುವ ಫ್ಯಾನ್ಸ್ ವಾರ್ನ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ . ಈ ವಿಡಿಯೋದಲ್ಲಿರುವಂತೆ ಅಭಿಮಾನಿಗಳಿ ಮಹಿಳೆಯರು ಪುರುಷರು ಎಂಬುದನ್ನು ಲೆಕ್ಕಿಸದೆ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಅದರಲ್ಲೂ ಈ ಹೊಡೆದಾಟದಲ್ಲಿ ಮಹಿಳಾ ಅಭಿಮಾನಿಯೊಬ್ಬರು, ಪುರುಷ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆದರೆ, ಈ ಹೊಡೆದಾಟಕ್ಕೆ ನಿಜವಾದ ಕಾರಣ ಏನು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಅಂತಿಮವಾಗಿ ಈ ಹೊಡೆದಾಟವನ್ನು ನಿಯಂತ್ರಣಕ್ಕೆ ತರಲು ಭದ್ರತಾ ಸಿಬ್ಬಂದಿಯೇ ಮಧ್ಯಪ್ರವೇಶಿಸಬೇಕಾಯಿತು. ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಇದಕ್ಕೂ ಮೊದಲು, ಏಪ್ರಿಲ್ 8 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಸಮಯದಲ್ಲಿಯೂ ಅಭಿಮಾನಿಗಳ ನಡುವೆ ಜಗಳ ನಡೆದಿತ್ತು.
A fight between fans at the Arun Jaitley stadium last night. pic.twitter.com/UYXmAZbg1c
— Mufaddal Vohra (@mufaddal_vohra) April 14, 2025
ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು
ಈ ಪಂದ್ಯ ಮುಂಬೈ ಇಂಡಿಯನ್ಸ್‌ಗೆ ತುಂಬಾ ವಿಶೇಷವಾಗಿತ್ತು. ಕೈಯಿಂದ ಜಾರಿದ್ದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಮುಂಬೈ ಕೊನೆಗೂ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಡೆಲ್ಲಿ ತಂಡ 19 ಓವರ್‌ಗಳಲ್ಲಿ 193 ರನ್ ಕಲೆಹಾಕಿ ಆಲೌಟ್ ಆಯಿತು. ಒಂದು ಹಂತದಲ್ಲಿ ಡೆಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತ್ತು. ಆದರೆ ಇದಾದ ನಂತರ ಮುಂಬೈ ತಂಡವು ಬಲವಾದ ಪುನರಾಗಮನ ಮಾಡಿ ಸೀಸನ್ನ ಎರಡನೇ ಜಯ ಸಾಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ