AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಪಾತದಿಂದ ಯಜಮಾನ ಸತ್ತರೂ 3 ದಿನ ಹೆಣದ ಬಳಿಯೇ ನಿಂತು ಕಾದ ಸಾಕುನಾಯಿ!

ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಇದರಿಂದ ಕೆಲವು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದರೆ ಇನ್ನು ಕೆಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಂಬಾದ ಹಿಮಪಾತದ ಪರ್ವತಗಳಲ್ಲಿ ನಿಯತ್ತಿನ ನಾಯಿಯೊಂದು ತನ್ನ ಮಾಲೀಕರ ಮೃತದೇಹದ ಬಳಿ 3 ದಿನಗಳಿಂದ ಕಾವಲು ಕಾಯುತ್ತಿರುವ ಘಟನೆ ಎಲ್ಲರ ಗಮನ ಸೆಳೆದಿದೆ. ಹಿಮಪಾತದಿಂದ ತನ್ನ ಯಜಮಾನರಿಬ್ಬರು ಸಾವನ್ನಪ್ಪಿರುವುದನ್ನು ಕಂಡು ಶೋಕದಿಂದ ಆ ನಾಯಿ 72 ಗಂಟೆಗಳ ಕಾಲ ಆಹಾರವನ್ನೂ ಸೇವಿಸದೆ, ಮೈ ಕೊರೆಯುವ ಚಳಿಯಲ್ಲಿ ಅವರ ಮೃತದೇಹದ ಪಕ್ಕ ನಿಂತು ಕಾವಲು ಕಾಯುತ್ತಾ ಇತ್ತು.

ಹಿಮಪಾತದಿಂದ ಯಜಮಾನ ಸತ್ತರೂ 3 ದಿನ ಹೆಣದ ಬಳಿಯೇ ನಿಂತು ಕಾದ ಸಾಕುನಾಯಿ!
Dog Stands Beside Owner Body
ಸುಷ್ಮಾ ಚಕ್ರೆ
|

Updated on: Jan 27, 2026 | 5:43 PM

Share

ಚಂಬಾ, ಜನವರಿ 27: ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ನಾಯಿ ತನಗೆ ಕೊಂಚ ಪ್ರೀತಿ ತೋರಿದರೂ, ಒಂದು ತುತ್ತು ಅನ್ನ ಹಾಕಿದರೂ ಅವರನ್ನು ಸಾಯೋವರೆಗೂ ಮರೆಯುವುದಿಲ್ಲ. ಹಿಮಾಚಲ ಪ್ರದೇಶದಲ್ಲಿ ಒಂದು ವಿಚಿತ್ರವಾದ ಮನ ಕಲಕುವ ಘಟನೆ ನಡೆದಿದೆ. ಹಿಮಾಚಲ ಪ್ರದೇಶಕ್ಕೆ ಹೋಗಿದ್ದ ಅಣ್ಣ-ತಮ್ಮಂದಿರಿಬ್ಬರು ತಮ್ಮ ಜೊತೆಗೆ ಸಾಕುನಾಯಿಯಾದ ಪಿಟ್ ಬುಲ್ ಅನ್ನು ಕೂಡ ಕರೆದುಕೊಂಡು ಹೋಗಿದ್ದರು. ಅಲ್ಲಿ ರೀಲ್ಸ್ ಮಾಡುತ್ತಿದ್ದಾಗ ಹಿಮಪಾತವಾಗಿತ್ತು. ಇದರಿಂದ ಆ ಇಬ್ಬರು ಹಿಮದಡಿ (Snowfall) ಸಿಲುಕಿ ಮೃತಪಟ್ಟಿದ್ದರು.

ಹಿಮಪಾತದ ನಂತರ ನಾಪತ್ತೆಯಾಗಿದ್ದ ಬಿಕ್ಷಿತ್ ರಾಣಾ ಮತ್ತು ಪಿಯೂಷ್ ಎಂಬ ಕಸಿನ್​ಗಳಿಗಾಗಿ ಹುಡುಕಾಟ ನಡೆದಿತ್ತು. ಈ ಘಟನೆ ನಡೆದು 3 ದಿನಗಳ ನಂತರ ಅವರ ಮೃತದೇಹ ಪತ್ತೆಯಾಗಿದೆ. ವಿಚಿತ್ರವೆಂದರೆ ಆ ಮೃತದೇಹಗಳ ಪಕ್ಕದಲ್ಲಿ ಅವರ ಮುದ್ದಿನ ಸಾಕುನಾಯಿ ಪಿಟ್​ಬುಲ್ 72 ಗಂಟೆಗಳಿಂದ ಕಾಯುತ್ತಾ ನಿಂತಿತ್ತು. ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೋರ್‌ನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ಇದನ್ನೂ ಓದಿ: Video: ಊಟ, ನಿದ್ರೆ ಬಿಟ್ಟು ಮಾಲೀಕರ ಶವದ ಬಳಿ ಕುಳಿತ ಶ್ವಾನ, ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ

ಬಿಕ್ಷಿತ್ ರಾಣಾ ಮತ್ತು ಪಿಯೂಷ್ ಎಂಬ ಇಬ್ಬರು ಯುವಕರು ಭರ್ಮೋರ್‌ನ ಭರ್ಮಣಿ ದೇವಾಲಯದ ಬಳಿ ವೀಡಿಯೊಗಳನ್ನು ಚಿತ್ರೀಕರಿಸುವಾಗ ನಾಪತ್ತೆಯಾಗಿದ್ದರು. ಕೆಟ್ಟ ಹವಾಮಾನ ಪರಿಸ್ಥಿತಿಗಳ ನಡುವೆ ಹಿಮದಲ್ಲಿ ಸಿಲುಕಿ ಅವರು ನಂತರ ಸಾವನ್ನಪ್ಪಿದ್ದಾರೆ ಎಂದು ಕಂಡುಬಂದಿದೆ. ರಕ್ಷಣಾ ತಂಡಗಳು ಮತ್ತು ಸ್ಥಳೀಯ ಗ್ರಾಮಸ್ಥರು 4 ದಿನಗಳ ನಂತರ ಆ ಸ್ಥಳಕ್ಕೆ ತಲುಪಿದಾಗ, ಅವರು ಕಂಡ ದೃಶ್ಯವು ಎಲ್ಲರನ್ನೂ ಭಾವುಕರನ್ನಾಗಿ ಮಾಡಿತು. ಪಿಯೂಷ್‌ನ ದೇಹವು ಹಿಮದ ಪದರಗಳ ಅಡಿಯಲ್ಲಿ ಹೂತುಹೋಗಿತ್ತು, ಆದರೆ ಅವರ ಪಕ್ಕದಲ್ಲಿಯೇ ಅವನ ಸಾಕು ನಾಯಿ ಕಾವಲಾಗಿ ಕುಳಿತಿತ್ತು.

ರಕ್ಷಣಾ ತಂಡವು ಆ ಮೃತದೇಹವನ್ನು ಹೊರತೆಗೆಯಲು ಪ್ರಯತ್ನಿಸಿದಾಗ, ಆ ನಾಯಿ ಆರಂಭದಲ್ಲಿ ಆಕ್ರಮಣಕಾರಿಯಾಯಿತು. ಅಪರಿಚಿತರು ಅದರ ಮಾಲೀಕರಿಗೆ ಹಾನಿ ಮಾಡಲು ಬಂದಿದ್ದಾರೆ ಎಂದು ಅದು ಭಾವಿಸಿತು. ಆದರೆ, ಕೊನೆಗೂ ಆ ನಾಯಿಯ ಮನವೊಲಿಸಿ ಆ ಮೃತದೇಹಗಳನ್ನು ಹೊರಗೆ ತೆಗೆಯಲಾಯಿತು. ಈ ಹೃದಯಸ್ಪರ್ಶಿ ಘಟನೆ ಅಲ್ಲಿ ಸೇರಿದ್ದವರ ಕಣ್ಣಲ್ಲಿ ನೀರು ತುಂಬಿಸಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರೆಸ್ಟ್​ ಆದ್ರೂ ಖುಷಿ ಖುಷಿಯಲ್ಲಿರುವ ರಾಜೀವ್ ಗೌಡ ಹೇಳಿದ್ದೇನು?
ಅರೆಸ್ಟ್​ ಆದ್ರೂ ಖುಷಿ ಖುಷಿಯಲ್ಲಿರುವ ರಾಜೀವ್ ಗೌಡ ಹೇಳಿದ್ದೇನು?
ಏಮ್ಸ್ ಆಸ್ಪತ್ರೆ ಲಿಫ್ಟ್‌ನಲ್ಲಿ ಸರಗಳ್ಳತನ
ಏಮ್ಸ್ ಆಸ್ಪತ್ರೆ ಲಿಫ್ಟ್‌ನಲ್ಲಿ ಸರಗಳ್ಳತನ
ರಾಜೀವ್​ ಗೌಡನಿಗೆ ಆಶ್ರಯ ನೀಡಿದ್ದ ಉದ್ಯಮಿ ಯಾರು? ಸಿಕ್ಕಿಬಿದ್ದಿದ್ದು ಹೇಗೆ?
ರಾಜೀವ್​ ಗೌಡನಿಗೆ ಆಶ್ರಯ ನೀಡಿದ್ದ ಉದ್ಯಮಿ ಯಾರು? ಸಿಕ್ಕಿಬಿದ್ದಿದ್ದು ಹೇಗೆ?
ಕತ್ತರಿಸಿದ ನಂತರವೂ ಸಾಯದೆ ಚಡಪಡಿಸುತ್ತಿರುವ ಮೀನು! ವಿಡಿಯೋ ನೋಡಿ
ಕತ್ತರಿಸಿದ ನಂತರವೂ ಸಾಯದೆ ಚಡಪಡಿಸುತ್ತಿರುವ ಮೀನು! ವಿಡಿಯೋ ನೋಡಿ
ರಾಜೀವ್ ಗೌಡನಿಗೆ ಆಶ್ರಯ ನೀಡಿದ್ದ ಬಹುಕೋಟಿ ಒಡೆಯ ಸಹ ಅರೆಸ್ಟ್
ರಾಜೀವ್ ಗೌಡನಿಗೆ ಆಶ್ರಯ ನೀಡಿದ್ದ ಬಹುಕೋಟಿ ಒಡೆಯ ಸಹ ಅರೆಸ್ಟ್
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಜಾರಿಗೆ ಬಂದಿದೆ ಹೊಸ ನಿಯಮ
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಜಾರಿಗೆ ಬಂದಿದೆ ಹೊಸ ನಿಯಮ
ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಸರ್ಪಗಾವಲು?
ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಸರ್ಪಗಾವಲು?
ಗಿಲ್ಲಿಯ ಆರಂಭದ ದಿನಗಳು ಹೇಗಿದ್ದವು? ಆಪ್ತ ಗುರು ಹೇಳಿದ್ದೇನು?
ಗಿಲ್ಲಿಯ ಆರಂಭದ ದಿನಗಳು ಹೇಗಿದ್ದವು? ಆಪ್ತ ಗುರು ಹೇಳಿದ್ದೇನು?
ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್!
ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್!
ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಧ್ರುವಂತ್ ಸಂಪರ್ಕಿಸಿಯೇ ಇಲ್ಲ; ಮಲ್ಲಮ್ಮ
ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಧ್ರುವಂತ್ ಸಂಪರ್ಕಿಸಿಯೇ ಇಲ್ಲ; ಮಲ್ಲಮ್ಮ