AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amritpal Singh: ವಿಡಿಯೊ ಸಂದೇಶ ಬಿಡುಗಡೆ ಮಾಡಿದ ಅಮೃತಪಾಲ್ ಸಿಂಗ್, ಪಂಜಾಬ್ ಪೊಲೀಸರ ಮುಂದಿರಿಸಿದ 3 ಷರತ್ತುಗಳೇನು?

ತಲೆಮರೆಸಿಕೊಂಡಿರುವ ಹೊತ್ತಲ್ಲಿ ಪ್ರಸಾರ ಮಾಡುವುದಕ್ಕಾಗಿ ರೆಕಾರ್ಡ್ ಮಾಡಲಾದ ಸಂದೇಶದಲ್ಲಿ, ಅಮೃತಪಾಲ್ ಸಿಂಗ್ ಬೈಸಾಖಿಯ ಸಂದರ್ಭದಲ್ಲಿ ಸರ್ಬತ್ ಖಾಲ್ಸಾಗೆ (ಸಿಖ್ ಧಾರ್ಮಿಕ ಸಭೆ) ಕರೆ ನೀಡಿದ್ದು ಅವರ ಸಹಾಯಕರ ಬಂಧನ ಮತ್ತು ಅಸ್ಸಾಂ ಜೈಲಿನಲ್ಲಿ ಅವರನ್ನು ಬಂಧಿಸಿರುವ ಬಗ್ಗೆ ಮಾತನಾಡಿದ್ದಾರೆ.

Amritpal Singh: ವಿಡಿಯೊ ಸಂದೇಶ ಬಿಡುಗಡೆ ಮಾಡಿದ ಅಮೃತಪಾಲ್ ಸಿಂಗ್, ಪಂಜಾಬ್ ಪೊಲೀಸರ ಮುಂದಿರಿಸಿದ 3 ಷರತ್ತುಗಳೇನು?
Follow us
ರಶ್ಮಿ ಕಲ್ಲಕಟ್ಟ
|

Updated on:Mar 29, 2023 | 6:41 PM

ಪೊಲೀಸರಿಂದ ತಪ್ಪಿಸಿಕೊಂಡಿರುವ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ (Amritpal Singh) ಇಂದು ಸ್ವರ್ಣಮಂದಿರದಲ್ಲಿ ಶರಣಾಗುತ್ತಾರೆ ಎಂಬ ಊಹಾಪೋಹಗಳ ನಡುವೆ ಬುಧವಾರ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.ಇದರಲ್ಲಿ ಸಿಂಗ್ ಪಂಜಾಬ್ ಪೊಲೀಸರನ್ನು(Punjab police) ತರಾಟೆಗೆ ತೆಗೆದುಕೊಂಡಿದ್ದು, ಪಂಜಾಬ್ (Punjab) ಸರ್ಕಾರಕ್ಕೆ ತನ್ನನ್ನು ಬಂಧಿಸುವ ಉದ್ದೇಶವಿದ್ದರೆ ಪೊಲೀಸರು ತಮ್ಮ ಮನೆಗೆ ಬರಬಹುದಿತ್ತು ಎಂದಿದ್ದಾರೆ.ತಲೆಮರೆಸಿಕೊಂಡಿರುವ ಹೊತ್ತಲ್ಲಿ ಪ್ರಸಾರ ಮಾಡುವುದಕ್ಕಾಗಿ ರೆಕಾರ್ಡ್ ಮಾಡಲಾದ ಸಂದೇಶದಲ್ಲಿ, ಅಮೃತಪಾಲ್ ಸಿಂಗ್ ಬೈಸಾಖಿಯ ಸಂದರ್ಭದಲ್ಲಿ ಸರ್ಬತ್ ಖಾಲ್ಸಾಗೆ (ಸಿಖ್ ಧಾರ್ಮಿಕ ಸಭೆ) ಕರೆ ನೀಡಿದ್ದು ಅವರ ಸಹಾಯಕರ ಬಂಧನ ಮತ್ತು ಅಸ್ಸಾಂ ಜೈಲಿನಲ್ಲಿ ಅವರನ್ನು ಬಂಧಿಸಿರುವ ಬಗ್ಗೆ ಮಾತನಾಡಿದ್ದಾರೆ. ಮಾರ್ಚ್ 18 ರಂದು ಪಂಜಾಬ್ ಪೊಲೀಸರು ತನ್ನ ಮತ್ತು ಸಂಘಟನೆಯ ಮೇಲೆ ಕಾರ್ಯಾಚರಣೆ ಪ್ರಾರಂಭಿಸಿದ ನಂತರ ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಸಿಂಗ್ ನೀಡಿದ ಮೊದಲ ವಿಡಿಯೊ ಹೇಳಿಕೆ ಇದಾಗಿದೆ. ಜನರು ಒಗ್ಗೂಡುವಂತೆ ಕರೆ ನೀಡಿದ ಅಮೃತಪಾಲ್, ತಾನು ಈವರೆಗೆ ಬಂಧಿತನಾಗಿಲ್ಲ ಎಂದಿದ್ದಾರೆ.

ಮೂಲಭೂತವಾದಿ ಸಿಖ್ ಬೋಧಕ ಅಮೃತಪಾಲ್ ಸಿಂಗ್ ಪೊಲೀಸರ ಕಣ್ತಪ್ಪಿಸಿ ಓಡಿಹೋದ ನಂತರ ಬಿಡುಗಡೆ ಮಾಡಿದ ಮೊದಲ ವಿಡಿಯೊ ಇದಾಗಿದೆ.

ಖಲಿಸ್ತಾನ್ ಸಹಾನುಭೂತಿ ಅಮೃತಪಾಲ್ ಸಿಂಗ್ ಶರಣಾಗುವ ಸಾಧ್ಯತೆಯಿದೆ. ಆದರೆ ಪ್ರತ್ಯೇಕತಾವಾದಿ ನಾಯಕ ಪಂಜಾಬ್ ಪೊಲೀಸರ ಮುಂದೆ ಮೂರು ಷರತ್ತುಗಳನ್ನು ಮುಂದಿಟ್ಟಿದ್ದಾನೆ ಎಂದು ಟಿವಿ9 ಮೂಲಗಳು ತಿಳಿಸಿವೆ.

ಸುಮಾರು 12 ದಿನಗಳ ಕಾಲ ಪೊಲೀಸರ ವಶದಿಂದ ತಪ್ಪಿಸಿಕೊಂಡಿರುವ ಅಮೃತಪಾಲ್ ಇರಿಸಿದ ಷರತ್ತುಗಳು ಹೀಗಿವೆ. ತನ್ನನ್ನು ಕಸ್ಟಡಿಗೆ ತೆಗೆದುಕೊಂಡರೆ ತಾನು ಪೊಲೀಸರಿಗೆ ಶರಣಾಗಿದ್ದೇನೆ ಎಂದು ಪರಿಗಣಿಸಬೇಕು, ಬಂಧಿತನಾಗಿದ್ದಾನೆ ಎಂದು ಹೇಳಬಾರದು. ಪಂಜಾಬ್‌ನ ಜೈಲಿನಲ್ಲಿ ಇರಿಸಬೇಕು. ಕಸ್ಟಡಿಯಲ್ಲಿ ಹೊಡೆಯಬಾರದು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಈತ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾದ ನಂತರ ಹುಡುಕಾಟ ತೀವ್ರಗೊಂಡಿದೆ. ಅಮೃತಪಾಲ್ ಮತ್ತು ಅವರ ಆಪ್ತ ಸಹಾಯಕ ಪಾಪಲ್ ಪ್ರೀತ್ ಮತ್ತೊಮ್ಮೆ ಕಾರ್ ಚೇಸ್​​ನಲ್ಲಿ ಪೊಲೀಸರಿಂದ ತಪ್ಪಿಸಿದ ನಂತರ ಮನೆ ಮನೆಗೆ ಹೋಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಮೃತಪಾಲ್ ಶರಣಾಗುವ ಸಾಧ್ಯತೆಯಿದೆ ಎಂದು ವರದಿಯಾಗಿರುವ ಗೋಲ್ಡನ್ ಟೆಂಪಲ್ ಸುತ್ತಲೂ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ನಂತರ ಅಮೃತಸರದ ಪೊಲೀಸ್ ಕಮಿಷನರ್ ನೌನಿಹಾಲ್ ಸಿಂಗ್ ಅವರು ಅಮೃತಪಾಲ್ ಅವರು ಗೋಲ್ಡನ್ ಟೆಂಪಲ್‌ನಲ್ಲಿ ಶರಣಾಗುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು. ಗೋಲ್ಡನ್ ಟೆಂಪಲ್ ಸುತ್ತಲೂ ಯಾವುದೇ ಹೆಚ್ಚುವರಿ ಭದ್ರತಾ ವ್ಯವಸ್ಥೆಗಳಿವೆಯೇ ಎಂದು ಕೇಳಿದಾಗ, ಬೈಸಾಖಿಯಿಂದಾಗಿ ಅಮೃತಸರಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಕಾರಣ ಈ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Madhya Pradesh: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚಿರತೆ

ಅದೇ ವೇಳೆ ಅಮೃತಪಾಲ್ , ಗೋಲ್ಡನ್ ಟೆಂಪಲ್‌ನಲ್ಲಿ ಶರಣಾಗಲು ನಿರ್ಧರಿಸಿದರೆ ಶರಣಾಗಬಹುದು ಎಂದು ಸಿಂಗ್ ಹೇಳಿದರು. ಕೆಲವು ವರದಿಗಳು ಅಮೃತಪಾಲ್ ಸಿಖ್ ಧರ್ಮದ ಐದು ತಾತ್ಕಾಲಿಕ ಸ್ಥಾನಗಳಲ್ಲಿ ಒಂದಾದ ಭಟಿಂಡಾದ ಶ್ರೀ ದಮದಮ ಸಾಹಿಬ್‌ನಲ್ಲಿ ಶರಣಾಗಬಹುದು ಎಂದು ಹೇಳಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:10 pm, Wed, 29 March 23