ಹೈದರಾಬಾದ್: ಗರ್ಲ್​​ಫ್ರೆಂಡ್​​ಗೆ ಕರೆ ಮಾಡಿದ್ದಕ್ಕೆ ಸ್ನೇಹಿತನ ಕೊಲೆ ಮಾಡಿ ಹೃದಯ ಕಿತ್ತು, ಬೆರಳು ಕತ್ತರಿಸಿದ ಯುವಕ

ಫೆಬ್ರವರಿ 17 ರಂದು ಇಬ್ಬರೂ ಮದ್ಯ ಸೇವಿಸಿ ಭಾರೀ ಜಗಳವಾಡಿದ್ದಾರೆ. ಈ ಜಗಳದಲ್ಲಿ ಕೃಷ್ಣ ನವೀನ್‌ನನ್ನು ಹತ್ಯೆಗೈದಿದ್ದಾನೆ. ಆರೋಪಿ ಕೃಷ್ಣ ನವೀನನ ತಲೆಯನ್ನು ಬೇರ್ಪಡಿಸಿ, ಅವನ ಖಾಸಗಿ ಭಾಗಗಳು, ಹೃದಯ ಮತ್ತು ಕತ್ತರಿಸಿದ ಬೆರಳುಗಳನ್ನು ತೆಗೆದುಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ

ಹೈದರಾಬಾದ್: ಗರ್ಲ್​​ಫ್ರೆಂಡ್​​ಗೆ ಕರೆ ಮಾಡಿದ್ದಕ್ಕೆ ಸ್ನೇಹಿತನ ಕೊಲೆ ಮಾಡಿ ಹೃದಯ ಕಿತ್ತು, ಬೆರಳು ಕತ್ತರಿಸಿದ ಯುವಕ
Crime Scene
Follow us
ರಶ್ಮಿ ಕಲ್ಲಕಟ್ಟ
|

Updated on:Feb 26, 2023 | 1:37 PM

ಹೈದರಾಬಾದ್: ತನ್ನ ಗರ್ಲ್​​ಫ್ರೆಂಡ್​​ಗೆ ಸಂದೇಶ ಮತ್ತು ಕರೆ ಮಾಡಿದ್ದಕ್ಕಾಗಿ 22 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನನ್ನು ಕೊಂದ ಘಟನೆ ಹೈದರಾಬಾದ್​​ನಿಂದ(Hyderabad) ವರದಿ ಆಗಿದೆ. ಹತ್ಯೆಯಾದ ವ್ಯಕ್ತಿಯೊಂದಿಗೆ ಆರೋಪಿ ಯುವಕನ ಗರ್ಲ್​​ಫ್ರೆಂಡ್​​ಗೆ(Girlfriend) ಪ್ರೇಮಸಂಬಂಧವಿತ್ತು. ಈ ಕೊಲೆ ಅದೆಷ್ಟು ಪೈಶಾಚಿಕವಾಗಿತ್ತೆಂದರೆ ಆರೋಪಿ ತನ್ನ ಸ್ನೇಹಿತನ ಶಿರಚ್ಛೇದ ಮಾಡಿ, ಆತನ ಹೃದಯ ಮತ್ತು ಖಾಸಗಿ ಅಂಗಗಳನ್ನು ತೆಗೆದು, ಬೆರಳುಗಳನ್ನು ಕತ್ತರಿಸಿದ್ದ. ನಂತರ ತಾನೇ ಶರಣಾಗಲು ಶನಿವಾರ ಪೊಲೀಸ್ ಠಾಣೆಗೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವರವಾದ ತನಿಖೆ ಕೈಗೊಂಡಿದ್ದು, ಮೃತದೇಹವನ್ನು ಶವಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಪೊಲೀಸರ ಪ್ರಕಾರ, ನವೀನ್ ಮತ್ತು ಹರಿಹರ ಕೃಷ್ಣ ಅವರು ದಿಲ್‌ಸುಖ್‌ನಗರದ ಕಾಲೇಜಿನಲ್ಲಿ ತಮ್ಮ ಇಂಟರ್‌ಮೀಡಿಯೇಟ್ ಅನ್ನು ಒಟ್ಟಿಗೆ ಮುಗಿಸಿದ್ದಾರೆ. ಘಟನೆಯ ಕೇಂದ್ರಬಿಂದುವಾಗಿರುವ ಹುಡುಗಿಯೂ ಅದೇ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು.

ಇಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು, ಆದರೆ ನವೀನ್ ಮೊದಲು ಆಕೆಗೆ ಪ್ರೊಪೋಸ್ ಮಾಡಿದ್ದು ಅದನ್ನು ಆಕೆ ಒಪ್ಪಿಕೊಂಡಿದ್ದಳು.ಒಂದೆರಡು ವರ್ಷಗಳ ನಂತರ ಇಬ್ಬರೂ ಬೇರೆಯಾದರು. ಇದಾದ ನಂತರ ಹುಡುಗಿ ಹರಿಹರ ಕೃಷ್ಣನ ಗರ್ಲ್ ಫ್ರೆಂಡ್ ಆಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:ವಿಜಯಪುರ: ಗುಡಿಸಲಿಗೆ ಆಕಸ್ಮಿಕ ಬೆಂಕಿ, ಮಲಗಿದ್ದಲ್ಲೇ ಸುಟ್ಟು ಕರಕಲಾದ ವೃದ್ಧ ದಂಪತಿ

ಲವ್ ಬ್ರೇಕ್ ಅಪ್ ಆಗಿದ್ದರೂ ನವೀನ್ ಹುಡುಗಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಕೆಗೆ ಸಂದೇಶ ಮತ್ತು ಕರೆಗಳನ್ನು ಮಾಡುತ್ತಿದ್ದ, ಇದು ಕೃಷ್ಣನನ್ನು ತೀವ್ರವಾಗಿ ಅಸಮಾಧಾನಗೊಳಿಸಿತು. ಸ್ನೇಹಿತನ ಮೇಲೆ ಸಿಟ್ಟು ತೀರಿಸಲು ಅವಕಾಶಕ್ಕಾಗಿ ಮೂರು ತಿಂಗಳಿಗೂ ಹೆಚ್ಚು ಕಾಲ ಕಾದಿದ್ದ ಕೃಷ್ಣ.

ಫೆಬ್ರವರಿ 17 ರಂದು ಇಬ್ಬರೂ ಮದ್ಯ ಸೇವಿಸಿ ಭಾರೀ ಜಗಳವಾಡಿದ್ದಾರೆ. ಈ ಜಗಳದಲ್ಲಿ ಕೃಷ್ಣ ನವೀನ್‌ನನ್ನು ಹತ್ಯೆಗೈದಿದ್ದಾನೆ. ಆರೋಪಿ ಕೃಷ್ಣ ನವೀನನ ತಲೆಯನ್ನು ಬೇರ್ಪಡಿಸಿ, ಅವನ ಖಾಸಗಿ ಭಾಗಗಳು, ಹೃದಯ ಮತ್ತು ಕತ್ತರಿಸಿದ ಬೆರಳುಗಳನ್ನು ತೆಗೆದುಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೇ ಅಲ್ಲ ಕೊಲೆ ಮಾಡಿದ ನಂತರ ಅದರ ಫೋಟೊ ತೆಗೆದು ಈತ ಗರ್ಲ್​​ಫ್ರೆಂಡ್​​ಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:34 pm, Sun, 26 February 23

ಮನೆಯಲ್ಲಿ ಕೆಲವು ವಸ್ತುಗಳನ್ನು ಭೂಮಿ ಮೇಲೆ ಇಡಬಾರದು: ಇದೆ ಅಧ್ಯಾತ್ಮ ಕಾರಣ!
ಮನೆಯಲ್ಲಿ ಕೆಲವು ವಸ್ತುಗಳನ್ನು ಭೂಮಿ ಮೇಲೆ ಇಡಬಾರದು: ಇದೆ ಅಧ್ಯಾತ್ಮ ಕಾರಣ!
ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲ!
ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲ!
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ