ಆರ್‌ಸಿಬಿ ಡ್ರೆಸ್ಸಿಂಗ್ ಕೋಣೆಯಲ್ಲಿ ಕೊಹ್ಲಿ ಬ್ಯಾಟ್ ನಾಪತ್ತೆ..! ಆಮೇಲೇನಾಯ್ತು? ವಿಡಿಯೋ ನೋಡಿ
Virat Kohli: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಗೆಲುವು ಸಾಧಿಸಿತು. ಆದರೆ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅವರ ಬ್ಯಾಟ್ ಕಾಣೆಯಾದ ಘಟನೆ ನಡೆದಿದೆ. ತಂಡದ ಸಹ ಆಟಗಾರ ಟಿಮ್ ಡೇವಿಡ್ ತಮಾಷೆಗಾಗಿ ಕೊಹ್ಲಿ ಬ್ಯಾಟ್ ಅನ್ನು ತನ್ನ ಬ್ಯಾಗಿನಲ್ಲಿ ಮರೆಮಾಡಿದ್ದರು. ಆದರೆ ಆ ನಂತರ ಡೇವಿಡ್ ನಂತರ ಬ್ಯಾಟ್ ಅನ್ನು ಕೊಹ್ಲಿಗೆ ಹಿಂದಿರುಗಿಸಿದರು.

ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಐಪಿಎಲ್ (IPL 2025) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 9 ವಿಕೆಟ್‌ಗಳ ಅಮೋಘ ಜಯ ಸಾಧಿಸಿತು. ಈ ಪಂದ್ಯದಲ್ಲಿ ಆರ್‌ಸಿಬಿ ಪರ ಗೆಲುವಿನ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ (Virat Kohli) ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಯನ್ನು ನಿರ್ಮಿಸಿದರು. ಆದರೆ ಪಂದ್ಯ ಮುಗಿದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಡ್ರೆಸ್ಸಿಂಗ್ ಕೋಣೆಯಲ್ಲಿ ತಮಾಷದಾಯಕ ಘಟನೆ ನಡೆದಿದ್ದು, ಈ ಘಟನೆಯಿಂದ ಸ್ವತಃ ವಿರಾಟ್ ಕೊಹ್ಲಿಯೇ ಒಂದು ಕ್ಷಣ ಆಘಾತಕ್ಕೊಳಗಾದರು.
ಕೊಹ್ಲಿಯ 1 ಬ್ಯಾಟ್ ನಾಪತ್ತೆ
ವಾಸ್ತವವಾಗಿ, ರಾಜಸ್ಥಾನ್ ವಿರುದ್ಧದ ಪಂದ್ಯದ ನಂತರ ಕೊಹ್ಲಿ ತಮ್ಮ ಕಿಟ್ ಪ್ಯಾಕ್ ಮಾಡುವಾಗ ಅವರ ಒಂದು ಬ್ಯಾಟ್ ಕಿಟ್ ಬ್ಯಾಗ್ನಿಂದ ಕಾಣೆಯಾಗಿದೆ. ಕೊಹ್ಲಿ ಕಿಟ್‌ಬ್ಯಾಗ್‌ನಲ್ಲಿ 7 ಬ್ಯಾಟ್‌ಗಳಲ್ಲಿ ಒಂದು ಬ್ಯಾಟ್ ನಾಪತ್ತೆಯಾಗಿತ್ತು. ಪಂದ್ಯದ ನಂತರ ಕಿಟ್ ಪ್ಯಾಕ್ ಮಾಡುವಾಗ ಕೇವಲ 6 ಬ್ಯಾಟ್‌ಗಳು ಇರುವುದನ್ನು ಗಮನಿಸಿದ ಕೊಹ್ಲಿ ಇನ್ನೊಂದು ಬ್ಯಾಟ್ ಎಲ್ಲಿ ಹೋಯಿತು ಎಂದು ಹುಡುಕಾಟ ನಡೆಸಲು ಶುರು ಮಾಡಿದ್ದಾರೆ. ಕೊಹ್ಲಿ ಎಷ್ಟೇ ಹುಡುಕಿದರು ಆ ಬ್ಯಾಟ್ ಸಿಕ್ಕಿಲ್ಲ.
ಅಷ್ಟಕ್ಕೂ ನಡೆದಿರುವುದೇನೆಂದರೆ ಕೊಹ್ಲಿಯ ಕಿಟ್‌ಬ್ಯಾಗ್‌ನಿಂದ ಒಂದು ಬ್ಯಾಟ್ ಅನ್ನು ಎಗರಿಸಿದ್ದ ತಂಡದ ಸಹ ಆಟಗಾರ ಟಿಮ್ ಡೇವಿಡ್ ಆ ಬ್ಯಾಟ್ ಅನ್ನು ತನ್ನ ಕಿಟ್‌ಬ್ಯಾಗ್‌ನಲ್ಲಿ ಮರೆಮಾಡಿದ್ದರು. ಈ ವಿಚಾರ ಗೊತ್ತಿಲ್ಲದ ಕೊಹ್ಲಿ ಕಳೆದುಹೋಗಿರುವ ಬ್ಯಾಟ್ಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಎಷ್ಟೇ ಹುಡುಕಾಟ ಮಾಡಿದರು ಕೊಹ್ಲಿಗೆ ಆ ಬ್ಯಾಟ್ ಸಿಕ್ಕಿಲ್ಲ. ಅಂತಿಮವಾಗಿ ಚಿಂತಿತರಾಗಿದ್ದ ಕೊಹ್ಲಿ ಬಳಿಗೆ ಬಂದ ತಂಡದ ಮತ್ತೊಬ್ಬ ಆಟಗಾರ, ಟಿಮ್ ಡೇವಿಡ್ ಬ್ಯಾಗಿನಲ್ಲಿ ಬ್ಯಾಟ್ ಇರುವುದಾಗಿ ತಿಳಿಸುತ್ತಾನೆ.
𝐓𝐢𝐦 𝐃𝐚𝐯𝐢𝐝’𝐬 𝐩𝐫𝐚𝐧𝐤 𝐨𝐧 𝐕𝐢𝐫𝐚𝐭 𝐊𝐨𝐡𝐥𝐢 😂 🎀
Dressing room banter on point. What did Tim David take from Virat’s bag? Let’s find out. 😉#PlayBold #ನಮ್ಮRCB #IPL2025 pic.twitter.com/j9dIP1p2Np
— Royal Challengers Bengaluru (@RCBTweets) April 14, 2025
ಆ ಬಳಿಕ ಟಿಮ್ ಡೇವಿಡ್ ತನ್ನ ಬ್ಯಾಗ್‌ನಲ್ಲಿದ್ದ ಕೊಹ್ಲಿ ಬ್ಯಾಟ್ ಅನ್ನು ಕೊಹ್ಲಿಗೆ ಹಿಂದಿರುಗಿಸುತ್ತಾರೆ . ಆ ಬಳಿಕ ಕೊಹ್ಲಿ ಬ್ಯಾಟ್ ಅನ್ನು ಎತ್ತಿಟ್ಟುಕೊಂಡ ಬಗ್ಗೆ ಮಾತನಾಡಿದ ಟಿಮ್ ಡೇವಿಡ್, ‘ವಿರಾಟ್ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಹಾಗಾಗಿ ಅವರ ಒಂದು ಬ್ಯಾಟ್ ಕಾಣೆಯಾಗಿದೆ ಎಂದು ಅವರಿಗೆ ಅರಿವಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನೋಡೋಣ ಎಂದು ನಾವು ಭಾವಿಸಿದೆವು. ಆದರೆ ತನ್ನ ಆಟದಿಂದ ಕೊಹ್ಲಿ ತುಂಬಾ ಸಂತೋಷಗೊಂಡಿದ್ದರಿಂದ ಅವರಿಗೆ ಅದು ಅರಿವಾಗಲೇ ಇಲ್ಲ. ಹಾಗಾಗಿ ನಾನು ಅವರಿಗೆ ಬ್ಯಾಟ್ ಅನ್ನು ಹಿಂತಿರುಗಿಸಿದೆ ಎಂದಿದ್ದಾರೆ.
ಟಿ20 ಕ್ರಿಕೆಟ್‌ನ 100ನೇ ಅರ್ಧಶತಕ
ಈ ಪಂದ್ಯ ವಿರಾಟ್‌ಗೆ ಅತ್ಯಂತ ಸ್ಮರಣೀಯವಾಗಿತ್ತು. ಅವರು ಅಜೇಯ 62 ರನ್ ಗಳಿಸುವ ಮೂಲಕ ಆರ್‌ಸಿಬಿಗೆ 9 ವಿಕೆಟ್‌ಗಳ ಜಯ ತಂದುಕೊಟ್ಟರು. ಇದು ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿಯ 100ನೇ ಅರ್ಧಶತಕವಾಗಿದ್ದು, ಈ ಮೈಲಿಗಲ್ಲು ತಲುಪಿದ ವಿಶ್ವದ ಎರಡನೇ ಆಟಗಾರ ಮತ್ತು ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ