ಕರಾವಳಿ ಸಮುದ್ರಗಳಿಗೆ ಕಾಯಕಲ್ಪ; ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲು ಮುಂದಾದ ಮಂಗಳೂರು ಜಿಲ್ಲಾಡಳಿತ
ಹಲವು ಯೋಜನೆಗಳ ಮೂಲಕ ಕರಾವಳಿ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಿದೆ. ಕಳೆದ ಎರಡು ತಿಂಗಳಲ್ಲಿ ಮೂರ್ನಾಲ್ಕು ಬಾರಿ ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ಮಂಗಳೂರಿಗೆ ಭೇಟಿ ನೀಡಿ ಸರ್ವೆಯನ್ನು ಕೂಡ ಮಾಡಿಸಿದ್ದಾರೆ.
ದಕ್ಷಿಣ ಕನ್ನಡ: ಸಮುದ್ರ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಏಕಾಂತದಲ್ಲಿ ಕಾಲ ಕಳೆಯಲು ಹಲವರು ಸಮುದ್ರದ ಮೊರೆ ಹೋಗುತ್ತಾರೆ. ಇನ್ನು ಸಮುದ್ರವನ್ನು ಪ್ರವಾಸಿ ತಾಣ ಎಂದೇ ಕರೆಯಲಾಗುತ್ತದೆ. ಕಡಲನಗರಿ ಮಂಗಳೂರು ಸಮುದ್ರದ ಸುಂದರವಾದ ಪ್ರಕೃತಿಯಿಂದಲೇ ಹೆಚ್ಚು ಪ್ರಸಿದ್ಧಿ. ಆದರೆ ಇಲ್ಲಿನ ಸಮುದ್ರ ಪ್ರವಾಸೋದ್ಯಮ ದಕ್ಷಿಣದ ಪ್ರದೇಶಗಳಲ್ಲೇ ಅತ್ಯಂತ ಕಳಪೆ ಗುಣಮಟ್ಟದಲ್ಲಿ ಇದೆ. ಆದ್ದರಿಂದ ಈ ಕೂಡಲೇ ಇದಕ್ಕೆ ಕಾಯಕಲ್ಪ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಗೋವಾದ ಬೀಚ್ಗಳಂತೆಯೇ ಮಂಗಳೂರು ಬೀಚ್ಗಳು ಕೂಡ ಇದೆ. ಆದರೆ ಇಷ್ಟು ವರ್ಷ ಕಳೆದರೂ ಅದು ಅಭಿವೃದ್ಧಿ ಕಂಡಿಲ್ಲ. ಇದಕ್ಕೆ ಕಾರಣ ಇಲ್ಲಿನ ವ್ಯವಸ್ಥೆ ಮತ್ತು ಕೆಲ ವ್ಯತಿರಿಕ್ತ ಬೆಳವಣಿಗೆಗಳು. ಹೌದು ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಎಂಬ ಅಪಾಯಕಾರಿ ಘಟನೆಗಳು ಆಗಾಗ ನಡೆಯುತ್ತಿರುತ್ತದೆ. ಇದರಿಂದ ಮಸ್ತಿ ಮಾಡಲು ಪ್ರವಾಸಿಗರು ಇತ್ತ ತಲೆ ಹಾಕುವುದಿಲ್ಲ. ಆದ್ದರಿಂದ ಇಲ್ಲಿನ ಸಮುದ್ರ ಪ್ರವಾಸೋದ್ಯಮ ಕುಂಟುತ್ತಾ ಸಾಗುತ್ತಿದೆ.
ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್, ಸೋಮೇಶ್ವರ ಬೀಚ್, ಸಸಿಹಿತ್ಲು ಬೀಚ್ ಹೀಗೆ ಸಾಕಷ್ಟು ಸಮುದ್ರಗಳು ಈ ಭಾಗದಲ್ಲಿ ಇದೆ. ಇದರ ಜೊತೆ ಜೊತೆಗೆ ನದಿ ನೀರು ಸಮುದ್ರ ಸೇರುವುದಕ್ಕೆ ದ್ವೀಪಗಳನ್ನು ಸೃಷ್ಟಿಸಿವೆ. ಅದೆನ್ನೆಲ್ಲಾ ಸರಿಯಾಗಿ ಬಳಸಿಕೊಂಡು ಪ್ರವಾಸೋದ್ಯಮ ನಡೆಸಬಹುದು. ವರ್ಷದಲ್ಲಿ ಲಕ್ಷಾಂತರ ಪ್ರವಾಸಿಗರು ಪಣಂಬೂರು ಸಮುದ್ರಕ್ಕೆ ಬರುವರಾದರೂ ಬೀಚ್ನಿಂದ ವರ್ಷಕ್ಕೆ ಕೇವಲ 8 ಲಕ್ಷ ರೂಪಾಯಿ ಮಾತ್ರ ಜಿಲ್ಲಾಡಳಿತದ ಬೊಕ್ಕಸಕ್ಕೆ ಬೀಳುತ್ತಿದೆ. ಉಳಿದಿದ್ದೆಲ್ಲಾ ಖಾಸಗಿಯವರ ಪಾಲಾಗುತ್ತಿದೆ.
ಮಂಗಳೂರು ನಗರದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಚರ್ಚೆ ನಡೆಸಲಾಗಿದೆ. ಸಮುದ್ರದಲ್ಲಿ ಹೆಚ್ಚು ಪ್ರವಾಸಿ ತಾಣವನ್ನು ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ವರ್ಷಕ್ಕೆ 50 ಲಕ್ಷ ರೂಪಾಯಿ ಗುರಿಯಾಗಿಸಿ ಪಣಂಬೂರು ಬೀಚ್ ಅನ್ನು ಟೆಂಡರ್ಗೆ ಕರೆಯುವ ಪ್ರಕ್ರಿಯೆ ನಡೆಸಿದೆ. ಜೊತೆಗೆ ಹೆಲಿ ಟೂರಿಸಮ್ಗೆ ಕೂಡ ಒತ್ತು ನೀಡಲು ಮುಂದಾಗಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.
ಹಲವು ಯೋಜನೆಗಳ ಮೂಲಕ ಕರಾವಳಿ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಿದೆ. ಕಳೆದ ಎರಡು ತಿಂಗಳಲ್ಲಿ ಮೂರ್ನಾಲ್ಕು ಬಾರಿ ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ಮಂಗಳೂರಿಗೆ ಭೇಟಿ ನೀಡಿ ಸರ್ವೆಯನ್ನು ಕೂಡ ಮಾಡಿಸಿದ್ದಾರೆ. ಈ ಸ್ಥಳದಲ್ಲಿ ಪ್ರವಾಸೋದ್ಯಮ ನಡೆದೇ ಇಲ್ಲ. ಆದ್ದರಿಂದ ಹಲವು ಯೋಜನೆಗಳ ಮೂಲಕ ಇಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಲಾಗುವುದು ಎಂದು ಕರಾವಳಿಗೆ ಭೇಟಿ ನೀಡಿದಾಗ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ತಿಳಿಸಿದ್ದಾರೆ.
ಇನ್ನು ಇಲ್ಲಿನ ಸಮುದ್ರಗಳ ಅಭಿವೃದ್ಧಿಗೆ ಸದ್ಯ ಸಮುದ್ರ ಪ್ರವಾಸೋದ್ಯಮವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡವರು ಮತ್ತು ಪಟ್ಟಭದ್ರ ಹಿತಾಸಕ್ತಿಗಳನ್ನು ಕೈಬಿಟ್ಟು. ಗೋವ ಮಾದರಿಯಲ್ಲಿ ಸಮುದ್ರ ಪ್ರವಾಸೋದ್ಯಮ ಇಲ್ಲಿ ಆರಂಭ ಮಾಡಲು ಚಿಂತನೆ ನಡೆಸಲಾಗುತ್ತಿದೆ.
ಇದನ್ನೂ ಓದಿ:
ಸೋಮೇಶ್ವರ ಬೀಚ್ನಲ್ಲಿ.. ಕ್ಷಣಾರ್ಧದಲ್ಲಿ ಸಮುದ್ರಪಾಲಾಗ್ತಿದ್ದ ಬೊಮ್ಮಸಂದ್ರದ ಯುವತಿಯ ರಕ್ಷಣೆ
(Mangalore News Dakshina Kannada district administration put more emphasis on tourism)