Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಖತ್ ವೈರಲ್ ಆಗುತ್ತಿದೆ ಈ ಸ್ನೇಹಿತ ಹುಲಿಗಳ ವಿಡಿಯೋ

ಪ್ರಸ್ತುತ ಕಾಲದಲ್ಲಿ ಹುಲಿಗಳ ಸಂತತಿ ಕಡಿಮೆಯಾಗುತ್ತ ಬರುತ್ತಿದೆ. ಈ ನಡುವೆ ಹುಲಿಗಳನ್ನು ಕಾಪಾಡುವ ಬಗ್ಗೆ ಜಾಗೃತಿಯು ನಡೆಯುತ್ತಿದೆ. ವನ್ಯಜೀವಿ ಸಂರಕ್ಷಣಾ ಕೇಂದ್ರಗಳು ಅವುಗಳನ್ನು ಉಳಿಸಲು ಪ್ರಯತ್ನಿಸುತ್ತಿವೆ.

Viral Video: ಸಖತ್ ವೈರಲ್ ಆಗುತ್ತಿದೆ ಈ ಸ್ನೇಹಿತ ಹುಲಿಗಳ ವಿಡಿಯೋ
ಸ್ನೇಹಿತ ವಿಡಿಯೋಗಳು Image Credit source: NDTV
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 14, 2022 | 6:44 PM

ಹುಲಿಗಳು ಕ್ರೂರವಾಗಿದ್ದರು, ಕೆಲವೊಂದು ಬಾರಿ ಅವುಗಳು ಕೂಡ ಚೇಷ್ಟೆಯನ್ನು ಮಾಡುತ್ತದೆ.  ಹುಲಿಯೊಂದು ತನ್ನ ಸ್ನೇಹಿತ ಹುಲಿಯೊಂದಿಗೆ ಆಟ ಆಡುತ್ತಿರುವ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಬೃಹತ್ ಗಾತ್ರದ ಎರಡು ಹುಲಿಗಳು ಕಾಡಿನಲ್ಲಿ ಎದುರಾಗಿ ತಮಾಷೆಯಾಗಿ ಆಟವಾಡುವುದನ್ನು ಕ್ಯಾಮರದಲ್ಲಿ ಸೆರೆಹಿಡಿಯಲಾಗಿದೆ.  ಪ್ರಸ್ತುತ ಕಾಲದಲ್ಲಿ ಹುಲಿಗಳ ಸಂತತಿ ಕಡಿಮೆಯಾಗುತ್ತ ಬರುತ್ತಿದೆ. ಈ ನಡುವೆ ಹುಲಿಗಳನ್ನು ಕಾಪಾಡುವ ಬಗ್ಗೆ ಜಾಗೃತಿಯು ನಡೆಯುತ್ತಿದೆ. ವನ್ಯಜೀವಿ ಸಂರಕ್ಷಣಾ ಕೇಂದ್ರಗಳು ಅವುಗಳನ್ನು ಉಳಿಸಲು ಪ್ರಯತ್ನಿಸುತ್ತಿವೆ. ಈ ಸಮಯದಲ್ಲಿ  ಹುಲಿಗಳು ಕಾಡಿನಲ್ಲಿ  ಆಡುವುದನ್ನು ನೋಡುವುದು ಕಣ್ಣಿಗೆ ಸಂತೋಷವನ್ನು ನೀಡುತ್ತದೆ. ಎಂಪಿ ಟೈಗರ್ ಫೌಂಡೇಶನ್‌ನಲ್ಲಿ ಎರಡು ಹುಲಿಗಳು ತಮಾಷೆಯ ಮನಸ್ಥಿತಿಯಲ್ಲಿ ಕಾಣಿಸಿಕೊಂಡವು. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.  ಇದೀಗ  ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

20 ಸೆಕೆಂಡುಗಳ ವೀಡಿಯೊದಲ್ಲಿ, ಎರಡು ಹುಲಿಗಳು ಕಾಡಿನ ಪೋದೆಯಲ್ಲಿ ಸುತ್ತಾಡುತ್ತ, ಒಂದರ ಮೇಲೆ ಒಂದು ಎರಗುತ್ತ, ಆಟವಾಡುತ್ತಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ಕಾಣಬಹುದು. ಸುಶಾಂತ ನಂದಾ ಅವರು ಮಾಡಿರುವ ಟ್ವಿಟ್    ಶೀರ್ಷಿಕೆಯಲ್ಲಿ  “ಈ ಒಡಹುಟ್ಟಿದವರು ಲೂಪ್‌ನಲ್ಲಿ ಆಡುವುದನ್ನು ನೋಡುವುದೇ ಚಂದ. ಕೇವಲ ಒಂದು ದಶಕದ ಹಿಂದೆ, ಈ ಹುಲಿ ಸಂರಕ್ಷಿತ ಪ್ರದೇಶದ ಸಂಪೂರ್ಣ ಹುಲಿಗಳನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಪರಿಗಣಿಸಲಾಗಿತ್ತು. ಈಗ, ಇದು 45/50 ವಯಸ್ಕರ ಮತ್ತು 20/25 ಮರಿಗಳು ಇಲ್ಲಿವೆ.  ವೀಡಿಯೊವನ್ನು 500 ಕ್ಕೂ ಹೆಚ್ಚು ಬಾರಿ ಮರು ಟ್ವೀಟ್ ಮಾಡಲಾಗಿದೆ ಹಾಗೂ ಇದು 4,000 ಕ್ಕೂ ಹೆಚ್ಚು ಲೈಕ್‌ಗಳನ್ನು ಸಹ ಪಡೆದಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಹುಲಿಗಳಿಗೆ ಈ ಶ್ವಾನ ತಾಯಿ! ಇಲ್ಲಿದೆ ನೋಡಿ ಅದ್ಭುತ ವಿಡಿಯೋ

ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:57 pm, Tue, 14 June 22