ಎಸ್ಯುವಿ ಕಾರಿನಲ್ಲಿ ಪತ್ತೆಯಾದ ಶವ ಹಾಗೂ ರಕ್ತದ ಕಲೆಗಳು ಜುನೈದ್ ಹಾಗೂ ನಾಸಿರ್ ಅವರದ್ದು: ಫಾರೆನ್ಸಿಕ್ ವರದಿ
ಹರ್ಯಾಣದಲ್ಲಿ ಎಸ್ಯುವಿ ಕಾರೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹಗಳು ಹಾಗೂ ರಕ್ತದ ಕಲೆಗಳು ಜುನೈದ್ ಹಾಗೂ ನಾಸಿರ್ ಅವರದ್ದು ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ.
ಹರ್ಯಾಣದಲ್ಲಿ ಎಸ್ಯುವಿ ಕಾರೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹಗಳು ಹಾಗೂ ರಕ್ತದ ಕಲೆಗಳು ಜುನೈದ್ ಹಾಗೂ ನಾಸಿರ್ ಅವರದ್ದು ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ. ಅಪಹರಣಕ್ಕೊಳಗಾಗಿದ್ದ ರಾಜಸ್ಥಾನದ ಭರತ್‌ಪುರ ಮೂಲದ ಪುರುಷರ ಶವಗಳು ಫೆಬ್ರವರಿ 16 ರಂದು ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ವಾಹನದೊಳಗೆ ಪತ್ತೆಯಾಗಿತ್ತು, ಮೃತರ ಕುಟುಂಬ ಸದಸ್ಯರು ಬಜರಂಗದಳದ ಕಾರ್ಯಕರ್ತರು ತಮ್ಮ ಮಕ್ಕಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿಯು ಜಿಂದ್ (ಹರ್ಯಾಣ)ನಲ್ಲಿ ಎಸ್ಯುವಿ ಕಾರಿನಲ್ಲಿ ಪತ್ತೆಯಾದ ದೇಹ ಹಾಗೂ ರಕ್ತದ ಕಲೆಗಳು ನಾಸಿರ್ ಮತ್ತು ಜುನೈದ್ ಅವರದ್ದು ಎಂದು ದೃಢಪಡಿಸುತ್ತದೆ ಎಂದು ಭರತ್‌ಪುರ ರೇಂಜ್ ಐಜಿ ಗೌರವ್ ಶ್ರೀವಾಸ್ತವ್ ಹೇಳಿದ್ದಾರೆ.
ಸುಟ್ಟ ವಾಹನವು ಚಾಸಿಸ್ ಸಂಖ್ಯೆಗೆ ಹೊಂದಿಕೆಯಾಗುತ್ತಿದೆ ಎಂದು ಅವರು ಹೇಳಿದರು, ಆದರೆ ಒಳಗೆ ಇದ್ದ ದೇಹಗಳನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಸ್ಥಳದಿಂದ ಎಫ್‌ಎಸ್‌ಎಲ್ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ನಾಸಿರ್ ಮತ್ತು ಜುನೈದ್ ಅವರ ಕುಟುಂಬದ ಸದಸ್ಯರ ರಕ್ತದ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದ್ದು, ಎಸ್‌ಯುವಿಯಲ್ಲಿ ಕಂಡುಬಂದ ರಕ್ತದ ಕಲೆಗಳು ಮತ್ತು ಸುಟ್ಟ ವಾಹನದಲ್ಲಿ ಪತ್ತೆಯಾದ ಮೂಳೆಗಳು ಹೊಂದಾಣಿಕೆಯಾಗುತ್ತವೆ.
ಮತ್ತಷ್ಟು ಓದಿ: ಹಣ, ಒಡವೆ ಆಸೆಗೆ ಕೊಲೆ ಆರೋಪ; ಹಾಡಹಗಲೇ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು
ವರದಿಯು ಈಗ ಎರಡೂ ಶವಗಳ ಗುರುತನ್ನು ದೃಢಪಡಿಸಿದೆ ಎಂದು ಅವರು ಹೇಳಿದರು. ತನಿಖೆಯ ಸಮಯದಲ್ಲಿ, SUV ಜಿಂದ್‌ನಲ್ಲಿ ಪತ್ತೆಯಾಗಿದೆ, ಇದರಲ್ಲಿ ಸುಟ್ಟ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ, ಅಪಹರಿಸಿ ಥಳಿಸಿ ಬಳಿಕ ಹತ್ಯೆಮಾಡಲಾಗಿದೆ ಎಂಬುದು ತಿಳಿದುಬಂದಿದೆ. ಆರೋಪಿಗಳನ್ನು ಹಿಡಿಯಲು ಹರ್ಯಾಣ ಪೊಲೀಸರು ಬಲೆ ಬೀಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:51 am, Mon, 27 February 23