ದೆಹಲಿ: ಕೋವಿಡ್ ಲಸಿಕೆ ಕೊವಾಕ್ಸಿನ್ ಭಾರತ ಮತ್ತು ಬ್ರಿಟನ್ನಲ್ಲಿ ಮೊದಲು ಗುರುತಿಸಲ್ಪಟ್ಟ B.1.617 ಮತ್ತು B.1.1.7 ಸೇರಿದಂತೆ ಪರೀಕ್ಷಿಸಲ್ಪಟ್ಟ ಎಲ್ಲಾ ಪ್ರಮುಖ ಹೊಸ ರೂಪಾಂತರಿ ವೈರಸ್ಗಳ ವಿರುದ್ಧ ಪರಿಣಾಮಕಾರಿ ಆಗಿದೆ ಎಂದು ಭಾರತ್ ಬಯೋಟೆಕ್ ಭಾನುವಾರ ಹೇಳಿದೆ.
ಭಾರತ್ ಬಯೋಟೆಕ್ ಟ್ವೀಟ್ ಮಾಡಿದ ಇನ್ಫೋಗ್ರಾಫಿಕ್ ಪ್ರಕಾರ ಈ ಲಸಿಕೆಯು ಕೊರೊನಾವೈರಸ್ ರೂಪಾಂತರಿಗೆ (ಡಿ 614 ಜಿ) ಹೋಲಿಸಿದರೆ ಬಿ .1.617 ರೂಪಾಂತರಿ ವಿರುದ್ಧ 1.95 ಅಂಶದಿಂದ ತಟಸ್ಥೀಕರಣದಲ್ಲಿ ಸಾಧಾರಣ ಇಳಿಕೆ ಕಂಡುಬಂದಿದೆ. ಆದಾಗ್ಯೂ, ಈ ಕಡಿತದ ಹೊರತಾಗಿಯೂ ಬಿ .1.617ನೊಂದಿಗೆ ಟೈಟ್ರೆ ಮಟ್ಟವು ರಕ್ಷಣಾತ್ಮಕ ಎಂದು ನಿರೀಕ್ಷಿಸಿದ ಮಟ್ಟಕ್ಕಿಂತಲೂ ಹೆಚ್ಚಿಗೆ ಆಗಿದೆ.
B.1.1.7 (ಬ್ರಿಟನ್ ನಲ್ಲಿ ಮೊದಲು ಕಂಡುಬಂದಿದೆ) ಮತ್ತು ಲಸಿಕೆ ತಳಿ (D614G) ನಡುವಿನ ತಟಸ್ಥೀಕರಣದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಭಾರತ್ ಬಯೋಟೆಕ್ ಸೇರಿಸಲಾಗಿದೆ.
ಈ ಸಂಶೋಧನೆಗಳು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ – ಇಂಡಿಯಾ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಹಯೋಗದೊಂದಿಗೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
Link to article published in CID – Oxford University Press.
COVAXIN neutralising emerging variants. https://t.co/ZholzoDD7F pic.twitter.com/ksiNL1kLXq— suchitra ella (@SuchitraElla) May 16, 2021
ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಮೂರು ಕೋವಿಡ್ -19 ಲಸಿಕೆಗಳಲ್ಲಿ ಕೋವಾಕ್ಸಿನ್ ಕೂಡ ಒಂದು.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶಾದ್ಯಂತ ಈವರೆಗೆ ಒಟ್ಟು 18,22,20,164 ಡೋಸ್ ಕೊವಿಡ್ -19 ಲಸಿಕೆಗಳನ್ನು ನೀಡಲಾಗಿದೆ.
Our efforts speak volumes of our strong vision & mission enabling global public health. prevent ?covid , protect India?✌? pic.twitter.com/kpeeTpuXY2
— suchitra ella (@SuchitraElla) May 15, 2021
ಇದನ್ನೂ ಓದಿ: ಮುಂದಿನ ಮೂರು ದಿನಗಳಲ್ಲಿ 51 ಲಕ್ಷ ಡೋಸ್ ಕೊವಿಡ್ ಲಸಿಕೆ ರಾಜ್ಯಗಳಿಗೆ ಸಿಗಲಿದೆ: ಕೇಂದ್ರ ಆರೋಗ್ಯ ಸಚಿವಾಲಯ
Published On - 5:34 pm, Sun, 16 May 21