ರಾಮನಗರ: ಅಪರಿಚಿತ ಯುವಕನ ಕತ್ತು ಕೊಯ್ದು, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ
ಗ್ರಾಮದ ಹೊರವಲಯದ ರಸ್ತೆಯಲ್ಲಿ ಅಪರಿಚಿತ ಯುವಕನನ್ನ ಕತ್ತು ಕೊಯ್ದು, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಯುವಕನ ಕೊಲೆಯ ಹಿಂದೆ ಸಾಕಷ್ಟು ಅನುಮಾನಗಳು ಮೂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಮನಗರ: ಅಪರಿಚಿತ ಯುವಕನೊಬ್ಬನ ಕತ್ತು ಕೊಯ್ದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಆನೆಹೊಸಳ್ಳಿ ಗ್ರಾಮದ ಬಳಿ ನಡೆದಿದೆ. ಸುಮಾರು 18ರಿಂದ 22 ವರ್ಷದ ಯುವಕನನ್ನ ಭೀಕರವಾಗಿ ಹತ್ಯೆ ಮಾಡಿದ್ದು, ಕೊಲೆಯ ಹಿಂದೆ ಸಾಕಷ್ಟು ಅನುಮಾನ ಮೂಡಿದೆ. ಯುವಕನ ಮೈಮೇಲೆ ಒಳಉಡುಪು ಬಿಟ್ಟರೇ ಬೇರೆ ಯಾವುದೇ ಬಟ್ಟೆಗಳು ಇಲ್ಲ. ಹತ್ಯೆ ಮಾಡುವುದಕ್ಕೂ ಮೊದಲು ಯುವಕನ್ನ ವಿವಸ್ತ್ರಗೊಳಿಸಿ, ಯಾವುದೇ ಸಣ್ಣ ಸುಳಿವು ಸಿಗಬಾರದು ಎಂದು ಆತನ ಬಟ್ಟೆಗಳನ್ನ ಎತ್ತಿಕೊಂಡು, ನಂತರ ಭೀಕರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇವತ್ತು(ಫೆ.25) ಬೆಳಗಿನ ಜಾವ ಗ್ರಾಮಸ್ಥರು ಮೃತದೇಹವನ್ನ ಕಂಡು ಹಾರೋಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಗ್ರಾಮದ ಹೊರವಲಯದಲ್ಲಿ ಅಪರಿಚಿತ ಯುಕವನ ಹತ್ಯೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಯುವಕನನ್ನ ಬೇರೆಡೆಯಿಂದ ಕರೆತಂದು ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ಇನ್ನು ಸಲಿಂಗಕಾಮ ಅಥವಾ ಹುಡುಗಿ ವಿಚಾರಕ್ಕೆ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಪ್ಲಾನ್ ಮಾಡಿ, ಪೊಲೀಸರ ಕೈಗೆ ಸಿಗಬಾರದು, ಪೊಲೀಸರ ದಿಕ್ಕು ತಪ್ಪಿಸಬೇಕು ಎಂದು ವಿವಸ್ತ್ರಗೊಳಿಸಲಾಗಿದ್ದು, ಯಾವು ಸುಳಿವನ್ನು ಕೂಡ ಹಂತಕರು ಬಿಟ್ಟಿಲ್ಲ. ಕೊಲೆ ರಹಸ್ಯವನ್ನ ಬೇಧಿಸುವ ನಿಟ್ಟಿನಲ್ಲಿ ಈಗಾಗಲೇ ಎರಡು ಪ್ರತ್ಯೇಕ ತಂಡಗಳನ್ನ ಕೂಡ ರಚನೆ ಮಾಡಲಾಗಿದ್ದು ಪೊಲೀಸರು ಕೊಲೆ ರಹಸ್ಯ ಬೇಧಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:‘ಹೈದರಾಬಾದ್: ಗರ್ಲ್ಫ್ರೆಂಡ್ಗೆ ಕರೆ ಮಾಡಿದ್ದಕ್ಕೆ ಸ್ನೇಹಿತನ ಕೊಲೆ ಮಾಡಿ ಹೃದಯ ಕಿತ್ತು, ಬೆರಳು ಕತ್ತರಿಸಿದ ಯುವಕ
ಒಟ್ಟಾರೆ ಅಪರಿಚಿತ ಯುವಕನ ಭೀಕರ ಹತ್ಯೆ ಜಿಲ್ಲೆಯ ಜನರನ್ನ ಬೆಚ್ಚಿ ಬೀಳುವಂತೆ ಮಾಡಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಹಂತರಕ ಬೇಟೆಗೆ ಮುಂದಾಗಿದ್ದಾರೆ. ಈ ಕೊಲೆಯಲ್ಲಿ ಯಾವುದೇ ಸುಳಿವು ಇಲ್ಲದೆ ಇರುವುದು ಪೊಲೀಸರಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ.
ವರದಿ: ಪ್ರಶಾಂತ್ ಹುಲಿಕೆರೆ ಟಿವಿ9 ರಾಮನಗರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ