Covid Cases: ಭಾರತದಲ್ಲಿ 1 ದಿನದಲ್ಲಿ 96 ಕೋವಿಡ್ ಪ್ರಕರಣಗಳು; ಎಷ್ಟಿವೆ ಸಕ್ರಿಯ ಕೇಸ್?
Active Cases In India- ಭಾರತದಲ್ಲಿ ಒಂದು ದಿನದಲ್ಲಿ 96 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಈವರೆಗೆ ದಾಖಲಾದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.47 ಕೋಟಿ ಆಗಿದೆ. ಜಾಗತಿಕವಾಗಿ 67 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ನವದೆಹಲಿ: ಭಾರತದಲ್ಲಿ ಬುಧವಾರ 96 ಹೊಸ ಕೋವಿಡ್ ಪ್ರಕರಣಗಳು (Covid Cases) ದಾಖಲಾಗಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ, ಸಕ್ರಿಯ ಪ್ರಕರಣಗಳ (Active Cases) ಸಂಖ್ಯೆ ಇಳಿಮುಖವಾಗುತ್ತಿದೆ. ಈಗ ಇರುವ ಆ್ಯಕ್ಟಿವ್ ಕೇಸ್ ಸಂಖ್ಯೆ 1,785 ಮಾತ್ರ ಇದೆ. ಕೋವಿಡ್ನ ನಾಲ್ಕನೇ ಅಲೆಯ ಭೀತಿ ಮಧ್ಯೆಯೂ ಭಾರತದಲ್ಲಿ ಕೋವಿಡ್ ಹರಡುವಿಕೆ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿದಂತಿದೆ.
ಬುಧವಾರ 96 ಹೊಸ ಪ್ರಕರಣ ದಾಖಲಾಗಿರುವುದರೊಂದಿಗೆ ಭಾರತದಲ್ಲಿ ಈವರೆಗೆ ದಾಖಲಾದ ಕೋವಿಡ್ ಪ್ರಕರಣಗಳ ಸಂಖ್ಯೆ 4,46,83,639 (4.47 ಕೋಟಿ) ಆಗಿದೆ. ಇಂದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತದಲ್ಲಿ ಕೋವಿಡ್ನಿಂದ ಇದೂವರೆಗೆ ಸಾವನ್ನಪ್ಪಿದವರ ಸಂಖ್ಯೆ 5,30,746ಕ್ಕೆ ಏರಿದೆ.
ದಾಖಲಾದ ಪ್ರಕರಣಗಳ ಪ್ರಮಾಣಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಶೇ. 1.19 ಇದೆ. 2020ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೋವಿಡ್ ಈವರೆಗೆ ಮೂರು ಅಲೆಗಳಲ್ಲಿ ರಾಚಿದೆ. ಡೆಲ್ಟಾ ತಳಿಯ ಕೊರೋನಾ ವೈರಸ್ನಿಂದ ದೃಷ್ಟಿಯಾದ ಎರಡನೇ ಅಲೆಯಿಂದ ಅತಿ ಹೆಚ್ಚು ಸಾವು ನೋವುಗಳಾದವು. ಓಮೈಕ್ರಾನ್ನಿಂದ ಸೃಷ್ಟಿಯಾದ ಮೂರನೇ ಕೋವಿಡ್ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ತೀರಾ ಹೆಚ್ಚಾಯಿತು. ಈಗ ಚೀನಾ, ಜಪಾನ್ ಮೊದಲಾದೆಡೆ ಕೋವಿಡ್ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ 4ನೇ ಅಲೆ ತಡೆಯಲು ಸಿದ್ಧತೆ ನಡೆದಿದೆ.
ಇದನ್ನೂ ಓದಿ: ಆದಿತ್ಯ ಠಾಕ್ರೆ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ; ಇದು ಸಂಚು ಎಂದು ಆರೋಪಿಸಿದ ಶಿವಸೇನಾ ನಾಯಕ
ಜಪಾನ್ನಲ್ಲಿ 1 ಕೋಟಿಗೂ ಹೆಚ್ಚು ಸಕ್ರಿಯ ಪ್ರಕರಣ
ಸದ್ಯ ಜಾಗತಿಕವಾಗಿ ಈವರೆಗೆ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 67 ಕೋಟಿ ಮುಟ್ಟಿದೆ. ಅಮೆರಿಕವೊಂದರಲ್ಲೇ 10 ಕೋಟಿಗೂ ಹೆಚ್ಚು ಮಂದಿಗೆ ಕೋವಿಡ್ ಸೋಂಕು ತಗುಲಿದೆ. ನಂತರದ ಸ್ಥಾನ ಭಾರತ, ಬ್ರೆಜಿಲ್ ಮೊದಲಾದ ದೇಶಗಳದ್ದು. ಹಾಗೆಯೇ, ಕೋವಿಡ್ನಿಂದ ಈವರೆಗೆ ಬಲಿಯಾದವರ ಸಂಖ್ಯೆ ಜಾಗತಿಕವಾಗಿ 67.74 ಲಕ್ಷ ಇದೆ. ಅಮೆರಿಕದಲ್ಲಿ 11 ಲಕ್ಷಕ್ಕೂ ಹೆಚ್ಚು ಮಂದಿ ಸತ್ತರೆ, ಬ್ರೆಜಿಲ್ ಮತ್ತು ಭಾರತದಲ್ಲಿ ಐದು ಲಕ್ಷಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ.
ಆದರೆ, ಸಕ್ರಿಯ ಪ್ರಕರಣಗಳ ವಿಷಯಕ್ಕೆ ಬಂದರೆ ಜಪಾನ್ನಲ್ಲಿ ಅತಿ ಹೆಚ್ಚು ಇದೆ. ಈ ಪುಟ್ಟ ದೇಶದಲ್ಲಿ ಆಕ್ಟಿವ್ ಕೇಸ್ ಸಂಖ್ಯೆ 1,11,23,238 ಇದೆ. ಅಮೆರಿಕದಲ್ಲಿ ಸಕ್ರಿಯ ಪ್ರಕರಣಗಳು 16 ಲಕ್ಷಕ್ಕೂ ಅಧಿಕ ಇವೆ.
Published On - 3:18 pm, Wed, 8 February 23