ದೆಹಲಿ: ಕೋವಿಡ್– 19 ಸೋಂಕು ದೇಶವನ್ನು ಆವರಿಸಿಕೊಂಡು ಈಗಾಗಲೇ ಒಂದು ವರ್ಷ ಸಮೀಪಿಸುತ್ತಿದ್ದು, ಲಕ್ಷಾಂತರ ಸಾವು ನೋವುಗಳು ಸಂಭವಿಸಿದೆ. ಕೊರೊನಾ ಕಾರಣದಿಂದಾಗಿ ಆರ್ಥಿಕವಾಗಿ ದೇಶ ಸಾಕಷ್ಟು ಹಿನ್ನಡೆಯನ್ನು ಕಂಡಿದ್ದು, ಹಲವು ಸಂಶೋಧನೆಗಳ ನಂತರವೂ ಸೂಕ್ತ ಔಷಧಿಯನ್ನು ಕಂಡುಹಿಡಿಯುವಲ್ಲಿ ಇನ್ನು ಪ್ರಯತ್ನಗಳು ನಡೆಯುತ್ತಲೇ ಇದೆ.
ಸದ್ಯ ಭಾರತವು ಒಂದು ದಿನದಲ್ಲಿ 36652 ಹೊಸ ಕೋವಿಡ್-19 ಪ್ರಕರಣವನ್ನು ದಾಖಲಿಸಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 96.08 ಲಕ್ಷಕ್ಕೆ ಏರಿಕೆಯಾದರೆ, 9058822 ಜನರು ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆ ಮತ್ತು 512 ಜನರನ್ನು ಈ ಕೊರೊನಾ ಬಲಿ ತೆಗೆದುಕೊಂಡಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಲಾಗಿದೆ.
ಪ್ರಸ್ತುತ ಭಾರತದ ಕೋವಿಡ್-19 ಪ್ರಕರಣದ ವಿವಿರ:
ರಾಜ್ಯಗಳು | 24 ಗಂಟೆಗಳಲ್ಲಿ ಸಾವಿನ ಪ್ರಮಾಣ | ಈವರೆಗಿನ ಸಾವಿನ ಪ್ರಮಾಣ | ಗುಣಮುಖರಾದವರ ಸಂಖ್ಯೆ | ಸೋಂಕಿತರ ಸಂಖ್ಯೆ |
ಮಹಾರಾಷ್ಟ್ರ | 127 | 47599 | 1710050 | 84932 |
ದೆಹಲಿ | 73 | 9497 | 548376 | 28252 |
ಹರಿಯಾಣ | 19 | 2539 | 223973 | 14329 |
ಪಶ್ಚಿಮ ಬಂಗಾಳ | 52 | 8628 | 463849 | 24045 |
ಉತ್ತರ ಪ್ರದೇಶ | 29 | 7877 | 70626 | 22665 |
ಕೇರಳ | 29 | 2358 | 561874 | 61535 |
ಪಂಜಾಬ್ | 20 | 4820 | 142121 | 7785 |
ಛತ್ತಿಸಗಡ | 15 | 287 | 16613 | 19351 |
ಕರ್ನಾಟಕ | 13 | 11834 | 853461 | 25065 |
ಒಟ್ಟು | 512 | 139700 | 9058822 | 409689 |
ನಮ್ಮ ಅಂಕಿ ಅಂಶವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯೊಂದಿಗೆ ಹೊಂದಾಣಿಕೆ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
Covid-19 India Update | ಭಾರತದಲ್ಲಿ ನಿನ್ನೆ ಪತ್ತೆಯಾದ ಪ್ರಕರಣಗಳೆಷ್ಟು? ಇಲ್ಲಿದೆ ಮಾಹಿತಿ