Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಚೈನ್ ಲಿಂಕ್ ತಪ್ಪಿಸಿಲು ನೈಟ್ ಕರ್ಪ್ಯೂ ಜಾರಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಕೆಲವು ವ್ಯಾಪಾರಗಳು ಹತ್ತು ಗಂಟೆಯ ನಂತರ ಲಾಭ ಪಡೆದುಕೊಳ್ಳುತ್ತಿವೆ. ಇದರಿಂದ ನೈಟ್ ಕರ್ಫ್ಯೂ ಬಗ್ಗೆ ವ್ಯಾಪಾರದಲ್ಲಿ ನಷ್ಟವಾಗುವುದರಿಂದ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಕೊರೊನಾ ನಿಯಂತ್ರಣಕ್ಕೆ ಬೇರೆ ಮಾರ್ಗವಿಲ್ಲ. ಜೀವ ಮತ್ತು ಜೀವನೋಪಾಯ ಎರಡೂ ಉಳಿಸಬೇಕಾಗಿದೆ ಎಂದು ಡಾ.ಕೆ.ಸುಧಾಕರ್ ಹೇಳಿದರು.

ಕೊರೊನಾ ಚೈನ್ ಲಿಂಕ್ ತಪ್ಪಿಸಿಲು ನೈಟ್ ಕರ್ಪ್ಯೂ ಜಾರಿ:  ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಕೆ. ಸುಧಾಕರ್​
Follow us
sandhya thejappa
| Updated By: preethi shettigar

Updated on: Apr 10, 2021 | 12:08 PM

ಚಿಕ್ಕಬಳ್ಳಾಪುರ: ಕೊರೊನಾ ಎರಡನೇ ಅಲೆಯ ಬಗ್ಗೆ ಜನರು ನಿರ್ಲಕ್ಷಿಸುತ್ತಿದ್ದಾರೆ ಎಂದು ಟಿವಿ9ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಮಾಸ್ಕ್ ಧರಿಸುತ್ತಿಲ್ಲ, ಜನರು ಗುಂಪಾಗಿ ಸೇರುತ್ತಿದ್ದಾರೆ. ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೆ ಶಾಶ್ವತವಾಗಿ ಜಾರಿ ಮಾಡಿಲ್ಲ. ಕೊರೊನಾ ಚೈನ್ ಲಿಂಕ್ ತಪ್ಪಿಸಲು ನೈಟ್ ಕರ್ಫ್ಯೂ ಜಾರಿ ತರಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಕೆಲವು ವ್ಯಾಪಾರಗಳು ಹತ್ತು ಗಂಟೆಯ ನಂತರ ಲಾಭ ಪಡೆದುಕೊಳ್ಳುತ್ತಿವೆ. ಇದರಿಂದ ನೈಟ್ ಕರ್ಫ್ಯೂ ಬಗ್ಗೆ ವ್ಯಾಪಾರದಲ್ಲಿ ನಷ್ಟವಾಗುವುದರಿಂದ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಕೊರೊನಾ ನಿಯಂತ್ರಣಕ್ಕೆ ಬೇರೆ ಮಾರ್ಗವಿಲ್ಲ. ಜೀವ ಮತ್ತು ಜೀವನೋಪಾಯ ಎರಡೂ ಉಳಿಸಬೇಕಾಗಿದೆ. ಲಾಕ್​ಡೌನ್ ಮಾಡಬಾರದು ಎನ್ನುವುದಾದರೆ ಸಹಕರಿಸಿ ನೈಟ್ ಕರ್ಫ್ಯೂನ ಪಾಲಿಸಿ ಎಂದು ಮನವಿ ಮಾಡಿದ ಆರೋಗ್ಯ ಸಚಿವರು ಕೊವಿಡ್ ನಿಯಮ ಪಾಲಿಸಿ ಸರ್ಕಾರಕ್ಕೆ ಸಹಕಾರ ನೀಡಿ ಎಂದು ಚಿಕ್ಕಬಳ್ಳಾಪುರದಲ್ಲಿ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಲಹೆಯಂತೆ ಕರ್ಫ್ಯೂ ಜಾರಿ ಮಾಡಲಾಗಿದೆ. ಜನ ಕೊರೊನಾ ಮರೆತು ಬಿಟ್ಟಿದ್ದಾರೆ. ಕೊವಿಡ್ ನಿಯಮಾವಳಿಗಳ ವಿರುದ್ಧವಾಗಿ ಜನ ನಡೆದುಕೊಳ್ಳುತ್ತಿದ್ದಾರೆ. ಜನಜಾಗೃತಿ, ಕೊರೊನಾ ಸೋಂಕು ನಿಯಂತ್ರಣಕ್ಕೆ ಕರ್ಫ್ಯೂ ಅನಿವಾರ್ಯವಾಗಿದೆ. ಯಾರಿಗೂ ನಷ್ಟ ಉಂಟುಮಾಡುವುದು ನಮ್ಮ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದ ಆರೋಗ್ಯ ಸಚಿವ ಸುಧಾಕರ್ ಕೊರೊನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿದೆ. ತೀವ್ರ ರೂಪದಲ್ಲಿ ಮುಂಜಾಗ್ರತೆ ಕ್ರಮಗಳ ಅನಿವಾರ್ಯತೆಯಿದೆ ಎಂದು ತಿಳಿಸಿದರು

ಇದನ್ನೂ ಓದಿ

ಬಸ್ ಮುಷ್ಕರಕ್ಕೆ ಕುಮ್ಮಕ್ಕು ನೀಡಿದ ಕೋಡಿಹಳ್ಳಿ ಚಂದ್ರಶೇಖರ್ ಬೆಳಗಾವಿಯಲ್ಲಿ ಪೊಲೀಸರ ವಶಕ್ಕೆ

ರಸಗೊಬ್ಬರ ದರ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯಕ್ಕೆ ಬ್ರೇಕ್​; ಆದರೆ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ನಿಶ್ಚಿತ (Kannada News Dr K Sudhakar says night curfew has been issued to prevent corona infection in chikkaballapur)

ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ