Optical Illusion: ನಿಮ್ಮ ಜಾಣತನಕ್ಕೊಂದು ಸವಾಲು, ಈ ಚಿತ್ರದಲ್ಲಿ ಎಷ್ಟು ಹುಲಿಗಳಿವೆ ಗುರುತಿಸಿ !
ಈ ಚಿತ್ರದಲ್ಲಿ ಒಟ್ಟು ಎಷ್ಟು ಹುಲಿಗಳು ಇವೆ? ಮೊದಲ ಈ ಚಿತ್ರದಲ್ಲಿ ಎರಡು ದೊಡ್ಡ ಹುಲಿಗಳು ಮತ್ತು ಎರಡು ಮರಿ ಹುಲಿಗಳು ಇವೆ.
ಕೆಲವೊಂದು ವಿಚಾರಗಳು ನಮ್ಮ ಜ್ಞಾನ ಮೀರಿದ್ದಾಗಿರುತ್ತದೆ. ಸಾಮಾನ್ಯವಾಗಿ ಕೆಲವೊಂದು ಪ್ರಶ್ನೆಗಳು, ಚಿತ್ರಗಳನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ವಿಚಾರಗಳಾಗಿರುತ್ತದೆ. ಅದರಲ್ಲೂ ಕೆಲವೊಂದು ಚಿತ್ರಗಳನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಸ್ಥಿತಿಯಲ್ಲಿರುತ್ತದೆ. ಜೊತೆಗೆ ಅವುಗಳನ್ನು ಅರ್ಥ ಮಾಡಿಕೊಳ್ಳವ ತಾಳ್ಮೆಯು ನಮ್ಮಲ್ಲಿರುವುದಿಲ್ಲ. ಒಂದು ಮಾತ್ರ ನಾವು ಅರ್ಥ ಮಾಡಿಕೊಳ್ಳಬೇಕು ಕೆಲವೊಂದು ಚಿತ್ರಗಳನ್ನು ಸರಿಯಾಗಿ ತಾಳ್ಮೆಯಿಂದ ನೋಡಿ ಅರ್ಥ ಮಾಡಿಕೊಂಡು ಅವುಗಳ ಸಾರಾಂಶ ಅಥವಾ ಆ ಚಿತ್ರದ ವಿಚಾರವನ್ನು ಸರಿಯಾಗಿ ಮನವರಿಕೆ ಮಾಡಿಕೊಳ್ಳಬೇಕು. ಇದು ಚಿತ್ರಕ್ಕೆ ಮಾತ್ರವಲ್ಲ, ನಮ್ಮ ಜೀವನದಲ್ಲೂ ಕೆಲವೊಂದನ್ನು ವಿಚಾರಗಳನ್ನು ಹೀಗೆ ತಾಳ್ಮೆಯಿಂದ ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕಿದೆ,. ಇದಕ್ಕೆ ಸಾಕ್ಷಿ ಎಂಬಂತೆ ಒಂದು ಚಿತ್ರ ಇಲ್ಲಿ ನೋಡಿ.
ಚಿತ್ರ -1
ಮೊದಲ ಈ ಚಿತ್ರದಲ್ಲಿ ಎರಡು ದೊಡ್ಡ ಹುಲಿಗಳು ಮತ್ತು ಎರಡು ಮರಿ ಹುಲಿಗಳು ಇವೆ. ಇದೊಂದು ಹುಲಿಗಳ ಕುಟುಂಬದ ಚಿತ್ರವಾಗಿದೆ . ವಾಸ್ತವವಾಗಿ ಈ ಚಿತ್ರದಲ್ಲಿ 16 ಹುಲಿಗಳಿವೆ. ಹೆಚ್ಚು ಆಸಕ್ತಿದಾಯಕ ಸಂಗತಿಯೆಂದರೆ, ಈ ಚಿತ್ರದಲ್ಲಿ ಇರುವ ಎಲ್ಲಾ ಹುಲಿಗಳನ್ನು 30 ಸೆಕೆಂಡುಗಳಲ್ಲಿ ಗುರುತಿಸಲು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಗುರುತಿಸಲು ತುಂಬಾ ಕಷ್ಟ . ಇಂತಹ ವಿಷಯಗಳನ್ನು ಪ್ರಯತ್ನಿಸಲು ತುಂಬಾ ಆಸಕ್ತಿದಾಯವಾಗಿರುತ್ತದೆ, ಆದರೆ ಇವುಗಳಿಂದ ಒಬ್ಬರು ಕಲಿಯಬಹುದಾದದ್ದು ಮೆದುಳು ಮತ್ತು ದೃಷ್ಟಿ ಚುರುಕುಗೊಳಿಸುವುದು. ಆಪ್ಟಿಕಲ್ ಭ್ರಮೆಗಳು ಚಿತ್ರವನ್ನು ನೋಡಿದ ಕೆಲವೇ ಸೆಕೆಂಡುಗಳಲ್ಲಿ ವಿಷಯಗಳನ್ನು ವಿಭಿನ್ನ ರೀತಿಯಲ್ಲಿ ನೋಡುವ ಬಗ್ಗೆ ನಮಗೆ ಕಲಿಸುತ್ತವೆ.
ಚಿತ್ರ-2
ಈ ನಾಲ್ಕು ಹುಲಿಗಳನ್ನು ಎಲ್ಲರೂ ಗುರುತಿಸಬಹುದು. ಇದರ ಜೊತೆಗೆ ಮತ್ತೆ ಎರಡು ಮರಿ ಹುಲಿಗಳು ಇವೆ ಅದನ್ನು ಸುಲಭವಾಗಿ ಗುರುತಿಸಬಹುದು. ಅದು ಎರಡು ಕಲ್ಲಿನ ಮೇಲೆ ಕುಳಿತಿರುವುದನ್ನು ನಾವು ಕಾಣಬಹುದು.
ಚಿತ್ರಿ -3
ಮೂರನೇ ಚಿತ್ರದಲ್ಲಿ ನೀವು ನೋಡಿದಂತೆ 4 ಹುಲಿಗಳು ಇವೆ. ಈ ಮೂರನೇ ಚಿತ್ರದಲ್ಲಿ ಹುಲಿಗಳು ಕೆಳಗಿನ ಕಲ್ಲುಗಳ ಮೇಲೆ ಕುಳಿತಿವೆ. ನಿಂತಿರುವ ಹುಲಿಯ ಪಕ್ಕದಲ್ಲಿ ಮೂರನೇ ಹುಲಿ ಗುಪ್ತವಾಗಿ ನಿಂತಿದೆ. ನೀವು ನೋಡಿ ಒಂದು ಬಾರಿ ಗಮನಿಸಿ.
ಚಿತ್ರ- 4
ಇಲ್ಲಿ ನಿಮ್ಮ ದೃಷ್ಟಿಯನ್ನು ಮರದ ಕಡೆಗೆ ತಿರುಗಿಸಿ,ಕೆಂಪು ಬಣ್ಣದಲ್ಲಿ ಮಾರ್ಕ್ ಮಾಡಲಾಗಿದೆ ಹುಲಿ ಎಲ್ಲಿದೆ ಎಂಬುದನ್ನು ತಿಳಿಸಲಾಗಿದೆ. ಮರದ ಮೇಲ್ಭಾಗವನ್ನು ಗುರುತಿಸುವುದು ಸುಲಭವಾದರೆ, ಕೆಳಭಾಗವನ್ನು ಗಮನಿಸುವುದು ಸ್ವಲ್ಪ ಕಷ್ಟ. ನಿಮ್ಮ ಕಣ್ಣುಗಳನ್ನು ಮರದ ಮೇಲಿನ ಕೊಂಬೆಯತ್ತ ಸರಿಸಿ. ಒಂದು ಹುಲಿಯನ್ನು ಅಸ್ತಮಿಸುವ ಸೂರ್ಯನ ಪಕ್ಕದಲ್ಲಿ ಮತ್ತು ಇನ್ನೊಂದನ್ನು ಅದರ ಪಕ್ಕದಲ್ಲಿ ನೀವು ನೋಡಬಹುದೇ?
ಚಿತ್ರ-5
ಇಲ್ಲಿ ನೋಡಿ ಈ 5 ಹುಲಿಗಳನ್ನು ಗುರುತಿಸುವುದು ಅತ್ಯಂತ ಕಷ್ಟಕರವಾಗಬಹುದು. ಎಷ್ಟು ಬುದ್ಧಿವಂತಿಕೆಯಿಂದ ಈ ಚಿತ್ರವನ್ನು ಹಾಕಿದ್ದಾರೆ ನೋಡಿ. ಒಬ್ಬ ವ್ಯಕ್ತಿಗೆ ಅವುಗಳನ್ನು ಮೊದಲ ನೋಟದಲ್ಲಿ ಗುರುತಿಸುವುದು ತುಂಬಾ ಕಷ್ಟ. ಆಪ್ಟಿಕಲ್ ಭ್ರಮೆಗಳು ಮೆದುಳು ಮತ್ತು ದೃಷ್ಟಿಗೆ ಇದೊಂದು ಸವಾಲಾಗಿದೆ.
Published On - 8:00 am, Wed, 15 June 22