‘Peak Bangalore’ ಎಂದ ಆಟೋ ಡ್ರೈವರ್, ಪ್ರಯಾಣಿಕ ಪುಲ್ ಶಾಕ್!
ಒಬ್ಬ ವ್ಯಕ್ತಿ ತಾನು ಆಫೀಸ್ ಗೆ ಹೋಗಲು ಆಟೋ ಬುಕ್ ಮಾಡಿದ್ದಾರೆ. ಆದರೆ ಅವರು ಆಫೀಸ್ ಗೆ ಹೋಗುವ ಒತ್ತಡದಲ್ಲಿ ಇಲ್ಲದ ಕಾರಣ ಸ್ವಲ್ಪ ನಿಧಾನವಾಗಿ ಹೋಗುವ ಎನ್ನುವ ಯೋಚನೆಯಲ್ಲಿ ಇದ್ದರು. ಅವರ ಮನೆಯ ಬಳಿ ಆಟೋ ಒಂದು ಬಂತು, ಈ ಮಧ್ಯೆ ದಾರಿಯಲ್ಲಿ ಆಟೋ ಡ್ರೈವರ್ ನನ್ನ ಆಟೋಗೆ CNG ರೀಫಿಲ್ ಹಾಕಿಸಿಕೊಳ್ಳಬೇಕು ಎಂದು ಆಟೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯಲ್ಲಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಎನ್ನುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಇದು ದಿನನಿತ್ಯ ಜೀವನದ ಒಂದು ಭಾಗವಾಗಿ ಹೋಗಿದೆ. ಇಲ್ಲಿ ಆಟೋ ಮತ್ತು ಕ್ಯಾಬ್ ಗಳನ್ನು ನಂಬಿಕೊಂಡು ಹೋದರು ಒಂದು ಅರ್ಧಗಂಟೆಯ ಮುಂಚಿತವಾಗಿ ಹೋಗುಬೇಕು, ಏಕೆಂದರೆ ಅಷ್ಟೊಂದು ಟ್ರಾಫಿಕ್ ಇರುತ್ತದೆ. ಇನ್ನೂ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಟ್ರಾಫಿಕ್ ಎನ್ನುವುದು ಮಂಗನ ಬಾಲದಂತೆ ಇರುತ್ತದೆ. ಬೆಂಗಳೂರಿನ ಜನ ಈ ಟ್ರಾಫಿಕ್ ಗೆ ಬೇಸತ್ತು ಹೋಗಿರುವುದು ಖಂಡಿತ, ಆದರೂ ಅನಿವಾರ್ಯ ಜೀವನ ನಡೆಸಬೇಕಲ್ಲ ಎನ್ನುತ್ತಾರೆ. ಈ ಟ್ರಾಫಿಕ್ ವಿಚಾರಕ್ಕೆ ಇಷ್ಟು ಪೀಠಿಕೆ ಏಕೆ? ಎಂದು ಯೋಚಿಸಬಹುದು, ಹೌದು ಇಲ್ಲೊಂದು ಮಜಾವಾದ ಘಟನೆಯೊಂದು ನಡೆದಿದೆ. ಸಾಮಾನ್ಯ ನಾನು ಬೆಂಗಳೂರಿನ ಆಟೋ ಡ್ರೈವರ್ ಗಳು ಕನ್ನಡ ಅಥವಾ ಹಿಂದಿ ಮಾತನಾಡಬಹುದು, ಇದು ನಾವು ನೋಡುವ ದಿನನಿತ್ಯ ಸಂಗತಿ, ಆದರೆ ಇಲ್ಲೊಬ್ಬ ಆಟೋ ಡ್ರೈವರ್ ಯಾವ ಐಟಿ ಕಂಪನಿಯ ಉದ್ಯೋಗಿಗೂ ಕಡಿಮೆ ಇಲ್ಲ ಎನ್ನುವಂತೆ ಇಂಗ್ಲಿಷ್ ನಲ್ಲಿ ಪ್ರಯಾಣಿಕನಿಗೆ ಉತ್ತರ ನೀಡಿದ್ದಾನೆ. ಇದೀಗ ಈ ವಿಚಾರ ಎಲ್ಲ ಕಡೆ ವೈರಲ್ ಆಗಿದೆ.
ಒಬ್ಬ ವ್ಯಕ್ತಿ ತಾನು ಆಫೀಸ್ ಗೆ ಹೋಗಲು ಆಟೋ ಬುಕ್ ಮಾಡಿದ್ದಾರೆ. ಆದರೆ ಅವರು ಆಫೀಸ್ ಗೆ ಹೋಗುವ ಒತ್ತಡದಲ್ಲಿ ಇಲ್ಲದ ಕಾರಣ ಸ್ವಲ್ಪ ನಿಧಾನವಾಗಿ ಹೋಗುವ ಎನ್ನುವ ಯೋಚನೆಯಲ್ಲಿ ಇದ್ದರು. ಅವರ ಮನೆಯ ಬಳಿ ಆಟೋ ಒಂದು ಬಂತು, ಈ ಮಧ್ಯೆ ದಾರಿಯಲ್ಲಿ ಆಟೋ ಡ್ರೈವರ್ ನನ್ನ ಆಟೋಗೆ CNG ರೀಫಿಲ್ ಹಾಕಿಸಿಕೊಳ್ಳಬೇಕು ಎಂದು ಆಟೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯಲ್ಲಿ ಹೇಳಿದ್ದಾರೆ. ಆಫೀಸ್ ಹೋಗಲು ಇನ್ನೂ ಸಮಯ ಇದೆ ಎಂದು ಈ ವ್ಯಕ್ತಿ ಓಕೆ ಎಂದಿದ್ದಾರೆ. ಇನ್ನೂ CNG ರೀಫಿಲ್ ತುಂಬಿಸಲು ಸ್ವಲ್ಪ ದೂರ ಹೋಗಬೇಕು ಎನ್ನುವಷ್ಟರಲ್ಲಿ ಟ್ರಾಫಿಕ್ ಶುರುವಾಗಿದೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಪಶುವೈದ್ಯರನ್ನು ದನಗಳ ಚಿಕಿತ್ಸೆಗೆಂದು ಕರೆದು ಮದುವೆ ಮಾಡಿಸಿದ ಸ್ಥಳೀಯರು
ಈ ಟ್ರಾಫಿಕ್ ನೋಡಿದ ಪ್ರಯಾಣಿಕ ರೀಫಿಲ್ ಮತ್ತೆ ಹಾಕಬಹುದು ತಕ್ಷಣ ಆಫೀಸ್ ನತ್ತ ಹೋಗು ಎಂದು ಹೇಳಿದ್ದಾರೆ. ನನಗೆ ತಡವಾಗಿದೆ. ಆದರೆ ಈ ರಾಜಧಾನಿಯ ಟ್ರಾಫಿಕ್ ನೋಡಿ ಒಂದು ಬಾರಿ ಕೋಪ ಬರುವುದು ಖಂಡಿತ. ಪ್ರಯಾಣಿಕನ ಈ ಮಾತನ್ನು ಕೇಳಿದ ಆಟೋ ಚಾಲಕ ‘Peak Bangalore’ ಎಂದು ಹೇಳಿದ್ದಾನೆ, ಜೊತೆಗೆ “ಲಾಗಿನ್ ಕಬ್ಕಾ ಹೈ?” ಎಂದು ಹೇಳಿದ್ದನ್ನು ಕೇಳಿ ಪ್ರಯಾಣಿಕ ಶಾಕ್ ಆಗಿದ್ದಾರೆ. ಬೆಂಗಳೂರಿನಲ್ಲಿ ಆಟೋ ಚಾಲಕ ಬಾಯಲ್ಲಿ ಇಂತಹ ಮಾತು ಕೇಳಿದನ್ನು ನೋಡಿ ನನಗೆ ಖಂಡಿತ ಶಾಕ್ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಘಟನೆ ನಡೆದು ಸುಮಾರು 8 ದಿನವಾಗಿದೆ ಆದರೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಈಗ ಹಂಚಿಕೊಂಡಿದ್ದಾರೆ.
ನಮ್ಮ ಬೆಂಗಳೂರು ತುಂಬಾ ಒತ್ತಡದಲ್ಲಿ ಇದೆ. ಇಲ್ಲಿ ಎಲ್ಲವನ್ನು ತಕ್ಷಣ ಮಾಡಬೇಕು ಎಂಬ ಹತುರ ಇದೆ ಎಂದು ಈ ಫೋಸ್ಟ್ ನ ಅರ್ಥವಾಗಿದೆ. ಈ ಬಗ್ಗೆ ಸೋಶಿಯಲ್ ಮಿಡಿಯಾ ಬಳಕೆದಾರರೂ ಕಮೆಂಟ್ ಮಾಡಿದ್ದಾರೆ, ಆ ಆಟೋ ಡ್ರೈವರ್ ಐಟಿ ಕಂಪನಿಯ ಉದ್ಯೋಗಿ ಆಗಿರಬೇಕು ಎಂದು ಹೇಳಿದ್ದಾರೆ. ಇದು ಒಂದು ರೀತಿಯಲ್ಲಿ ತಮಾಷೆಯಾದರೂ ನಿಜ ಎಂದು ಒಪ್ಪಿಕೊಳ್ಳವ ವಿಷಯವಾಗಿದೆ, ಈ ಬೆಂಗಳೂರಿನ ಟ್ರಾಫಿಕ್, ಒತ್ತಡದ ಜೀವನ ಎಲ್ಲವನ್ನು ಕಲಿಸುತ್ತದೆ. ಇದೀಗ ಈ ಒಂದು ಘಟನೆ ಎಲ್ಲ ಕಡೆ ವೈರಲ್ ಆಗುತ್ತಿದೆ.
Today’s @peakbengaluru update ??#bangaloretraffic #bangalore #bangalorerains pic.twitter.com/ogk0wdjVsI
— Klub (@klubworks) June 8, 2022
ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Thu, 16 June 22