Covid 19 second wave: ಕೊರೊನಾ ಎರಡನೇ ಅಲೆಯಲ್ಲಿ ತತ್ತರಿಸಿದ ಭಾರತ; 10 ಲಕ್ಷ ದಾಟಿದ ಸಕ್ರಿಯ ಪ್ರಕರಣಗಳು

|

Updated on: Apr 10, 2021 | 3:43 PM

ಕೊರೊನಾ ಎರಡನೇ ಅಲೆಗೆ ಭಾರತ ತತ್ತರಿಸಿದೆ. ಶುಕ್ರವಾರದಂದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷವನ್ನು ದಾಟಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ವಿಶ್ವದಾದ್ಯಂತ ಪರಿಸ್ಥಿತಿ ಹೇಗಿದೆ ಎಂಬ ವಿವರಣೆಯೂ ಇಲ್ಲಿದೆ.

Covid 19 second wave: ಕೊರೊನಾ ಎರಡನೇ ಅಲೆಯಲ್ಲಿ ತತ್ತರಿಸಿದ ಭಾರತ; 10 ಲಕ್ಷ ದಾಟಿದ ಸಕ್ರಿಯ ಪ್ರಕರಣಗಳು
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ಕೊರೊನಾ ಎರಡನೇ ಅಲೆಯಲ್ಲಿ ದೇಶದಲ್ಲಿ ಸೋಂಕು ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಶುಕ್ರವಾರದಂದು ಭಾರತದಲ್ಲಿ 1,44,829 ಹೊಸ ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನದಲ್ಲಿ ಕಾಣಿಸಿಕೊಂಡ ಅತಿ ಹೆಚ್ಚಿನ ಪ್ರಕರಣಗಳ ಸಂಖ್ಯೆ ಇದಾಗಿದೆ. ಏಳು ತಿಂಗಳ ನಂತರ ಮೊದಲ ಬಾರಿಗೆ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆಯು ಹತ್ತು ಲಕ್ಷವನ್ನು ದಾಟಿದೆ. ಕಳೆದ ವರ್ಷ ಸೆಪ್ಟೆಂಬರ್ 20ನೇ ತಾರೀಕಿನಂದು ಕೊನೆಯದಾಗಿ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದವು. ಆ ಸಂದರ್ಭದಲ್ಲಿ ಕೊರೊನಾ ಮೊದಲ ಅಲೆಯು ಗರಿಷ್ಠ ಮಟ್ಟದಲ್ಲಿತ್ತು. ಆ ನಂತರ ಮೊದಲ ಅಲೆ ಹತೋಟಿಗೆ ಬಂದಂತೆ ಈ ಸಂಖ್ಯೆಯು ಸ್ಥಿರವಾಗಿ ಆರು ತಿಂಗಳು ಕಡಿಮೆಯಾಗುತ್ತಾ ಬಂದು, ಫೆಬ್ರವರಿ 11ನೇ ತಾರೀಕಿನಂದು 1,37,000 ಸಮೀಪಕ್ಕೆ ತಲುಪಿತು.

ಆದರೆ, ಎರಡನೇ ಅಲೆಯ ಆರಂಭದೊಂದಿಗೆ ಸನ್ನಿವೇಶ ಉಲ್ಟಾ ಆಗಿದೆ. ಭಾರತದಲ್ಲಿ ಕೊರೊನಾ ಕಾಣಿಸಿಕೊಂಡ ನಂತರ ತಲುಪದ ಗರಿಷ್ಠ ಸಂಖ್ಯೆಗೆ ಈಗ ಮುಟ್ಟಿದೆ. ಶುಕ್ರವಾರದಂದು ನಾಲ್ಕನೇ ದಿನಕ್ಕೆ ಭಾರತವು ಕೋವಿಡ್- 19 ಸೋಂಕು ಹೊಸ ಪ್ರಕರಣ 1,44,923 ವರದಿಯಾಗಿ ದಾಖಲೆ ಬರೆಯಿತು. ಇನ್ನು 773 ಮಂದಿ ಒಂದೇ ದಿನದಲ್ಲಿ ಸಾವನ್ನಪ್ಪಿದ್ದಾರೆ. ಭಾರತದ ಒಟ್ಟಾರೆ ಕೊರೊನಾ ಪ್ರಕರಣ 1.32 ಕೋಟಿ ಆಗಿದೆ. ಅಮೆರಿಕ ಮತ್ತು ಬ್ರೆಜಿಲ್ ನಂತರ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾದ ದೇಶ ಭಾರತವಾಗಿದೆ. ಇನ್ನು 1,68,487 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಹತ್ತಿರಹತ್ತಿರ ಶೇಕಡಾ 47ರಷ್ಟು ಸಕ್ರಿಯ ಪ್ರಕರಣಗಳು ದೇಶದಲ್ಲಿ ಸೇರ್ಪಡೆ ಆಗಿರುವುದು ಕಳೆದ ಹತ್ತು ದಿನದಲ್ಲಿ. ಕಳೆದ ವಾರಗಳಿಗೆ ಹೋಲಿಸಿದರೆ 55,205ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಸರಾಸರಿಯಾಗಿ ಪ್ರತಿ ದಿನ ವರದಿಯಾಗಿ, ಮತ್ತೊಂದು ಸಾರ್ವಕಾಲಿಕ ದಾಖಲಾಗಿದೆ. ಕಳೆದ ಏಳು ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸರಾಸರಿ ಪ್ರಕರಣಗಳು ಈಗ 1,15,948 ಆಗಿದೆ. ಆ ಮೂಲಕ ವಿಶ್ವದಲ್ಲೇ ಅತಿದೊಡ್ಡ ಕೋವಿಡ್- 19 ಹಾಟ್​ಸ್ಪಾಟ್ ಎಂಬ ಕುಖ್ಯಾತಿಗೆ ಭಾರತ ಒಳಗಾಗಿದೆ. ಭಾರತದಲ್ಲಿನ ಪ್ರಕರಣಗಳು ಸದ್ಯದಲ್ಲೇ ಬ್ರೆಜಿಲ್​​ನ 1.33 ಕೋಟಿಯನ್ನು ಮೀರಿಸಲಿದೆ. ಕೊರೊನಾಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯು ದೇಶದ ಆರೋಗ್ಯ ವ್ಯವಸ್ಥೆ ಮೇಲೆ ಇರುವ ಒತ್ತಡವನ್ನು ಸೂಚಿಸುವಂತಿದೆ.

ವಿಶ್ವದಾದ್ಯಂತದ ಕೊರೊನಾ ಲೆಕ್ಕಾಚಾರ ಅಂಕಿ- ಅಂಶಗಳು
– ಭಾರತದಲ್ಲಿ 24 ಗಂಟೆ ಅವಧಿಯಲ್ಲಿ 1,44,829 ಹೊಸ ಪ್ರಕರಣಗಳು. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,32,02,783 ತಲುಪಿದೆ.
– 2021ನೇ ಇಸವಿಯಲ್ಲಿ ಒಂದೇ ದಿನದಲ್ಲಿ ಕೋವಿಡ್- 19ಗೆ ಬಲಿಯಾದವರ ಸಂಖ್ಯೆ 773. ಈ ಮೂಲಕ ಕೊರೊನಾ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 1,68,467 ಆಗಿದೆ.
– ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿರುವ ಪ್ರಕಾರ, ಕಳೆದ ವಾರ 40 ಲಕ್ಷಕ್ಕೂ ಹೆಚ್ಚು ಕೋವಿಡ್- 19 ಪ್ರಕರಣಗಳು ಕಳೆದ ವಾರ ವರದಿಯಾಗಿದೆ. ಕಳೆದ ವಾರಕ್ಕೆ ಹೋಲಿಸಿದಲ್ಲಿ ಹೊಸದಾಗಿ ಸಾವಿನ ಪ್ರಮಾಣ ಶೇಕಡಾ 11ರಷ್ಟು ಹೆಚ್ಚಾಗಿದೆ. ಈ ಮೂಲಕ 71,000ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿವೆ.
– ಇರಾನ್ ಸತತ ಮೂರನೇ ದಿನ ಹೊಸ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ದಾಖಲೆ ಬರೆದಿದೆ. ಹತ್ತಿರಹತ್ತಿರ 22,600 ಹೊಸ ಪ್ರಕರಣಗಳು ವರದಿ ಆಗಿವೆ.
– ಕೊರೊನಾ ಆರಂಭದ ನಂತರ ಕಾಣದಿದ್ದಷ್ಟು ಮಟ್ಟದಲ್ಲಿ ಭಾರತದಲ್ಲಿ ಈಗ ಸಕ್ರಿಯ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ದೇಶದ ಸಕ್ರಿಯ ಸೋಂಕು ಪ್ರಕರಣಗಳು 10 ಲಕ್ಷದ ಲೆಕ್ಕ ದಾಟಿದೆ. ಶುಕ್ರವಾರ ದಿನದ ಕೊನೆಗೆ 10,46,000 ಸಕ್ರಿಯ ಪ್ರಕರಣಗಳು ಇದ್ದವು. ಇದರ ಜತೆಗೆ ಹೊಸ ಸೋಂಕು ಪ್ರಕರಣಗಳು 1.45 ಲಕ್ಷಕ್ಕೂ ಹೆಚ್ಚಾಗಿದೆ.
– ಅಮೆರಿಕ ನಂತರ ಅತಿ ಹೆಚ್ಚು ಕೋವಿಡ್- 19 ಸಾವು ಕಂಡ ದೇಶ ಬ್ರೆಜಿಲ್. ಅಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 4000 ದಾಟಿದೆ.
– ಲಸಿಕೆ ಹಾಕುವ ಪ್ರಕ್ರಿಯೆಗೆ ವೇಗ ದೊರೆತಿರುವ ದೇಶಗಳಲ್ಲಿ ಹೆಚ್ಚುತ್ತಿರುವ ಸೋಂಕು, ಆಸ್ಪತ್ರೆಗೆ ಸೇರುತ್ತಿರುವವರು ಮತ್ತು ಸಾವಿನ ಪ್ರಕರಣಗಳು ಜಾಸ್ತಿ ಆಗುತ್ತಿವೆ.
– ಟರ್ಕಿಯಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಬ್ರಿಟನ್​ನಲ್ಲಿ ಮೊದಲ ಬಾರಿಗೆ ಕಂಡುಬಂದಂಥ ಬಗೆಯ ಕೊರೊನಾ ಪ್ರಕರಣಗಳು ಟರ್ಕಿಯಲ್ಲಿ ಹೊಸದಾಗಿ ಕಂಡುಬರುತ್ತಿದೆ.

ಇದನ್ನೂ ಓದಿ: ಕೊರೊನಾ ಚೈನ್ ಲಿಂಕ್ ತಪ್ಪಿಸಿಲು ನೈಟ್ ಕರ್ಪ್ಯೂ ಜಾರಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

(Corona second wave: Active covid- 19 cases in India crossed 1 million.)