ವಿಜಯನಗರ: ಪತ್ನಿಯ ಮೇಲೆ ಅನುಮಾನ, ಮಲಗಿದ್ದ ವೇಳೆ ಹೊಡೆದು ಕೊಂದ ಪತಿ
ಅವರಿಬ್ಬರಿಗೂ ಮದುವೆಯಾಗಿ 16 ವರ್ಷವಾಗಿತ್ತು, ಜೊತೆಗೆ ಮೂರು ಮಕ್ಕಳೂ ಸಹ ಇದ್ದರು. ಅದರೆ ಅನುಮಾನ ಅನ್ನೋ ಭೂತ ಪತಿರಾಯನ ತಲೆಯಲ್ಲಿ ಸುಳಿತಾನೇ ಇತ್ತು. ಪತ್ನಿಯ ನಡತೆ ಮೇಲೆ ಸಂಶಯ ಪಡುತ್ತಿದ್ದ ಗಂಡ ಪತ್ನಿಯ ತಲೆಯನ್ನೆ ಸೀಳಿದ್ದಾನೆ.
ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರದಾಪುರ ಗ್ರಾಮದ ಭಂಗಿ ಮಲ್ಲಪ್ಪ ಹಾಗೂ ಆತನ ಪತ್ನಿ ಲಕ್ಷ್ಮೀ ಮದುವೆಯಾಗಿ 16 ವರ್ಷ ಕಳೆದಿದೆ. ಮಲ್ಲಪ್ಪನ ಜೊತೆ ಸುಖವಾಗಿ ಸಂಸಾರ ಹೊಂದಿದ್ದ ಲಕ್ಷ್ಮೀಗೆ ಇಬ್ಬರು ಗಂಡು, ಓರ್ವ ಹೆಣ್ಣು ಮಗುವಿದೆ. ಆದ್ರೆ ಗಂಡ ಮಲ್ಲಪ್ಪನಿಗೆ ಪತ್ನಿಯ ನಡತೆಯ ಮೇಲೆ ಅನುಮಾನ ಶುರುವಾಗಿದೆ. ಆಗಾಗ ಪತ್ನಿಯ ಜೊತೆ ಜಗಳ ಮಾಡುತ್ತಿದ್ದ ಮಲ್ಲಪ್ಪ ನಿನ್ನೆ(ಫೆ.18) ರಾತ್ರಿ ಪತ್ನಿ ತಲೆಯನ್ನೆ ಸೀಳಿ ಹಾಕಿದ್ದಾನೆ. ಮಲಗಿದ್ದ ಪತ್ನಿಯ ತಲೆಗೆ ಹೊಡೆದು ಹತ್ಯೆ ಮಾಡಿರುವ ಮಲ್ಲಪ್ಪ ಪತ್ನಿ ಸಾವನ್ನಪ್ಪುತ್ತಿದ್ದಂತೆ ಪರಾರಿಯಾಗಿದ್ದ.
ಊರಲ್ಲಿ ವ್ಯವಸಾಯ ಮಾಡುತ್ತಾ. ರಾಜಿ ಪಂಚಾಯತಿ ಮಾಡುತ್ತಿದ್ದ ಮಲ್ಲಪ್ಪ ಪತ್ನಿಯ ವಿಚಾರದಲ್ಲಿ ಅನುಮಾನ ಹೊಂದಿದ್ದ. ಮಾವನ ಮಗಳನ್ನ ಮದುವೆಯಾಗಿದ್ದ ಮಲ್ಲಪ್ಪ ಮೂರು ಮಕ್ಕಳಾದ ಮೇಲೂ ಅನುಮಾನ ಪಡುತ್ತಿದ್ದ. ಇದೇ ವಿಚಾರವಾಗಿ ರಾತ್ರಿ ಪತ್ನಿ ಊಟ ಮಾಡಿ ಮನೆಯಲ್ಲಿ ಮಲಗಿದ್ದ ವೇಳೆ ಹಾರಿಕೋಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದ. ಇದೀಗ ಮಲ್ಲಪ್ಪನನ್ನ ಮರಿಯಮ್ಮನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಘಟನೆಯ ನಂತರ ಸುದ್ದಿ ತಿಳಿಯುತ್ತಿದ್ದಂತೆ ಲಕ್ಷ್ಮೀ ಪೋಷಕರು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನ್ಯಾಯ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ:ವಿಜಯನಗರ: ಅನೈತಿಕ ಸಂಬಂಧದ ಶಂಕೆ, ಪ್ರಶ್ನಿಸಿದ ಪತ್ನಿಯನ್ನ ಕೊಂದು ತಾನು ನೇಣಿಗೆ ಶರಣಾದ ಪತಿ
ಕಳೆದ ಹತ್ತು ವರ್ಷದ ಹಿಂದೆ ಅಪಘಾತದಿಂದ ತಲೆಗೆ ಗಾಯವಾದ ನಂತರ ಆರೋಪಿ ಮಲ್ಲಪ್ಪ ಸೈಕೋ ರೀತಿ ವರ್ತನೆ ಮಾಡುತ್ತಿದ್ದನಂತೆ. ಇದರಿಂದಾಗಿ ಪತ್ನಿಯ ಮೇಲೆ ಅನುಮಾನ ಪಟ್ಟು ಇದೀಗ ಪತ್ನಿಯನ್ನೆ ಹತ್ಯೆ ಮಾಡಿ ಕಂಬಿ ಪಾಲಾಗಿದ್ದಾನೆ. ಇದೀಗ ಮೂರು ಮಕ್ಕಳು ಅನಾಥರಾಗಿದ್ದು ಗ್ರಾಮದಲ್ಲಿ ಸಶ್ಮಾನ ಮೌನ ಆವರಿಸಿದೆ.
ವರದಿ: ವಿರೇಶ್ ದಾನಿ ಟಿವಿ9 ವಿಜಯನಗರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Mon, 20 February 23