ಎರಡು ತಿಂಗಳು ಪ್ರಾಯದ ಈ ಈಮು ವ್ಹೀಲ್ ಚೇರ್ ಮೂಲಕ ನಡೆದಾಡುವ ವಿಶ್ವದ ಮೊದಲ ಪಕ್ಷಿ!
ಪೋಸ್ಟ್ ನ ಪ್ರಕಾರ ಲೆಮು ಅಂತ ಹೆಸರಿಲಾಗಿರುವ ಈ ಎರಡು-ತಿಂಗಳು ಪ್ರಾಯದ ಪಕ್ಷಿಯು ಅಮೆರಿಕದ ವಿಸ್ಕಾನ್ಸಿನಲ್ಲಿ ಕ್ಯಾರಿ ಬ್ಯಾಗೊಂದರಲ್ಲಿ ಪತ್ತೆಯಾದಾಗ ಅದರ ಕಾಲು ಮುರಿದಿತ್ತು ಮತ್ತು ಗಾತ್ರದಲ್ಲಿ ಅದು ತನ್ನ ಸೋದರ ಸೋದರಿಯರ ಗಾತ್ರದ ಅರ್ಧದಷ್ಟಿತ್ತು.
ವ್ಹೀಲ್ ಚೇರ್ ಗಳನ್ನು ಕೇವಲ ಮಾನವ ಉಪಯೋಗಕ್ಕಾಗಿ ಮಾತ್ರ ಅಂತ ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು ಮಾರಾಯ್ರೇ. ಯಾಕೆ ಅಂತ ನಾವು ಈ ಕತೆಯಲ್ಲಿ ಹೇಳ್ತೀವಿ. ಈಮು ಪಕ್ಷಿ (Emu bird) ನಿಮಗೆ ಗೊತ್ತಲ್ಲ, ಅದೇ ಮಾರಾಯ್ರೇ, ಆಸ್ಟ್ರಿಚ್ (Ostrich) ಹಾಗೆ ಕಾಣುವ ಮತ್ತು ಅದೇ ಜಾತಿಗೆ ಪಕ್ಷಿ. ಈಮು ಮತ್ತು ಆಸ್ಟ್ರಿಚ್ ರಟೈಟ್ ಪ್ರಬೇಧಕ್ಕೆ ಸೇರಿದ ಬೃಹತ್ ಗಾತ್ರದ ಪಕ್ಷಿಗಳಾದರೂ ಇವು ಹಾರಲಾರವು. ಹಾಗಾಗಿ ಇವುಗಳನ್ನು ಫ್ಲೈಟ್ ಲೆಸ್ ಬರ್ಡ್ಸ್ (flightless birds) ಅಂತ ಕರೆಯುತ್ತಾರೆ. ಓಕೆ ನಮ್ಮ ಈಮು ಕತೆಗೆ ಬರೋಣ. ಒಂದು ಸುಂದರ ಮರಿ ಈಮು ಅದಕ್ಕೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ವ್ಹೀಲ್ ಚೇರ್ ನಲ್ಲಿ ಓಡಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಗಾಯಗೊಂಡು ಬಹಳ ಶೋಚನೀಯ ಸ್ಥಿತಿಯಲ್ಲಿದ್ದ ಈ ಪಕ್ಷಿಯನ್ನು ಅಮೇರಿಕದ ಬೆಲ್ಲ ವ್ಯೂ ಫಾರ್ಮ್ ಅನಿಮಲ್ ಸ್ಯಾಂಕ್ಚುರಿಯ (ಬಿ ವಿ ಎಫ್ ಎ ಎಸ್) ಸಂಸ್ಥೆ ಸಂರಕ್ಷಿಸಿ ಪೋಷಿಸುತ್ತಿದೆ.
ವಾಕಿನ್ ಪೆಟ್ಸ್ ಜೂನ್ 10 ರಂದು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಿರುವ ಫುಟೇಜ್ ನೋಡಿ, ಈಮು ಅನಾಯಾಸವಾಗಿ ಹುಲ್ಲುಗಾವಲಿನ ಮೇಲೆ ನಡೆದಾಡುತ್ತಿದೆ. ಪೋಸ್ಟ್ ನ ಪ್ರಕಾರ ಲೆಮು ಅಂತ ಹೆಸರಿಲಾಗಿರುವ ಈ ಎರಡು-ತಿಂಗಳು ಪ್ರಾಯದ ಪಕ್ಷಿಯು ಅಮೆರಿಕದ ವಿಸ್ಕಾನ್ಸಿನಲ್ಲಿ ಕ್ಯಾರಿ ಬ್ಯಾಗೊಂದರಲ್ಲಿ ಪತ್ತೆಯಾದಾಗ ಅದರ ಕಾಲು ಮುರಿದಿತ್ತು ಮತ್ತು ಗಾತ್ರದಲ್ಲಿ ಅದು ತನ್ನ ಸೋದರ ಸೋದರಿಯರ ಗಾತ್ರದ ಅರ್ಧದಷ್ಟಿತ್ತು. ಬಿ ವಿ ಎಫ್ ಎ ಎಸ್ ಸಂಸ್ಥೆಯ ಸಂಸ್ಥಾಪಕಿಯಾಗಿರುವ ರೊಂಡಾ ಲೆಮು ಕತೆಗೆ ಬೇರೆ ಅಯಾಮಾಗಳು ಸಹ ಇರಬಹುದೆಂದು ಭಾವಿಸಿದ್ದರು.
ಅದೇನೇ ಇರಲಿ, ಲೇಮು ಜೀವಕ್ಕೆ ಹಾನಿಯಾಗಬಾರದೆಂದು ಪಣತೊಟ್ಟ ರೊಂಡಾ ಅವರು ಲೆಮುವನ್ನು ವಿಸ್ಕಾನ್ಸಿನಿಂದ ನಾರ್ಥ್ ಕೆರೋಲೀನಾ ತರಲು ನೆರವಾಗುವಂತೆ ಸೋಶಿಯಲ್ ಮೀಡಿಯಾ ಮುಖಾಂತರ ಕೋರಿಕೊಂಡರು. ಸೋಶಿಯಲ್ ಮೀಡಿಯಾನಲ್ಲಿ ಅವರನ್ನು ಶ್ರದ್ಧೆಯಿಂದ ಫಾಲೋ ಮಾಡುವ ಕೆಲ ಜನ ಅವರ ನೆರವಿಗೆ ಧಾವಿಸಿದರು. ಲೆಮುವನ್ನು ಬಿ ವಿ ಎಫ್ ಎ ಎಸ್ ತಲುಪಿಸಬೇಕಾದರೆ ಅದಕ್ಕೆ ನಾಲ್ಕು ಕಾಲಿನ ಒಂದು ಉಪಕರಣದ ಅವಶ್ಯಕತೆಯಿತ್ತು.
ಅಗಲೇ ವಾಕಿನ್’ ಪೆಟ್ಸ್ ಸಂಸ್ಥೆಯು ಈ ವಿಡಿಯೋನಲ್ಲಿ ಕಾಣುವ ವ್ಹೀಲ್ ಚೇರನ್ನು ತಯಾರಿಸಿ ನೀಡಿತು. ಅದರ ಸಹಾಯದಿಂದಲೇ ಅದಕ್ಕೆ ಕ್ರಮೇಣ ನಡೆಯಲು ಸಾಧ್ಯವಾಗಿದ್ದು.
ರೊಂಡಾ ಹೇಳುವ ಪ್ರಕಾರ ಈ ಉಪಕರಣಕ್ಕಿರುವ ಗಾಲಿಗಳು ಲೆಮುನಲ್ಲಿ ಸ್ವಂತ ಬಲದಿಂದ ನಡೆದಾಡುತ್ತಿರುವ ಭಾವನೆ ಸೃಷ್ಟಿಸುತ್ತವೆ. ಗಾಲಿಗಳ ಸಹಾಯದಿಂದ ಓಡಾಡುವ ವಿಶ್ವದ ಮೊಟ್ಟ ಮೊದಲ ಪಕ್ಷಿ ಲೆಮು ಆಗಿದೆ. ಪಕ್ಷಿ ಮತ್ತು ಪ್ರಾಣಿಗಳ ತಜ್ಞರು ಕಾಲಿನಿಂದ ಊನಗೊಂಡಿರುವ ಬೇರೆ ಪ್ರಾಣಿ ಪಕ್ಷಿಗಳಿಗೂ ಇಂಥ ವ್ಹೀಲ್ ಚೇರ್ ಗಳನ್ನು ಮಾಡಬಹುದೇ ಅಂತ ಯೋಚಿಸಲಾರಂಭಿಸಿದ್ದಾರೆ.
ಲೆಮುನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅದ ಬಳಿಕ ಸಾವಿರಾರು ಜನ ಅದನ್ನು ವೀಕ್ಷಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.