Karwar: ಪತ್ನಿಯನ್ನ ಕೊಂದು ಬ್ಯಾರೆಲ್​​ನಲ್ಲಿ ಬಚ್ಚಿಟ್ಟ ಪತಿರಾಯ, ಮನೆ ಖಾಲಿ ಮಾಡುವಾಗ ಭಯಾನಕ ಘಟನೆ ಬಯಲಿಗೆ

ಪತಿ, ಪತ್ನಿಯನ್ನು ಕೊಲೆ ಮಾಡಿ ನೀರು ತುಂಬುವ ಬ್ಯಾರಲ್ ನಲ್ಲಿ ಬಚ್ಚಿಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರಗಾಂವನಲ್ಲಿ ನಡೆದಿದೆ.

Karwar: ಪತ್ನಿಯನ್ನ ಕೊಂದು ಬ್ಯಾರೆಲ್​​ನಲ್ಲಿ ಬಚ್ಚಿಟ್ಟ ಪತಿರಾಯ, ಮನೆ ಖಾಲಿ ಮಾಡುವಾಗ ಭಯಾನಕ ಘಟನೆ ಬಯಲಿಗೆ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on: Feb 26, 2023 | 1:13 PM

ಕಾರವಾರ: ದೆಹಲಿಯ ಶ್ರದ್ಧಾ ಹತ್ಯೆ ಬಳಿಕ ಕರ್ನಾಟಕದಲ್ಲೂ ಇದೇ ರೀತಿಯಾಗಿ ಸದ್ದಿಲ್ಲದೇ ಬೀಕರ ಹತ್ಯೆಗಳು ನಡೆಯುತ್ತಿವೆ. ಪತಿ, ಪತ್ನಿಯನ್ನು ಕೊಲೆ ಮಾಡಿ ನೀರು ತುಂಬುವ ಬ್ಯಾರಲ್ ನಲ್ಲಿ ಬಚ್ಚಿಟ್ಟಿರುವ ಘಟನೆ ಉತ್ತರ ಕನ್ನಡ (Uttar Kannada) ಜಿಲ್ಲೆಯ ಹಳಿಯಾಳದ (Haliyal) ತೇರಗಾಂವನಲ್ಲಿ ನಡೆದಿದೆ. ಶಾಂತಕುಮಾರಿ (33) ಕೊಲೆಯಾದ ಪತ್ನಿ. ತುಕಾರಾಮ್ ಮಡಿವಾಳ್ (38) ಕೊಲೆ ಮಾಡಿದ ಪತಿ.

ಕತ್ತು‌ಹಿಸುಕಿ ಕೊಲೆ ಮಾಡಿ ದೇಹವನ್ನು ಬ್ಯಾರಲ್​ನಲ್ಲಿಟ್ಟಿದ್ದ ಪತಿ

ತುಕಾರಾಮ ಪರ ಸ್ತ್ರೀಯರೊಂದಿಗೆ ಸಲುಗೆಯಿಂದ ಇರುತ್ತಿದ್ದನು. ಇದನ್ನು ಪತ್ನಿ ಶಾಂತಕುಮಾರಿ, ಪತಿ ತುಕಾರಾಮ್​ಗೆ ಪ್ರಶ್ನಿಸುತ್ತಿದ್ದಳು. ಈ ವಿಚಾರವಾಗಿ ಗಂಡ ಹೆಂಡತಿಯರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿದಾಗ, ತುಕಾರಾಮ್, ಶಾಂತಕುಮಾರಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಪತ್ನಿಯ ಶವವನ್ನು ನೀರು ತುಂಬುವ ಬ್ಯಾರಲ್​​ನಲ್ಲಿ ಬಚ್ಚಿಟ್ಟಿದ್ದನು.

ಬಳಿಕ ಮನೆ ಖಾಲಿ ಮಾಡುವ ನೆಪದಲ್ಲಿ ಟಾಟಾ ಎಸ್​ ಬಾಡಿಗೆ ಪಡೆದು ಶವ ತುಂಬಿದ ಬ್ಯಾರಲ್​​ ಸಾಗಿಸಿ, ಕಾಡಿನಲ್ಲಿ ಎಸೆದು ಬಂದಿದ್ದಾನೆ. ಇನ್ನು ದಂಪತಿ ಬಾಡಿಗೆ ಮನೆಯಲ್ಲಿದ್ದು, ಶನಿವಾರ ಮನೆ ಕಾಲಿ ಮಾಡಿಕೊಂಡು ಹೋಗುತ್ತಿದ್ದನು. ಈ ವೇಳೆ ಗಮನಿಸಿದ ಮನೆಯ ಮಾಲೀಕರು ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆಗ ತುರ್ತಾಗಿ ಗೋವಾಗೆ ಹೋಗಬೇಕಾಗಿದೆ ಎಂದು ಉತ್ತರಿಸಿದ್ದಾನೆ.

ದಂಪತಿಯ ಜಗಳವನ್ನು ಮನೆ ಮಾಲೀಕರು ತಿಳಿದ ಹಿನ್ನೆಲೆ ಹಾಗೂ ಈತನ ಹೇಳಿಕೆಯಿಂದ ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪತ್ನಿಯನ್ನು ಕೊಲೆ ಮಾಡಿರುವ ವಿಷಯವನ್ನು ಬಾಯಿ ಬಿಟ್ಟಿದ್ದಾನೆ. ಆರೋಪಿ ಶಾಂತಾರಾಮ್​​ನನ್ನು ಪೊಲೀಸರು ಬಂಧಸಿದ್ದಾರೆ. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ