AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News : ಪಶುವೈದ್ಯರನ್ನು ದನಗಳ ಚಿಕಿತ್ಸೆಗೆಂದು ಕರೆದು ಮದುವೆ ಮಾಡಿಸಿದ ಸ್ಥಳೀಯರು

ಪಶುವೈದ್ಯ ಸತ್ಯಂ ಕುಮಾರ್ ಅವರ ತಂದೆ ಸುಬೋಧ್ ಕುಮಾರ್ ಝಾ ಹೇಳಿರುವ ಪ್ರಕಾರ ''ಸತ್ಯಂ ಸಂಜೆಯವರೆಗೂ ಮನೆಗೆ ಬಾರದಿದ್ದಾಗ ಆತನಿಗಾಗಿ ಹುಡುಕಾಟ ಆರಂಭಿಸಿದ್ದೆವು, ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ.

Shocking News : ಪಶುವೈದ್ಯರನ್ನು ದನಗಳ ಚಿಕಿತ್ಸೆಗೆಂದು ಕರೆದು ಮದುವೆ ಮಾಡಿಸಿದ ಸ್ಥಳೀಯರು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 15, 2022 | 4:50 PM

Share

ಒಂದು ಮದುವೆಗಾಗಿ ನೂರು ಸುಳ್ಳು ಹೇಳಿ ಎಂಬ ನಮ್ಮ ಹಿರಿಯರ ಮಾತಿನಂತೆ, ಕೆಲವೊಂದು ಬಾರಿ ಮದುವೆ ಸಮಯದಲ್ಲಿ ಸುಳ್ಳು ಹೇಳುವ ಅನಿವಾರ್ಯತೆ ಬರುತ್ತದೆ. ಅದು ಆ ಸನ್ನಿವೇಶಕ್ಕೆ ಆಧಾರವಾಗಿ. ಜೀವನದಲ್ಲಿ ಮದುವೆ ಎನ್ನುವುದು ಒಂದು ಸುಂದರ ಕ್ಷಣ ಮತ್ತು ಅದು ಜೀವನದಲ್ಲಿ  ಒಂದೇ ಬಾರಿ ಬರುವುದು. ಆ ಮದುವೆ ಇಬ್ಬರ ಜೀವನಕ್ಕೆ ಮುನ್ನಡಿಯಾಗಿರುತ್ತದೆ.  ಆದರೆ ಇಲ್ಲೊಂದು ಅಚ್ಚರಿಯ ಮದುವೆ ಒಂದು ನಡೆದಿದೆ. ಹೌದು  ಬಿಹಾರದ ಬೇಗುಸರಾಯ್ ಜಿಲ್ಲೆಯ ಪಶುವೈದ್ಯರನ್ನು ಮದುವೆಗಾಗಿ ಅಪಹರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ತೆಘ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಿಧೌಲಿ ಗ್ರಾಮದ ಪಶುವೈದ್ಯ ಸತ್ಯಂ ಕುಮಾರ್ ಝಾ ಅವರು ಸೋಮವಾರ ಮಧ್ಯಾಹ್ನ ದನಗಳ ಚಿಕಿತ್ಸೆಗೆಂದು ಹೋಗಿದ್ದರು ಮತ್ತು ಜನರ ಗುಂಪೊಂದು ಅವರನ್ನು ಅಪಹರಿಸಿ ಹುಡುಗಿಯನ್ನು ಬಲವಂತವಾಗಿ ವಿವಾಹ ಮಾಡಿಸಿದ್ದಾರೆ.

ಪಶುವೈದ್ಯ ಸತ್ಯಂ ಕುಮಾರ್ ಅವರ ತಂದೆ ಸುಬೋಧ್ ಕುಮಾರ್ ಝಾ ಹೇಳಿರುವ ಪ್ರಕಾರ ”ಸತ್ಯಂ ಸಂಜೆಯವರೆಗೂ ಮನೆಗೆ ಬಾರದಿದ್ದಾಗ ಆತನಿಗಾಗಿ ಹುಡುಕಾಟ ಆರಂಭಿಸಿದ್ದೆವು, ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಮಂಗಳವಾರ ಬೆಳಗ್ಗೆ ನನ್ನ ಮೊಬೈಲ್‌ನಲ್ಲಿ ವಿಡಿಯೋ ಕ್ಲಿಪ್ ಬಂದಿತ್ತು. ಕ್ಲಿಪ್ ನೋಡಿದಾಗ ನನ್ನ ಮಗ ಒಂದು ಹುಡುಗಿಯ ಪಕ್ಕದಲ್ಲಿ ಮದುವೆಗಾಗಿ ಕುಳಿತಿದ್ದ.  ಇದನ್ನು ನೋಡಿ ನಮಗೂ ಶಾಕ್ ಆಗಿದೆ. ನಾವು ಆರೋಪಿಗಳನ್ನು ಹೆಸರಿಸಿ ಲಿಖಿತ ದೂರನ್ನು ತೇಗ್ರಾ ಪೊಲೀಸ್ ಠಾಣೆಗೆ ಸಲ್ಲಿಸಿದ್ದೇವೆ” ಎಂದು ಝಾ ಹೇಳಿದರು.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ನಿಮ್ಮ ಜಾಣತನಕ್ಕೊಂದು ಸವಾಲು, ಈ ಚಿತ್ರದಲ್ಲಿ ಎಷ್ಟು ಹುಲಿಗಳಿವೆ ಗುರುತಿಸಿ !

ಇದನ್ನೂ ಓದಿ
Image
ಟ್ರಾಫಿಕ್ ಮಧ್ಯೆ ಸ್ಕೂಟಿಯಲ್ಲಿ ವಿಶ್ರಾಂತಿ ಪಡೆಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲಿದೆ ವೈರಲ್ ವಿಡಿಯೋ
Image
Shocking News: ರೆಸ್ಟೋರೆಂಟ್​​ನಲ್ಲಿ ಮೋಮೋಸ್ ತಿನ್ನುವಾಗ​ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ಸಾವು!
Image
ಅಮೆರಿಕಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್
Image
Optical Illusion: ನಿಮ್ಮ ಜಾಣತನಕ್ಕೊಂದು ಸವಾಲು, ಈ ಚಿತ್ರದಲ್ಲಿ ಎಷ್ಟು ಹುಲಿಗಳಿವೆ ಗುರುತಿಸಿ !

ಈ ಬಗ್ಗೆ ನಮಗೂ ದೂರ ಬಂದಿದೆ, ಎಲ್ಲಾ ದೃಷ್ಟಿಗಳಿಂದಲ್ಲೂ ತನಿಖೆ ನಡೆಯುತ್ತಿದೆ. ಪ್ರೇಮ ಪ್ರಕರಣಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ತೇಗ್ರಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹೇಳಿದರು. ಅವರು ಯಾಕೆ ಆ ಹುಡುಗಿಯ ಜೊತೆಗೆ ಮದುವೆ ಮಾಡಿದ್ದಾರೆ ಎಂದು ನಮಗೂ ತಿಳಿದಿಲ್ಲ. ಇದರ ಬಗ್ಗೆ ಸಂಪೂರ್ನ ತನಿಖೆ ನಡೆಯುತ್ತದೆ,. ನಾವು ಈ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:48 pm, Wed, 15 June 22

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು