ದೊಡ್ಡ ದೊಡ್ಡ ನಗರಗಳಲ್ಲಿ ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಸಂಭವಿಸುತ್ತದೆ. ಮತ್ತು ಜನರು ಒಂದೇ ಸ್ಥಳದಲ್ಲಿ ದೀರ್ಘಕಾಲದವರೆಗೂ ಟ್ರಾಫಿಕ್ ಜಾಮ್ನಲ್ಲಿ ಕಳೆಯಬೇಕಾಗುತ್ತದೆ. ಬೆಂಗಳೂರಿನಂತಹ ಸಿಟಿಗಳಲ್ಲಿ ಟ್ರಾಫಿಕ್ನಿಂದ ಪಾರಾಗಿ ಬರುವುದೆ ಒಂದು ಸಾಹಸ. ಅಂತಹ ಸಂದರ್ಭಗಳಲ್ಲಿ ಅನೇಕ ಜನರು ತಮ್ಮ ಕಾರಿನಲ್ಲಿ ಕುಳಿತು ಹಾಡನ್ನು ಕೇಳುವುದು ಅಥವಾ ಮೊಬೈಲ್‌ನಲ್ಲಿ ಮಾತನಾಡುವುದನ್ನು ನಾವು ನೀವು ನೋಡಿರುತ್ತೇವೆ. ಆದರೆ ಟ್ರಾಫಿಕ್ ಮಧ್ಯೆ ಯಾರಾದರೂ ಸ್ಕೂಟಿಯಲ್ಲಿ ವಿಶ್ರಾಂತಿ ಪಡೆಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಏಕೆಂದರೆ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಟ್ರಾಫಿಕ್ ಮಧ್ಯೆ ತನ್ನ ಸ್ಕೂಟಿ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾನೆ.
View this post on Instagram
ಈ ವೈರಲ್ ವಿಡಿಯೋದಲ್ಲಿ ನೀವು ಸುತ್ತಲೂ ಕಾರುಗಳು ನಿಲ್ಲಿಸಿರುವುದನ್ನು ನೋಡಬಹುದು. ಜನ ಸಂಚಾರಕ್ಕೆ ಕಾಯುತ್ತಿದ್ದಾರೆ. ಆದರೆ ಅಷ್ಟರಲ್ಲಿ ವ್ಯಕ್ತಿಯೊಬ್ಬ ತನ್ನ ಸ್ಕೂಟಿಯ ಮೇಲೆ ಕಾಲುಗಳನ್ನು ಅಗಲಿಸಿ ಆರಾಮವಾಗಿ ಮಲಗಿರುವುದನ್ನು ವಿಡಿಯೋದಲ್ಲಿ ಗಮನಿಸಬಹುವುದು. ಆತ ಸ್ಕೂಟಿ ಮೇಲೆ ಅಲ್ಲ, ಮನೆಯ ಹಾಸಿಗೆಯ ಮೇಲೆ ಮಲಗಿರುವಂತೆ ಕಾಣುತ್ತದೆ. ನಂತರ ಟ್ರಾಫಿಕ್ ತೆರೆದ ತಕ್ಷಣ ಅವನು ಎದ್ದು ಕುಳಿತುಕೊಳ್ಳುತ್ತಾನೆ.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಪ್ರಕರಣ; ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ಗೆ ಹೈಕೋರ್ಟ್ನಿಂದ ಬಿಗ್ ರಿಲೀಫ್
ಜನರು ಈ ವಿಡಿಯೋವನ್ನು ತುಂಬಾ ತಮಾಷೆಯಾಗಿ ತೆಗೆದುಕೊಂಡಿದ್ದಾರೆ. yoo__bros ಎಂಬ Instagram ಪುಟದಿಂದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 26 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋಗೆ ಜನರು ಸಾಕಷ್ಟು ತಮಾಷೆಯ ಕಾಮೆಂಟ್‌ಗಳನ್ನು ಸಹ ಮಾಡುತ್ತಿದ್ದಾರೆ. ನಾವು ರಸ್ತೆಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ನಾಚಿಕೆಪಡುತ್ತೇವೆ. ಆದರೆ ಈತ ಟ್ರಾಫಿಕ್‌ನಲ್ಲಿ ಮಲಗಿದ್ದಾರೆ ಮತ್ತು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಕಮೆಂಟ್ ಮಾಡಲಾಗಿದೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.