ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊವಿಡ್ನಿಂದಾಗಿ 839 ಮಂದಿ ಸಾವಿಗೀಡಾಗಿದ್ದು ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 1,52,879ಕ್ಕೇರಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,33,58,805ಆಗಿದ್ದು ಸಾವಿನ ಸಂಖ್ಯೆ 1,69,275ಕ್ಕೆ ತಲುಪಿದೆ. 11,08,087 ಸಕ್ರಿಯ ಪ್ರಕರಣಗಳಿದ್ದು 1,20,81,443 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಕೊವಿಡ್ ಲಸಿಕೆ ಪಡೆದುಕೊಂಡವರ ಸಂಖ್ಯೆ 10,15,95,147ಆಗಿದೆ. ಕಳೆದ 5 ದಿನಗಳಿಂದ ಸತತವಾಗಿ 1 ಲಕ್ಷಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 33,43,951 ಆಗಿದ್ದು 4,160 ಮಂದಿ ಸಾವಿಗೀಡಾಗಿದ್ದಾರೆ. ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ 1,14, 423 ಆಗಿದ್ದು ಇಲ್ಲಿವರೆಗೆ 11, 235 ಮಂದಿ ಮೃತಪಟ್ಟಿದ್ದಾರೆ. ಅದೇ ವೇಳೆ ಛತ್ತೀಸಗಡದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ 4,32,776 ಅಗಿದ್ದು ಮೃತರ ಸಂಖ್ಯೆ 4,777 ಆಗಿದೆ. ದಕ್ಷಿಣ ಭಾರತದ ರಾಜ್ಯಗಳ ಅಂಕಿ ಅಂಶಗಳನ್ನು ಗಮನಿಸಿದರೆ ಕರ್ನಾಟಕದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ 10,55,040 ಆಗಿದ್ದು, 12,849 ಮಂದಿ ಮೃತಪಟ್ಟಿದ್ದಾರೆ. ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 11, 60, 204 ಆಗಿದ್ದು ಸಾವಿನ ಸಂಖ್ಯೆ 4,767 ಆಗಿದೆ. ತಮಿಳುನಾಡಿನಲ್ಲಿ ಪ್ರಕರಣಗಳ ಸಂಖ್ಯೆ 9,26, 816 ಆಗಿದ್ದು, ಸಾವಿನ ಸಂಖ್ಯೆ 12,886ಆಗಿದೆ. ಆಂಧ್ರ ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ 9,21,906 ಸಾವಿನ ಸಂಖ್ಯೆ 7,291ಕ್ಕೇರಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಂಕಿ ಅಂಶಗಳ ಪ್ರಕಾರ ಏಪ್ರಿಲ್ 10ರವರೆಗೆ 25,66,26,850 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಏಪ್ರಿಲ್ 10ರಂದು 11,73,219 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.
#CoronaVirusUpdates:#COVID19 testing status update:@ICMRDELHI stated that 25,66,26,850 samples tested upto April 10, 2021
11,73,219 sample tested on April 10, 2021#StaySafe #IndiaWillWin #Unite2FightCorona pic.twitter.com/WGr5zR4cmk
— #IndiaFightsCorona (@COVIDNewsByMIB) April 11, 2021
ಅಂದಹಾಗೆ ನಾಲ್ಕು ದಿನಗಳ ಟೀಕಾ ಉತ್ಸವ್ (ಲಸಿಕೆ ಉತ್ಸವ) ಇಂದು ಆರಂಭವಾಗಲಿದೆ. ಇಂದು (ಏಪ್ರಿಲ್ 11)ಜ್ಯೋತಿ ರಾವ್ ಪುಲೆ ಅವರ ಜನ್ಮದಿನಾಚರಣೆ. ಇಂದಿನಿಂದ ಏಪ್ರಿಲ್ 14ರ (ಅಂಬೇಡ್ಕರ್ ಜಯಂತಿ) ವರೆಗೆ ದೇಶದಾದ್ಯಂತ ಲಸಿಕೆ ಉತ್ಸವ್ ನಡೆಸಲು ಪ್ರಧಾನಿ ಕರೆ ನೀಡಿದ್ದರು. ಕಳೆದ ವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ನಾಲ್ಕು ದಿನಗಳ ಕಾಲ ಲಸಿಕೆ ಪಡೆಯವ ಕಾರ್ಯಕ್ರಮವನ್ನು ಲಸಿಕೆ ಉತ್ಸವವಾಗಿ ಆಚರಿಸಬೇಕು ಎಂದಿದ್ದರು. ಈ ಬಗ್ಗೆ ಇಂದು ಟ್ವೀಟ್ ಮಾಡಿದ ಪ್ರಧಾನಿ ಇಂದು ನಾವು ದೇಶದಾದ್ಯಂತ ಟೀಕಾ ಉತ್ಸವ ಆಚರಿಸಲಿದ್ದೇವೆ. ಈ ಸಂದರ್ಭದಲ್ಲಿ ದೇಶದ ನಾಗರಿಕರು 4 ವಿಷಯಗಳಿಗೆ ಬದ್ಧರಾಗಿರಲು ನಾನು ಮನವಿ ಮಾಡುತ್ತೇನೆ. ಲಸಿಕೆ ಪಡೆಯಲು ಸಹಾಯ ಅಗತ್ಯವಿರುವವರಿಗೆ ನೆರವಾಗಿ, ಕೊವಿಡ್ ಚಿಕಿತ್ಸೆಯಲ್ಲಿರುವವರಿಗೆಸಹಾಯ ಮಾಡಿ. ಮಾಸ್ಕ್ ಧರಿಸಿ ಇನ್ನೊಬ್ಬರಿಗೂ ಪ್ರೇರಣೆಯಾಗಿ. ಯಾರಿಗಾದರೂ ಕೊವಿಡ್ ಪಾಸಿಟಿವ್ ಆದರೆ ಆ ಪ್ರದೇಶದಲ್ಲಿಯೇ ಮೈಕ್ರೊ ಕಂಟೈನ್ ಮೆಂಟ್ ವಲಯ ನಿರ್ಮಿಸಿ ಎಂದಿದ್ದಾರೆ.
आज से हम सभी, देशभर में टीका उत्सव की शुरुआत कर रहे हैं। कोरोना के खिलाफ लड़ाई के इस चरण में देशवासियों से मेरे चार आग्रह हैं… https://t.co/8zXZ0bqYgl
— Narendra Modi (@narendramodi) April 11, 2021
ಏಪ್ರಿಲ್ 1ರಿಂದ 45ಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರಿಗೂ ಲಸಿಕೆ ನೀಡಲಾಗುತ್ತಿದೆ. ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಹಲವೆಡೆ ಲಸಿಕೆ ಕೊರತೆ ಕಂಡು ಬಂದಿದೆ ಮೂರನೇ ಹಂತದ ಲಸಿಕೆ ನೀಡುವ ಕಾರ್ಯಕ್ರಮದ ಮೊದಲ 9 ದಿನಗಳಲ್ಲಿ ಮಹಾರಾಷ್ಟ್ರದಲ್ಲಿ 31.74 ಲಕ್ಷ ಡೋಸ್ ನೀಡಲಾಗಿದೆ.
ಇದನ್ನೂ ಓದಿ: ಮುಂದಿನ ನಾಲ್ಕು ವಾರಗಳಲ್ಲಿ ಗಂಭೀರ ಪರಿಸ್ಥಿತಿ ಎದುರಾಗಬಹುದು: ಕೇಂದ್ರ ಎಚ್ಚರಿಕೆ
Published On - 11:12 am, Sun, 11 April 21