ಕೊಲೆಯಾದ ಖ್ಯಾತ ಮಾಡೆಲ್‌ನ ಕಾಲು ಫ್ರಿಡ್ಜ್‌ನಲ್ಲಿ ಪತ್ತೆ; ರುಂಡ, ಕೈಗಳು ನಾಪತ್ತೆ! ಪೊಲೀಸರಿಂದ ತೀವ್ರ ಶೋಧ

ಈ ಸುಂದರಿಯ ಕೊಲೆಗೆ ಸಂಬಂಧಪಟ್ಟಂತೆ ಶುಕ್ರವಾರ ಈಕೆಯ ಕಾಲು ಫ್ರಿಡ್ಜ್‌ನಲ್ಲಿ ಪತ್ತೆಯಾಗಿದೆ. ದೇಹದ ಉಳಿದ ಭಾಗಗಳಿಗಾಗಿ ತನಿಖೆ ಮುಂದುವರಿದಿದೆ. ಇತ್ತೀಚೆಗಷ್ಟೇ ಮ್ಯಾಗಜೀನ್​​ ಒಂದರ ಮುಖ ಪುಟದಲ್ಲಿ ಕಾಣಿಸಿಕೊಂಡಿದ್ದ ಈಕೆ ಇಂದು, ದೇಹದ ಒಂದೊಂದು ಭಾಗಗಳನ್ನು ಹುಡುಕಾಡುವ ರೀತಿಯಲ್ಲಿ ಕೊಲೆಯಾಗಿದ್ದಾಳೆ.

ಕೊಲೆಯಾದ ಖ್ಯಾತ ಮಾಡೆಲ್‌ನ ಕಾಲು ಫ್ರಿಡ್ಜ್‌ನಲ್ಲಿ ಪತ್ತೆ; ರುಂಡ, ಕೈಗಳು ನಾಪತ್ತೆ! ಪೊಲೀಸರಿಂದ ತೀವ್ರ ಶೋಧ
ಮಾಡೆಲ್ ಅಬ್ಬಿ ಚೋಯ್Image Credit source: Instagram
Follow us
ಅಕ್ಷತಾ ವರ್ಕಾಡಿ
| Updated By: Rakesh Nayak Manchi

Updated on:Feb 26, 2023 | 8:11 PM

ಹಾಂಗ್ ಕಾಂಗ್: ಹಾಂಗ್ ಕಾಂಗ್ ಜನಪ್ರಿಯ ಮಾಡೆಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸೌಂದರ್ಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದ ಅಬ್ಬಿ ಚೋಯ್(​​​28) ಇತ್ತೀಚೆಗೆ ನಾಪತ್ತೆಯಾಗಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಈಕೆಯನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಲಾಗಿದ್ದು, ಕೊಲೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಕೊಲೆಗೆ ಸಂಬಂಧಿಸಿದಂತೆ ಭಾನುವಾರ ಮೂವರನ್ನು ಬಂಧಿಸಲಾಗಿದೆ. ಆಕೆಯ ಕಾಲುಗಳು ನಗರದ ಹೊರವಲಯದಲ್ಲಿರುವ ಮನೆಯೊಂದರ ಫ್ರಿಡ್ಜ್‌ನಲ್ಲಿ, ಜೊತೆಗೆ ದೇಹಗಳನ್ನು ಛಿದ್ರಗೊಳಿಸಲು ಬಳಸಿದ ಎಲೆಕ್ಟ್ರಿಕ್ ಗರಗಸ ಕೂಡ ಪತ್ತೆಯಾಗಿದೆ.

ಇತ್ತೀಚೆಗಷ್ಟೇ ಮ್ಯಾಗಜೀನ್‌ನ ಮುಖಪುಟದಲ್ಲಿ ಈಕೆ ಕಾಣಿಸಿಕೊಂಡಿರುವ ಪೋಸ್ಟ್​​​ ಇಲ್ಲಿದೆ:

View this post on Instagram

A post shared by Abby Choi (@xxabbyc)

ಇದನ್ನೂ ಓದಿ: ಹೈದರಾಬಾದ್: ಗರ್ಲ್​​ಫ್ರೆಂಡ್​​ಗೆ ಕರೆ ಮಾಡಿದ್ದಕ್ಕೆ ಸ್ನೇಹಿತನ ಕೊಲೆ ಮಾಡಿ ಹೃದಯ ಕಿತ್ತು, ಬೆರಳು ಕತ್ತರಿಸಿದ ಯುವಕ

L’Officiel Monaco ಫ್ಯಾಷನ್ ಮ್ಯಾಗಜೀನ್‌ನ ಮುಖಪುಟದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಈಕೆಯ ಈ ಭೀಕರ ಹತ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಡ್ರೋನ್‌ಗಳು ಮತ್ತು ಅಬ್ಸೈಲಿಂಗ್ ತಂಡ ಸೇರಿದಂತೆ ಆಕೆಯ ದೇಹದ ಉಳಿದ ಭಾಗಗಳನ್ನು ಹುಡುಕುತ್ತಿದ್ದಾರೆ. ಚೋಯ್ ಮಂಗಳವಾರ ನಾಪತ್ತೆಯಾಗಿದ್ದು, ಕೊನೆಯದಾಗಿ ತೈ ಪೊ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದಾಳೆ ಎಂದು ಸಿಸಿಟಿವಿ ಮೂಲಕ ತಿಳಿದುಬಂದಿದೆ. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಮತ್ತು ಮೂವರ ಮೇಲೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸ್ ಹೇಳಿಕೆಗಳಿಂದ ತಿಳಿದುಬಂದಿದೆ. ಚೋಯ್ ಅವರ ಮಾಜಿ ಪತಿ ಅಲೆಕ್ಸ್ ಕ್ವಾಂಗ್ ಮೇಲಿನ ಅನುಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆತನನ್ನು ಶನಿವಾರ ಬಂಧಿಸಲಾಗಿದೆ. ಜೊತೆಗೆ ಆಕೆಯ ಮಾಜಿ ಗಂಡನ ಸಹೋದರ, ತಂದೆ , ತಾಯಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 6:27 pm, Sun, 26 February 23