ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ಗೆ ಕೊರೊನಾ
ಹರಿಯಾಣದ ಆರೋಗ್ಯ ಸಚಿವ ವಿಜ್ ನವೆಂಬರ್ 20ರಂದು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದಲ್ಲಿ ಭಾಗವಹಿಸಿದ್ದರು.
ಚಂಡೀಗಢ: ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೆ ಕೋವಿಡ್-19 ಧೃಡಪಟ್ಟಿದೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ತಮ್ಮೊಂದಿಗೆ ನೇರ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಸಚಿವರು ಸೂಚಿಸಿದ್ದಾರೆ.
ನನಗೆ ಕೊರೊನಾ ದೃಢಪಟ್ಟಿದೆ, ನಾನು ಅಂಬಾಲಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಸಚಿವ ವಿಜ್ ಟ್ವೀಟ್ ಮಾಡಿದ್ದಾರೆ.
ನವೆಂಬರ್ 20ರಂದು ಹರಿಯಾಣದ ಆರೋಗ್ಯ ಸಚಿವ ವಿಜ್, ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದಲ್ಲಿ ಭಾಗವಹಿಸಿದ್ದರು ಮತ್ತು ಲಸಿಕೆ ಪ್ರಯೋಗದಲ್ಲಿ ಪಾಲ್ಗೊಂಡ ರಾಜ್ಯದ ಮೊದಲ ಸ್ವಯಂ ಸೇವಕ ಎಂದು ಈ ಮೊದಲು ಟ್ವೀಟ್ ಮಾಡಿದ್ದರು.
ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡ ನಂತರವಷ್ಟೇ ಸೋಂಕಿನ ವಿರುದ್ಧದ ಪ್ರತಿಕಾಯಗಳು ಮನುಷ್ಯನಲ್ಲಿ ಬೆಳೆಯುತ್ತವೆ. ಏಕೆಂದರೆ ಇದು ಎರಡು ಡೋಸ್ ಹೊಂದಿದ್ದ ಲಸಿಕೆ. ಸಚಿವರು ಕೇವಲ ಒಂದು ಡೋಸ್ ಮಾತ್ರ ತೆಗೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಭಾರತ್ ಬಯೋಟೆಕ್ ಕೋವ್ಯಾಕ್ಸಿನ್
ಭಾರತ್ ಬಯೋಟಿಕ್ ಅಭಿವೃದ್ಧಿಪಡಿಸಿರುವ ಕೊರೊನಾ ಸೋಂಕು ನಿರೋಧಕ ಕೊವಾಕ್ಸಿನ್ ಲಸಿಕೆಯನ್ನು ಮೊದಲ ಬಾರಿಗೆ ತೆಗೆದುಕೊಂಡವರು 28 ದಿನಗಳ ಅಂತರದಲ್ಲಿ ಮತ್ತೊಮ್ಮೆ ತೆಗೆದುಕೊಳ್ಳಬೇಕು. ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ (ಪ್ರತಿರಕ್ಷಾ ಜನಕ) ದತ್ತಾಂಶದೊಂದಿಗೆ ಕ್ಲಿನಿಕಲ್ ಪ್ರಯೋಗಗಳ ಮೊದಲ ಎರಡು ಹಂತದಲ್ಲಿ ಕೋವ್ಯಾಕ್ಸಿನ್ ಅನ್ನು ಸುಮಾರು 1000 ಜನರಿಗೆ ನೀಡಿ, ಮೌಲ್ಯಮಾಪನ ಮಾಡಲಾಗಿದೆ.
I have been tested Corona positive. I am admitted in Civil Hospital Ambala Cantt. All those who have come in close contact to me are advised to get themselves tested for corona.
— ANIL VIJ MINISTER HARYANA (@anilvijminister) December 5, 2020
Published On - 11:17 am, Sun, 6 December 20