
ದೆಹಲಿ: ದೇಶದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಆಕ್ಸಿಜನ್ ಕೊರತೆಯೂ ತೀರ್ವವಾಗಿ ಕಾಡಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತೀಯ ವಾಯುಪಡೆಯ ಸಿ-17 ವಿಮಾನ ಭಾನುವಾರ ನಾಲ್ಕು ಕ್ರಯೋಜನಿಕ್ ಆಕ್ಸಿಜನ್ ಕಂಟೇನರ್ಗಳನ್ನು ಜರ್ಮನಿಯ ಫ್ರಾಂಕ್ಫರ್ಟ್ನಿಂದ ದೆಹಲಿ ಸಮೀಪದ ಹಿಂಡನ್ ವಾಯುನೆಲೆಗೆ ಹೊತ್ತು ತಂದಿದೆ. ಅದೇ ವೇಳೆ ಬ್ರಿಟನ್ನ ಬ್ರೈಜ್ ನಾರ್ಟನ್ ನಿಂದ 450 ಆಕ್ಸಿಜನ್ ಸಿಲಿಂಡರ್ಗಳನ್ನು ತಮಿಳುನಾಡಿನ ಚೆನ್ನೈ ವಾಯುನೆಲೆಗೆ ತಂದಿದೆ.
ಇದರ ಜತೆಗೆ ಸಿ-17 ಎರಡು ಕ್ರಯೋಜನಿಕ್ ಆಕ್ಸಿಜನ್ ಕಂಟೇನರ್ಗಳನ್ನು ಚಂಢೀಗಡದಿಂದ ಭುವನೇಶ್ವರಕ್ಕೆ, ಎರಡು ಕಂಟೇನರ್ಗಳನ್ನು ಜೋಧಾಪುರ್ನಿಂದ ಜಾಮ್ನಗರ್ಗೆ, ಎರಡು ಸಿಲಿಂಡರ್ಗಳನ್ನು ಹಿಂಡನ್ನಿಂದ ರಾಂಚಿಗೆ, ಇಂದೋರ್ನಿಂದ ಜಾಮ್ನಗರಕ್ಕೆ, ಹಿಂಡನ್ನಿಂದ ಭುವನೇಶ್ವರಕ್ಕೆ ತಲಾ ಎರಡು ಕಂಟೇನರ್ ಗಳನ್ನು ಸಾಗಿಸಲಾಗದೆ ಎಂದು ಭಾರತೀಯ ವಾಯುಪಡೆ ಹೇಳಿದೆ.
ಸಿ-17 ಸಾಗಾಣಿಕೆ ವಿಮಾನವು ಸಿಂಗಾಪೂರ್ನಿಂದ ಹೆಚ್ಚು ಆಕ್ಸಿಜನ್ ಸಿಲಿಂಡರ್ ಗಳನ್ನು ತರಲು ಸಿದ್ಧತೆ ನಡೆಸಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಐಎಎಫ್ ಸಿ 17 ಸಾಗಾಣಿಕೆ ವಿಮಾನವು ಸಿಂಗಾಪುರ್ನಿಂದ ಖಾಲಿ ಆಕ್ಸಿಜನ್ ಕಂಟೇನರ್ ಗಳನ್ನು ಏರ್ ಲಿಫ್ಟ್ ಮಾಡಲಿದೆ. ಆಕ್ಸಿಜನ್ ಪೂರೈಕೆ ಮಾಡಲು ವಾಯುಪಡೆ ವಿಮಾನ ಬಳಸಲಾಗುತ್ತಿದೆ. ಗೃಹ ಸಚಿವಾಲಯವು ಇದರ ಉಸ್ತುವಾರಿ ವಹಿಸಿದೆ ಎಂದು ಗೃಹ ಇಲಾಖೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ದುರಂತ: ಎಚ್ಚೆತ್ತ ಸರ್ಕಾರದಿಂದ ಆಕ್ಸಿಜನ್ ಪೂರೈಕೆ ಬಗ್ಗೆ ಮಹತ್ವದ ಆದೇಶ
ತೆಲಂಗಾಣ: ಹೈದರಾಬಾದ್ನಿಂದ ಒಡಿಶಾಗೆ ಆಕ್ಸಿಜನ್ ಟ್ಯಾಂಕ್ ಏರ್ಲಿಫ್ಟ್ ಮಾಡಿದ ಭಾರತೀಯ ವಾಯುಪಡೆ
(COVID 19 crisis in the country India Air Force C-17 aircraft Airlifts Oxygen Containers From Germany UK)
Published On - 3:19 pm, Mon, 3 May 21