
ಹೈದರಾಬಾದ್, ಜನವರಿ 30: ಹೈದರಾಬಾದ್‌ನ ದಂಪತಿ ತಮ್ಮ ಸಾಕು ನಾಯಿಯನ್ನು ಆಸ್ಟ್ರೇಲಿಯಾಕ್ಕೆ ಕರೆದುಕೊಂಡು ಹೋಗಲು 1.5 ಮಿಲಿಯನ್ (15 ಲಕ್ಷ ರೂ.) ಖರ್ಚು ಮಾಡಿದ್ದಾರೆ. ಆದರೂ ಆ ನಾಯಿ (Dog) ಆಸ್ಟ್ರೇಲಿಯಾಕ್ಕೆ ಬರುವ ಮೊದಲು 6 ತಿಂಗಳು ದುಬೈನಲ್ಲಿ ಇರಬೇಕಾಯಿತು. ಆ ದಂಪತಿಯ ಕುಟುಂಬಸ್ಥರು ಆ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯುವ ಬದಲು ಅಲ್ಲಿಯೇ ಹೊಸ ನಾಯಿಯನ್ನು ಖರೀದಿಸಲು ಸೂಚಿಸಿದರು. ಆದರೆ, ಅದಕ್ಕೆ ಅವರು ಒಪ್ಪಲಿಲ್ಲ.
ಆ ದಂಪತಿ ತಾವು ಸಾಕಿದ ನಾಯಿಯನ್ನೇ ಆಸ್ಟ್ರೇಲಿಯಾಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಅವರು ತಮ್ಮ ಸಾಕು ನಾಯಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಲಕ್ಷಾಂತರ ರೂ. ಬೇಕಾದರೂ ಖರ್ಚು ಮಾಡಲು ತಯಾರಿದ್ದರು. ಆ ನಾಯಿ ತಮ್ಮ ಮಗು, ಅದನ್ನು ಬಿಟ್ಟು ಹೋಗಲು ಸಾಧ್ಯವೇ ಇಲ್ಲ ಎಂದು ಅವರು ಹಠ ಹಿಡಿದರು.
ಇದನ್ನೂ ಓದಿ: ಹಿಮಪಾತದಿಂದ ಯಜಮಾನ ಸತ್ತರೂ 3 ದಿನ ಹೆಣದ ಬಳಿಯೇ ನಿಂತು ಕಾದ ಸಾಕುನಾಯಿ!
ಹೀಗಾಗಿ, ಹೈದರಾಬಾದ್ ಬಿಟ್ಟು ಆಸ್ಟ್ರೇಲಿಯಾಕ್ಕೆ ಹೋಗಲು ನಿರ್ಧರಿಸಿದಾಗ ಅವರು ತಮ್ಮ ನಾಯಿ ‘ಸ್ಕೈ’ ಅನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು. ಆದರೆ ಆ ನಾಯಿಯನ್ನು ನೇರವಾಗಿ ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲು ಸಾಧ್ಯವಿಲ್ಲ ಎಂದು ತಿಳಿದು ಅವರು ತುಂಬಾ ದುಃಖಿತರಾಗಿದ್ದರು. ಇದಲ್ಲದೆ, ತಮ್ಮ ನಾಯಿ 6 ತಿಂಗಳ ಕಾಲ ರೇಬೀಸ್ ಮುಕ್ತ ದೇಶದಲ್ಲಿ ಇರಬೇಕಾಗುತ್ತದೆ ಎಂಬ ಅಂಶದ ಬಗ್ಗೆ ದಂಪತಿ ಇನ್ನಷ್ಟು ಚಿಂತಿತರಾಗಿದ್ದರು. ಆ ನಾಯಿ 6 ತಿಂಗಳು ದುಬೈನಲ್ಲಿ ಇರಬೇಕಾಯಿತು. ಆ ದಂಪತಿ ಕೂಡ ಆ ನಾಯಿಗೆ ಸಹಾಯ ಮಾಡಲು ಒಂದು ತಿಂಗಳು ದುಬೈನಲ್ಲಿಯೇ ಇದ್ದರು. ಅದಾದ ನಂತರ ಅವರು ಆಸ್ಟ್ರೇಲಿಯಾಕ್ಕೆ ಮರಳಿದರು.
ಉಳಿದ 5 ತಿಂಗಳು ಅವರು ಫೋನ್ ಮತ್ತು ವೀಡಿಯೊ ಕರೆಗಳ ಮೂಲಕ ಆ ನಾಯಿಯನ್ನು ಪರಿಶೀಲಿಸುತ್ತಲೇ ಇದ್ದರು. “ಸ್ಕೈ ನಮ್ಮ ಸಾಕುಪ್ರಾಣಿ ಮಾತ್ರವಲ್ಲ, ಅದು ನಮ್ಮ ಮಗುವಿನಂತೆ” ಎಂದು ಅವರು ಹೇಳಿದ್ದಾರೆ. ಆರು ತಿಂಗಳ ನಂತರ ಸ್ಕೈ ಆಸ್ಟ್ರೇಲಿಯಾಕ್ಕೆ ಹೋದಾಗ ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ನಾಯಿಯ ಹೈದರಾಬಾದ್ ನಿಂದ ಆಸ್ಟ್ರೇಲಿಯಾ ಪ್ರಯಾಣಕ್ಕೆ ವಿಮಾನ ಪ್ರಯಾಣ ಸೇರಿದಂತೆ ಸುಮಾರು 1.5 ಮಿಲಿಯನ್ ರೂ. ಖರ್ಚಾಗಿದೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ