ಪತಿ ಮತ್ತು ಅತ್ತೆಯನ್ನು ಕೊಂದು ತುಂಡು ಮಾಡಿ ಫ್ರಿಡ್ಜ್ನಲ್ಲಿರಿಸಿದ ಅಸ್ಸಾಂ ಮಹಿಳೆ; ಮೇಘಾಲಯದಲ್ಲಿ ಮೃತದೇಹ ವಿಲೇವಾರಿ
ಪ್ರಮುಖ ಶಂಕಿತ ಆರೋಪಿ ಕೊಲೆ ಕೃತ್ಯವೆಸಗಿದ ನಂತರ ಗುವಾಹಟಿಯ ನೂನ್ಮತಿ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಮತ್ತು ಅವನ ತಾಯಿಯ ಬಗ್ಗೆ ಕಾಣೆಯಾದವರ ವರದಿಯನ್ನು ಸಲ್ಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುವಾಹಟಿ: ಗುವಾಹಟಿಯಲ್ಲಿ (Guwahati) ಮಹಿಳೆಯೊಬ್ಬರು ಆಕೆಯ ಪತಿ ಮತ್ತು ಅತ್ತೆಯನ್ನು ಕೊಂದು, ಅವರ ದೇಹಗಳನ್ನು ಕತ್ತರಿಸಿ ಮೂರು ದಿನಗಳ ಕಾಲ ಮನೆಯಲ್ಲಿ ಫ್ರಿಡ್ಜ್‌ನಲ್ಲಿ ಇರಿಸಿದ ಪ್ರಕರಣ ವರದಿ ಆಗಿದೆ. ಮಹಿಳೆಯನ್ನು ಬಂಧಿಸಲಾಗಿದೆ. ತುಂಡರಿಸಿದ ಮೃತದೇಹಗಳನ್ನು ಆಕೆ ನೆರೆಯ ಮೇಘಾಲಯದಲ್ಲಿ(Meghalaya) ವಿಲೇವಾರಿ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಬಂದನಾ ಕಲಿತಾ ಎಂದು ಗುರುತಿಸಲಾದ ಮಹಿಳೆಯನ್ನು ಆಕೆ ಸಂಬಂಧದಲ್ಲಿದ್ದ ವ್ಯಕ್ತಿ ಧಂಜಿತ್ ದೇಕಾ ಮತ್ತು ಆಕೆಯ ಸ್ನೇಹಿತ ಅರೂಪ್ ದಾಸ್ ಅವರೊಂದಿಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇಬ್ಬರ ಸಾವಿಗೆ ಕಾರಣವಾದ ಘಟನೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಸಿಕ್ಕಿಲ್ಲ.
ಅಮರೇಂದ್ರ ಡೇ ಮತ್ತು ಅವರ ತಾಯಿ ಶಂಕರಿ ಡೇ ಅವರು ಏಳು ತಿಂಗಳ ಹಿಂದೆ ಕೊಲ್ಲಲ್ಪಟ್ಟರು. “ನಾವು ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ ಮತ್ತು ಈಗ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ” ಎಂದು ಗುವಾಹಟಿ ಪೊಲೀಸ್ ಕಮಿಷನರ್ ದಿಗಂತ ಬರಾಹ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪ್ರಮುಖ ಶಂಕಿತ ಆರೋಪಿ ಕೊಲೆ ಕೃತ್ಯವೆಸಗಿದ ನಂತರ ಗುವಾಹಟಿಯ ನೂನ್ಮತಿ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಮತ್ತು ಅವನ ತಾಯಿಯ ಬಗ್ಗೆ ಕಾಣೆಯಾದವರ ವರದಿಯನ್ನು ಸಲ್ಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ.
ಇದನ್ನೂ ಓದಿ: ವಿಜಯನಗರ: ಪತ್ನಿಯ ಮೇಲೆ ಅನುಮಾನ, ಮಲಗಿದ್ದ ವೇಳೆ ಹೊಡೆದು ಕೊಂದ ಪತಿ
ಸ್ವಲ್ಪ ಸಮಯದ ನಂತರ, ಅಮರೇಂದ್ರ ಅವರ ಸೋದರಸಂಬಂಧಿ ಮತ್ತೊಂದು ಕಾಣೆಯಾದ ದೂರನ್ನು ದಾಖಲಿಸಿದರು, ಇದು ಹೆಂಡತಿಯ ಬಗ್ಗೆ ಅನುಮಾನವನ್ನು ಹುಟ್ಟುಹಾಕಿತು. ನಂತರ ನಾವು ನಮ್ಮ ತನಿಖೆಯನ್ನು ಪುನಃ ಪ್ರಾರಂಭಿಸಿದ್ದೇವೆ ಮತ್ತು ಕೊಲೆ ಪ್ರಕರಣ ಪತ್ತೆಹಚ್ಚಿದ್ದೇವೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ದಿಗಂತ ಕುಮಾರ್ ಚೌಧರಿ ಪಿಟಿಐಗೆ ತಿಳಿಸಿದ್ದಾರೆ.
ಶವಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಪಾಲಿಥಿನ್ ಚೀಲಗಳಲ್ಲಿ ಪ್ಯಾಕ್ ಮಾಡಿ ಮತ್ತು ಚೀಲಗಳನ್ನು ಮೇಘಾಲಯಕ್ಕೆ ತೆಗೆದುಕೊಂಡು ಅಲ್ಲಿ ಅರಣ್ಯ ಪ್ರದೇಶದಲ್ಲಿ ಎಸೆಯಲಾಯಿತು ಎಂದು ಆರೋಪಿ ಹೇಳಿರುವುದಾಗಿ ಚೌಧರಿ ಹೇಳಿದರು. “ನಾವು ಮೃತದೇಹಗಳನ್ನು ಪತ್ತೆಹಚ್ಚಿದ್ದೇವೆ. ನಿನ್ನೆ ಮೇಘಾಲಯದಿಂದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದೇವೆ. ಮೃತ ಇಬ್ಬರ ದೇಹಗಳು ಅಥವಾ ದೇಹದ ಎಲ್ಲಾ ಭಾಗಗಳನ್ನು ಹುಡುಕಲು ನಮ್ಮ ಕಾರ್ಯಾಚರಣೆ ನಡೆಯುತ್ತಿದೆ ಎಂದಿದ್ದಾರೆ ಅವರು. ವಿಚಾರಣೆಗಾಗಿ ಫೆಬ್ರವರಿ 17 ರಂದು ಕಲಿಯಾ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ