ಕೋರ್ಟ್​ಗಳು ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಆದೇಶ ನೀಡಬಾರದು; ಸುಪ್ರೀಂಕೋರ್ಟ್

|

Updated on: May 21, 2021 | 9:30 PM

ಅಲಹಾಬಾದ್ ಹೈಕೋರ್ಟ್​ ಕೊವಿಡ್ ತಡೆಯಲು ಸರ್ಕಾರಕ್ಕೆ ಬಿಸಿ ಮುಟ್ಟಿಸಿರುವುದು ಸೂಕ್ತವೇ ಆಗಿದೆ. ಉತ್ತರ ಪ್ರದೇಶದಲ್ಲಿ 97 ಸಾವಿರ ಹಳ್ಳಿಗಳಿವೆ. ಕೋರ್ಟ್​ ಈ ನಿರ್ದೇಶನವನ್ನು ಒಂದು ತಿಂಗಳ ಒಳಗೆ ಅನುಷ್ಠಾನಗೊಳಿಸುವುದು ಕಷ್ಟಕರ ಎಂದು ಸುಪ್ರೀಂಕೋರ್ಟ್​ ಹೇಳಿದೆ.

ಕೋರ್ಟ್​ಗಳು ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಆದೇಶ ನೀಡಬಾರದು; ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Follow us on

ದೆಹಲಿ: ಕೋರ್ಟ್​ಗಳು ಜಾರಿಗೊಳಿಸಲು ಕಷ್ಟ ಆಗಬಲ್ಲ ಆದೇಶ ನೀಡುವುದನ್ನು ತಕ್ಕಮಟ್ಟಿಗೆ ನಿರ್ಲಕ್ಷಿಸಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಉತ್ತರ ಪ್ರದೇಶ ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಆದೇಶಿಸಿದ್ದ ಅಲಹಾಬಾದ್ ಹೈಕೋರ್ಟ್​ನ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಸುಪ್ರೀಂಕೋರ್ಟ್ ಆದೇಶಿಸಿದೆ.

ಉತ್ತರ ಪ್ರದೇಶದಲ್ಲಿ ಕೊವಿಡ್ ಸೋಂಕು ತಡೆ ಮತ್ತು ನಿರ್ವಹಣೆಯ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಅಲಹಾಬಾದ್ ಹೈಕೋರ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ಮೇ 17ರಂದು ಒಂದು ನಿರ್ದೇಶನ ನೀಡಿತ್ತು. ಕೊವಿಡ್ 2ನೇ ಅಲೆಯನ್ನು ತಡೆಯಲು ರಾಜ್ಯದ ಎಲ್ಲಾ ಹಳ್ಳಿಗಳಲ್ಲೂ ಒಂದು ತಿಂಗಳ ಒಳಗೆ ಐಸಿಯು ಇರುವ 2 ಆ್ಯಂಬುಲೆನ್ಸ್ ಸೌಲಭ್ಯ ಒದಗಿಸಿ. ಎಲ್ಲಾ ನರ್ಸಿಂಗ್ ಹೋಂಗಳಲ್ಲೂ ಆಕ್ಸಿಜನ್ ಬೆಡ್ ಅಳವಿಡಿಸಿ, ಮತ್ತು ಉತ್ತರ ಪ್ರದೇಶದ ಎಲ್ಲಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿ ಎಂದು ನಿರ್ದೇಶನ ನೀಡಿತ್ತು. ಆದರೆ ಸಾಲಿಟೇಟರ್ ಜನರಲ್ ತುಷಾರ್ ಮೆಹ್ತಾ, ಅಲಹಾಬಾದ್ ಹೈಕೋರ್ಟ್ ನೀಡಿರುವ ಈ ನಿರ್ದೇಶನವನ್ನು ಅನುಷ್ಠಾನಗೊಳಿಸುವುದು ಕಷ್ಟಕರ ಎಂದು ಸುಪ್ರೀಂಕೋರ್ಟ್​ಗೆ ತಿಳಿಸಿದ್ದರು.

ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅಲಹಾಬಾದ್ ಹೈಕೋರ್ಟ್​ ಕೊವಿಡ್ ತಡೆಯಲು ಸರ್ಕಾರಕ್ಕೆ ಬಿಸಿ ಮುಟ್ಟಿಸಿರುವುದು ಸೂಕ್ತವೇ ಆಗಿದೆ. ಉತ್ತರ ಪ್ರದೇಶದಲ್ಲಿ 97 ಸಾವಿರ ಹಳ್ಳಿಗಳಿವೆ. ಕೋರ್ಟ್​ ಈ ನಿರ್ದೇಶನವನ್ನು ಒಂದು ತಿಂಗಳ ಒಳಗೆ ಅನುಷ್ಠಾನಗೊಳಿಸುವುದು ಕಷ್ಟಕರ. ಕೋರ್ಟ್​ ಈ ವಿಷಯದಲ್ಲಿ ಸ್ವಲ್ಪ ಸಾವಧಾನವಾಗಿ ವರ್ತಿಸಬಹುದು. ಆದೇಶ ನೀಡುವ ಮುನ್ನ ಅದನ್ನು ಅನುಷ್ಠಾನಗೊಳಿಸಬಹುದೇ ಎಂದು ಪರಾಮರ್ಶಿಸಬೇಕು. ಅನುಷ್ಠಾನಗೊಳಿಸದು ಸಾಧ್ಯವಾಗದ ಆದೇಶಗಳನ್ನು ಹೈಕೋರ್ಟ್​ಗಳು ನೀಡಬಾರದು ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: Karnataka Lockdown: ಕರ್ನಾಟಕದಲ್ಲಿ ಜೂನ್​ 7ರ ಬೆಳಗ್ಗೆ 6ಗಂಟೆಯವರೆಗೂ ಲಾಕ್​ಡೌನ್ ವಿಸ್ತರಣೆ; ಸಿಎಂ ಯಡಿಯೂರಪ್ಪ ಘೋಷಣೆ 

ಕೊವಿಡ್ ಔಷಧಿಗಳಿಗೆ ಉಚ್ಚರಿಸಲು ಅಸಾಧ್ಯವಾದ ಹೆಸರು ಇಟ್ಟದ್ದು ಶಶಿ ತರೂರ್ ಆಗಿರಬಹುದೇ; ತೆಲಂಗಾಣ ಸಚಿವ ಕೆಟಿಆರ್ ಪ್ರಶ್ನೆ

(Courts should not issue orders that cannot be enforced Supreme Court)