Shocking News: ಚರಂಡಿ ಮೂಲಕ 10 ಅಡಿ ಸುರಂಗ ಅಗೆದು ಚಿನ್ನಾಭರಣ ದೋಚಿದ ಕಳ್ಳರು
ಚರಂಡಿ ಮೂಲಕ 10 ಅಡಿ ಸುರಂಗವನ್ನು ಕೊರೆದು ಚಿನ್ನದ ಅಂಗಡಿಯೊಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಮೀರತ್: ಚರಂಡಿ ಮೂಲಕ 10 ಅಡಿ ಸುರಂಗವನ್ನು ಕೊರೆದು ಚಿನ್ನದ ಅಂಗಡಿಯೊಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ ಜ್ಯುವೆಲ್ಲರಿ ಶೋರೂಂ ಮಾಲೀಕರು ವ್ಯಾಪಾರಕ್ಕಾಗಿ ಅಂಗಡಿಯನ್ನು ತೆರೆಯಲು ಬಂದಾಗ, ಚರಂಡಿಯ ಮೂಲಕ ಸುರಂಗವೊಂದು ಅಂಗಡಿಯೊಳಗೆ ಹಾದು ಹೋಗುತ್ತಿರುವುದನ್ನು ನೋಡಿದ್ದಾರೆ. ಪೊಲೀಸರ ಪ್ರಕಾರ, ಕಳ್ಳರು ಅಂಗಡಿಯೊಳಗೆ ಪ್ರವೇಶಿಸಲು ಡ್ರೈನ್‌ನ ದುರ್ಬಲ ಗಡಿಯಿಂದ ಇಟ್ಟಿಗೆ ಮತ್ತು ಮಣ್ಣನ್ನು ಕೆಡವಿದ್ದಾರೆ ಎಂದು ಹೇಳಿದ್ದಾರೆ.
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಆದರೆ ನಿಖರವಾದ ಮೊತ್ತ ಎಷ್ಟು ಎಂದು ಇನ್ನೂ ಪತ್ತೆಯಾಗಿಲ್ಲ. ಈ ದರೋಡೆಯ ಸುದ್ದಿ ಹರಡುತ್ತಿದ್ದಂತೆ, ಮೀರತ್ ಬುಲಿಯನ್ ಟ್ರೇಡರ್ಸ್ ಅಸೋಸಿಯೇಷನ್ ಸದಸ್ಯರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಿಲ್ಲ ಎಂದು ಹೇಳಿದ್ದಾರೆ. ನಗರದಲ್ಲಿ ಇದು ನಾಲ್ಕನೇ ದರೋಡೆ ಘಟನೆಯಾಗಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ: Shocking News : ಪಶುವೈದ್ಯರನ್ನು ದನಗಳ ಚಿಕಿತ್ಸೆಗೆಂದು ಕರೆದು ಮದುವೆ ಮಾಡಿಸಿದ ಸ್ಥಳೀಯರು
ಈ ವಿಚಾರ ತಿಳಿಯುತ್ತಿದಂತೆ ಕೂಡಲೇ ಇಬ್ಬರು ಪೊಲೀಸ್ ಅಧಿಕಾರಿಗಳು ಶೋರೂಂಗೆ ಬಂದಿದ್ದಾರೆ. ಇತ್ತೀಚಿನ ವಾರಗಳಲ್ಲಿ ನಡೆದಿದೆ ಎನ್ನಲಾದ ಈ ದರೋಡೆ ಮತ್ತು ಇತರ ಹಲವು ಪ್ರಕರಣಗಳ ತನಿಖೆಗೆ ಹಿರಿಯ ಅಧಿಕಾರಿಗಳು ಬರುಬೇಕು ಎಂದು ಒತ್ತಾಯಿಸಿ ವ್ಯಾಪಾರಿಗಳು ಪೊಲೀಸ್ ಅಧಿಕಾರಿಗಳನ್ನು ಅಂಗಡಿಗೆ ಪ್ರವೇಶಿಸಲು ನಿರಾಕರಿಸಿದರು. ದರೋಡೆಕೋರರನ್ನು ಹಿಡಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published On - 4:18 pm, Wed, 29 March 23