ದೆಹಲಿ: ಭಾರತದಲ್ಲಿಯೇ ತಯಾರಾದ ಕೊವ್ಯಾಕ್ಸಿನ್ ಲಸಿಕೆಯು ಕೊರೊನಾ ಸೋಂಕು ಹರಡುವ SARS-CoV-2 ವೈರಾಣುವಿನ ಎರಡು ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research – ICMR) ಬುಧವಾರ ಹೇಳಿದೆ. ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ಗೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ತುರ್ತು ಬಳಕೆ ಅನುಮತಿ ಸಿಕ್ಕಿತ್ತು. ಇತರ 60 ದೇಶಗಳಲ್ಲಿಯೂ ಅನುಮತಿ ಸಿಗುವ ಸಾಧ್ಯತೆಯೂ ಇದೆ.
‘ಕೋವ್ಯಾಕ್ಸಿನ್ ಲಸಿಕೆಯು SARS-CoV-2 ವೈರಾಣುಗಳ ಹಲವು ರೂಪಾಂತರಗಳನ್ನು ನಿಗ್ರಹಿಸಬಲ್ಲದು. ದ್ವಿತಳಿ ರೂಪಾಂತರಿಯ ವಿರುದ್ಧವೂ ಈ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು’ ಎಂದು ಐಸಿಎಂಆರ್ ಟ್ವೀಟ್ ಮಾಡಿದೆ.
ಐಸಿಎಂಆರ್ನ ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆಯು (National Institute of Virology) ಕೊರೊನಾ ಸೋಂಕು ಹರಡುವ SARS-CoV-2 ವೈರಾಣುವಿನ B.1.1.7 (ಬ್ರಿಟನ್ ರೂಪಾಂತರಿ), B.1.1.28 (ಬ್ರಜಿಲ್ ರೂಪಾಂತರಿ) ಮತ್ತು B.1.351 (ದಕ್ಷಿಣ ಆಫ್ರಿಕಾ ರೂಪಾಂತರಿ) ವೈರಾಣುಗಳನ್ನು ಪ್ರತ್ಯೇಕಗೊಳಿಸಿ, ಬೆಳೆಸಲಾಯಿತು. ಈ ಎಲ್ಲ ವೈರಾಣುಗಳ ವಿರುದ್ಧವೂ ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ದೃಢಪಟ್ಟಿದೆ.
ಐಸಿಎಂಆರ್ನ ರಾಷ್ಟ್ರೀಯ ವೈರಾಣು ಸಂಸ್ಥೆಯು ಕೊರೊನಾ ವೈರಾಣುವಿನ ಬ್ರಿಟನ್, ಬ್ರೆಜಿಲ್ ರೂಪಾಂತರಿಗಳ ವಿರುದ್ಧವೂ ಕೆಲಸ ಮಾಡುವುದನ್ನು ನಿರೂಪಿಸಿದೆ ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ. ಭಾರತದ ವಿವಿಧ ಪ್ರದೇಶಗಳಿಂದ ಸಂಗ್ರಹಿಸಿದ ಕೊರೊನಾ ವೈರಾಣುಗಳನ್ನು ಪ್ರತ್ಯೇಕಗೊಳಿಸಿ ಸಂಶೋಧನೆ ನಡೆಸಲಾಯಿತು. ಈ ಹಂತದಲ್ಲಿ ಇದು ಪರಿಣಾಮಕಾರಿ ಎಂದು ನಿರೂಪಿತವಾಯಿತು. ಕೊವ್ಯಾಕ್ಸಿನ್ ಲಸಿಕೆಯು ದ್ವಿತಳಿ ವೈರಾಣುಗಳ ವಿರುದ್ಧವೂ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಸಂಶೋಧನಾ ಸಂಸ್ಥೆಯು ತಿಳಿಸಿದೆ.
ICMR study shows #COVAXIN neutralises against multiple variants of SARS-CoV-2 and effectively neutralises the double mutant strain as well. @MoHFW_INDIA @DeptHealthRes #IndiaFightsCOVID19 #LargestVaccineDrive pic.twitter.com/syv5T8eHuR
— ICMR (@ICMRDELHI) April 21, 2021
ಕೊವ್ಯಾಕ್ಸಿನ್ 3ನೇ ಹಂತದ ಪ್ರಯೋಗ ಫಲಿತಾಂಶ ಪ್ರಕಟ
ಕೊವ್ಯಾಕ್ಸಿನ್ 3ನೇ ಹಂತದ ಪ್ರಯೋಗದ ಫಲಿತಾಂಶ ಪ್ರಕಟವಾಗಿದೆ. ಕೊವ್ಯಾಕ್ಸಿನ್ ಲಸಿಕೆಯು ಶೇ 78ರಷ್ಟು ಪರಿಣಾಮಕಾರಿ ಎಂದು ಫಲಿತಾಂಶವು ತಿಳಿಸಿದೆ. ಗಂಭೀರ ಸ್ಥಿತಿಯಲ್ಲಿರುವವರಿಗೆ ಶೇ 100ರಷ್ಟು ಪರಿಣಾಮಕಾರಿ. ಕೊರೊನಾ ಲಕ್ಷಣರಹಿತರಿಗೆ ಶೇ 70ರಷ್ಟು ಪರಿಣಾಮಕಾರಿ. ಈ ಲಸಿಕೆ ಪಡೆದರೆ ಬೇರೆಯವರಿಗೆ ಹರಡುವುದು ಕಡಿಮೆ. ಆಸ್ಪತ್ರೆಯ ಚಿಕಿತ್ಸಾ ಅವಧಿಯನ್ನೂ ಕಡಿಮೆಗೊಳಿಸುತ್ತದೆ ಎಂದು ಭಾರತ್ ಬಯೋಟೆಕ್ ಮತ್ತು ಸಿಎಂಆರ್‌ನಿಂದ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
Vaccine Efficacy – The Higher The Better?
With the accelerated Phase 3 vaccination schedule starting on May 1st, it is essential to know the answer to the above question and thereby, make an informed decision.
To know the answer, read our blog –https://t.co/t2rx31FUzO pic.twitter.com/sU8w5KhVmk— BharatBiotech (@BharatBiotech) April 21, 2021
ಭಾರತದಲ್ಲಿ 2.95 ಲಕ್ಷ ಮಂದಿಗೆ ಹೊಸದಾಗಿ ಸೋಂಕು
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊವಿಡ್ನಿಂದ 2,203 ಮಂದಿ ಸಾವಿಗೀಡಾಗಿದ್ದಾರೆ . ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಮಂಗಳವಾರ 2,95,041 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಕೊವಿಡ್ ರೋಗಿಗಳ ಸಂಖ್ಯೆ 1,56,16,130ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 24 1,67,457 ಮಂದಿ ಚೇತರಿಸಿಕೊಂಡಿದ್ದು ಈವರೆಗೆ 1,32,76,039 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಕೊವಿಡ್ನಿಂದ ಮೃತಪಟ್ಟವರ ಸಂಖ್ಯೆ 1,82,553 ಆಗಿದ್ದು ,ದೇಶದಲ್ಲಿ 21,57,538 ಸಕ್ರಿಯ ಪ್ರಕರಣಗಳಿವೆ. 13,01,19,310 ಮಂದಿ ಲಸಿಕೆ ಪಡೆದಿದ್ದಾರೆ.
ಮಂಗಳವಾರ ಅತೀ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಸಾವಿನ ಸಂಖ್ಯೆಯೂ ಗರಿಷ್ಠ ಆಗಿದೆ. ಭಾರತದಲ್ಲಿ ಕೊವಿಡ್ ಎರಡನೇ ಅಲೆಯ ಪರಿಣಾಮ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಯುವ ಜನರು ಮತ್ತು ಮಕ್ಕಳಿಗೂ ಸೋಂಕು ತಗಲುತ್ತಿದೆ. ಮಂಗಳವಾರ ಸಂಜೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಮುಂದೆ ದೊಡ್ಡ ಸವಾಲು ಇದೆ. ಇದನ್ನು ನಾವು ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದ್ದಾರೆ.
ಕೇರಳದಲ್ಲಿ ಮಂಗಳವಾರ ಕೊವಿಡ್ ಸೋಂಕಿತರ ಸಂಖ್ಯೆ 12,72,645ಕ್ಕೇರಿದೆ. ರಾಜ್ಯದಲ್ಲಿ 1,18,673 ಸಕ್ರಿಯ ಪ್ರಕರಣಗಳಿದ್ದು 11,48,671 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ 4,978 ಮಂದಿಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 19,577 ಹೊಸ ಪ್ರಕರಣಗಳು ಪತ್ತೆಯಾಗಿದಜ್ದು 28 ಮಂದಿ ಸಾವಿಗೀಡಾಗಿದ್ದಾರೆ, 3880 ಮಂದಿ ಗುಣಮುಖರಾಗಿದ್ದಾರೆ.
ತಮಿಳುನಾಡಿನಲ್ಲಿ 10,986 ಹೊ ಪ್ರಕರಣಗಳು ಪತ್ತೆಯಾಗಿದ್ದುಚೆನ್ನೈ ನಗರದಲ್ಲಿ 3,711 ಪ್ರಕರಣಗಳು ವರದಿ ಆಗಿವೆ. ಮಂಗಳವಾರದ ಅಂಕಿ ಅಂಶಗಳ ಪ್ರಕಾರ 79,804 ಸಕ್ರಿಯ ಪ್ರಕರಣಗಳಿದ್ದು 48 ಮಂದಿ ಸಾವಿಗೀಡಾಗಿದ್ದಾರೆ. 6,250 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿ ಒಟ್ಟು 10.13 ಲಕ್ಷ ಸೋಂಕಿತರಿದ್ದು ಸಾವಿನ ಸಂಖ್ಯೆ 13,205ಕ್ಕೇರಿದೆ.
ಆಂಧ್ರ ಪ್ರದೇಶದಲ್ಲಿ 8,987 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಸೆಪ್ಟಂಬರ್ 13ರ ನಂತರ ಗರಿಷ್ಠ ಪ್ರಕರಣಗಳು ವರದಿ ಆಗಿದೆ. 35 ಮಂದಿ ಸಾವಿಗೀಡಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 53,889 ಆಗಿದೆ. ಇಲ್ಲಿನ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಕೊವಿಡ್ ರೋಗಿಗಳ ಸಂಖ್ಯೆ9,76,987 ಆಗಿದ್ದು, 9,15,626 ಮಂದಿ ಚೇತರಿಸಿಕೊಂಡಿದ್ದಾರೆ. 7,472 ಮಂದಿ ಮೃತಪಟ್ಟಿದ್ದಾರೆ..
ಮಧ್ಯ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 12,897 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 79 ಮಂದಿ ಸಾವಿಗೀಡಾಗಿದ್ದಾರೆ. ಇಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 12,897 ಆಗಿದೆ.
ಇದನ್ನೂ ಓದಿ: Self Quarantine Tips: ಕೊರೊನಾ ಕಾಲಘಟ್ಟದಲ್ಲಿ ಓದುವ ಹವ್ಯಾಸವನ್ನು ಉತ್ತಮವಾಗಿಸಲು ಅನುಸರಿಸಬೇಕಾದ ಕ್ರಮಗಳು
ಇದನ್ನೂ ಓದಿ: ನಾಸಿಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ: 22 ಕೊವಿಡ್ ರೋಗಿಗಳ ದುರ್ಮರಣ
Published On - 3:35 pm, Wed, 21 April 21