ಪಿಜ್ಜಾ ಡೆಲಿವರಿ ಹುಡುಗಿಯ ಮೇಲೆ ನಾಲ್ವರು ಯುವತಿಯರ ಪ್ರತಾಪ, ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿತ, ಎಲ್ಲಿ?

ಮಧ್ಯ ಪ್ರದೇಶದ ಇಂದೋರ್​ ನಲ್ಲಿ ನಾಲ್ವರು ಯುವತಿಯರು ಪಿಜ್ಜಾ ಡೆಲಿವರಿ ಮಾಡಲು ಬಂದಿದ್ದ ಹುಡುಗಿಯ ಮೇಲೆ ತಮ್ಮ ಪ್ರತಾಪ ತೋರಿದ್ದಾರೆ. ಆ ಹುಡುಗಿಯನ್ನು ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಪಿಜ್ಜಾ ಡೆಲಿವರಿ ಹುಡುಗಿಯ ಮೇಲೆ ನಾಲ್ವರು ಯುವತಿಯರ ಪ್ರತಾಪ, ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿತ, ಎಲ್ಲಿ?
ಪಿಜ್ಜಾ ಡೆಲಿವರಿ ಹುಡುಗಿಯ ಮೇಲೆ ಯುವತಿಯರ ಪ್ರತಾಪ, ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿತ, ಎಲ್ಲಿ?
Follow us
| Updated By: ಸಾಧು ಶ್ರೀನಾಥ್​

Updated on:Jun 14, 2022 | 4:58 PM

ಇಂದೋರ್​: ಮಧ್ಯ ಪ್ರದೇಶದ ಇಂದೋರ್​ ನಲ್ಲಿ ನಾಲ್ವರು ಯುವತಿಯರು ವಾರಾಂತ್ಯ ಎಂಜಾಯ್ಮೆಂಟ್​​ಗಾಗಿ ಪಿಜ್ಜಾ ಡೆಲಿವರಿ ಮಾಡಲು ಬಂದಿದ್ದ ಹುಡುಗಿಯ ಮೇಲೆ ತಮ್ಮ ಪ್ರತಾಪ ತೋರಿದ್ದಾರೆ. ಆ ಹುಡುಗಿಯನ್ನು ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದಿಷ್ಟೂ ಪ್ರಸಂಗ ವಿಡಿಯೋದಲ್ಲಿ ಸೆರೆಯಾಗಿದೆ. ಪಿಜ್ಜಾ ಹುಡುಗಿಯ ಬಗ್ಗೆ ಕನಿಕರ ತೋರಿ, ಆ ವಿಡಿಯೋ ವೈರಲ್ ಸಹ ಆಗಿದೆ.

ಆರೋಪಿತ ನಾಲ್ವರು ಯುವತಿಯರು ಡಾಮಿನೋಸ್ ಪಿಜ್ಜಾಗಾಗಿ ಆರ್ಡರ್​ ಮಾಡಿದ್ದರು. ಪಿಜ್ಜಾ ಡೆಲಿವರಿ ಮಾಡಿದ ಬಳಿಕ ಆ ನಾಲ್ವರೂ ಯುವತಿಯರು ಮನೆ ಮುಂದೆ ಬೀದಿಯಲ್ಲಿ ಪಿಜ್ಜಾ ಡೆಲಿವರಿ ಹುಡುಗಿಯನ್ನು ನೆಲಕ್ಕೆ ಕೆಡವಿಕೊಂಡು ಪ್ರಾಣಿಗಳಿಗೆ ಬಡಿಯುವಂತೆ ಬಡಿದಿದ್ದಾರೆ. ಆ ಪಿಜ್ಜಾ ಡೆಲಿವರಿ ಹುಡುಗಿ ದಮ್ಮಯ್ಯ ನನ್ನನ್ನು ಬಿಟ್ಟು ಬಿಡಿ ಎಂದು ಗೋಗರೆಯುತ್ತಿದ್ದರೂ ಕೇಳದೆ, ಮತ್ತಷ್ಟು ರೋಷಾವೇಶಗೊಂಡು ಬಾರಿಸಿದ್ದಾರೆ. ಬರಿಗಯ್ಯಲ್ಲಷ್ಟೇ ಅಲ್ಲ; ಕೋಲು ತೆಗೆದುಕೊಂಡು ಸಹ ಬಾರಿಸಿದ್ದಾರೆ.

ಇದನ್ನು ಓದಿ: ರಾಹುಲ್​ ‘ಇಡಿ’ ಗಂಟು ಜಪ್ತಿ? ಇಡಿ ವಿಚಾರಣೆ ಖಂಡಿಸಿ ​ ಕಾಂಗ್ರೆಸ್ ಹೋರಾಟ ಮಾಡ್ತಿದ್ದರೆ, ಬಿಜೆಪಿ ಇದನ್ನು ಪ್ರಶ್ನಿಸಿದೆ: ಟಿವಿ9 ಚರ್ಚೆ

ಇದನ್ನು ಓದಿ: ನಾಗರಿಕತೆ ಅಂದರೆ ನಾವು ಏನು ಎಂದು ಅರ್ಥ, ಸಂಸ್ಕೃತಿ ಎಂದರೆ ನಮ್ಮ ಬಳಿ ಏನಿದೆ ಎಂಬುದು: ಸಿಎಂ ಬಸವರಾಜ ಬೊಮ್ಮಾಯಿ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ಮಂದಿ, ಪಿಜ್ಜಾ ಡೆಲಿವರಿ ಹುಡುಗಿ ಬಗ್ಗೆ ಮರುಕ ವ್ಯಕ್ತಪಡಿಸಿ, ಅವಳು ಏನೇ ತಪ್ಪು ಮಾಡಿದ್ದರೂ ಹೀಗೆಲ್ಲಾ ನಡೆದುಕೊಳ್ಳಬಾರದಿತ್ತು. ಬುದ್ಧಿವಾದ ಹೇಳಬೇಕಿತ್ತು, ಅಥವಾ ಪೊಲೀಸರಿಗೆ ಒಪ್ಪಿಸಬೇಕಿತ್ತು. ದೌರ್ಜನ್ಯವೆಸಗಿದ ಆ ನಾಲ್ಕೂ ಯುವತಿಯರನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆ ಕಳೆದ ವಾರಾಂತ್ಯ ಶನಿವಾರ ಇಂದೋರ್​ನ ದ್ವಾರಕಾಪುರಿಯಲ್ಲಿ ನಡೆದಿರುವುದು ಎಂದು ತಿಳಿದುಬಂದಿದೆ.

ಪಿಜ್ಜಾ ಹುಡುಗಿಯ ಜುಟ್ಟು ಹಿಡಿದೆಳೆದು ಹಿಗ್ಗಾಮುಗ್ಗಾ ಥಳಿಸಿದ್ದು ಏಕೆ? ಆಘಾತಕಾರಿ ಸಂಗತಿ ಇಲ್ಲಿದೆ:

ಪಿಜ್ಜಾ ಹುಡುಗಿಯ ಜುಟ್ಟು ಹಿಡಿದೆಳೆದು ಹಿಗ್ಗಾಮುಗ್ಗಾ ಥಳಿಸಿದ್ದು ಏಕೆ ಎಂಬುದರ ಬೆನ್ನು ಹತ್ತಿದಾಗ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಆರೋಪಿತ ನಾಲ್ವರೂ ಯುವತಿಯರು ಸ್ಥಳೀಯ ಪರೋಡಿಗಳು. ಹವಾ ಮೈಂಟೇನ್ ಮಾಡಲು ಪಿಜ್ಜಾ ಹುಡುಗಿಗೆ ಬಾರಿಸಿದ್ದೂ ಅಲ್ಲದೆ, ಅದನ್ನೆಲ್ಲ ವಿಡಿಯೋ ಮಾಡಿಸಿ, ತಮ್ಮ ದಾದಾಗಿರಿ ತೋರಿಸಲು ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದಾರೆ ಎಂದುತಿಳಿದುಬಂದಿದೆ.

ನಾಲ್ವರು ಯುವತಿಯರ ಬಗ್ಗೆ ಸ್ಥಳೀಯರಲ್ಲಿಯೂ ಭಯ ಮನೆ ಮಾಡಿದ್ದು, ಯಾರೊಬ್ಬರೂ ಪಿಜ್ಜಾ ಹುಡುಗಿಯ ನೆರವಿಗೆ ಬರುವುದಿಲ್ಲ. ಪೊಲೀಸರಿಗೆ ಕಂಪ್ಲೇಂಟ್ ಮಾಡ್ತೀವಿ ಎಂದರೂ ಆರೋಪಿ ಯುಬವತಿಯರು ಡೋಂಟ್ ಕೇರ್​ ಅಂದಿದ್ದಾರೆ. ಕೊನೆಗೆ ಸಂತ್ರಸ್ತೆ ನಂದಿನಿ ಮನೆಯೊಂದರ ಗೇಟ್ ತಳ್ಳಿಕೊಂಡು ಒಳನುಸುಳಿ, ಅಪಾಯದಿಂದ ಪಾರಾಗಿದ್ದಾರೆ.​

ಡಾಮಿನೋಸ್ ಪಿಜ್ಜಾ ಹುಡುಗಿ ಕೊನೆಗೆ ಧೈರ್ಯ ಮಾಡಿ, ಸೀದಾ ಸ್ಥಳೀಯ ಪೊಲೀಸ್ ಸ್ಟೇಷನ್ ತೆರಳಿ, ​ ಪರೋಡಿ ಯುವತಿಯರ ವಿರುದ್ಧ ದೂರು ದಾಖಲಿಸಿದ್ದಾಳೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

To Read in Telugu Click Here

Published On - 4:33 pm, Tue, 14 June 22

Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ