ದೆಹಲಿ: ದೇಶದಲ್ಲಿ ಮತ್ತೊಂದು ಹಂತದ ಕೊರೊನಾ ಲಸಿಕೆ ವಿತರಣೆ ನಿನ್ನೆಯಿಂದ ಆರಂಭವಾಗಿದೆ. ಜನಸಾಮಾನ್ಯರಿಗೆ ಲಸಿಕೆ ಬಗ್ಗೆ ಧೈರ್ಯ ಮೂಡಿಸುವ ಸಲುವಾಗಿ ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೊನಾ ಲಸಿಕೆ ಪಡೆದಿದ್ದರು. ಇದೀಗ ಕೇಂದ್ರ ಆರೋಗ್ಯ ಖಾತೆ ಸಚಿವ ಡಾ.ಹರ್ಷವರ್ಧನ್ ಹಾಗೂ ಅವರ ಅವರ ಪತ್ನಿ ಸಹ ಲಸಿಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಲಸಿಕೆ ಸ್ವೀಕರಿಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಿಡಿಯೋ ಹಂಚಿಕೊಂಡಿದ್ದಾರೆ.
ಇನ್ನೊಂದೆಡೆ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿರುವ ರವಿಶಾಸ್ತ್ರಿ ಸಹ ಲಸಿಕೆ ಪಡೆದಿದ್ದು, ಅವರು ಸಹ ತಮ್ಮ ಟ್ವಿಟರ್ ಖಾತೆಯಲ್ಲಿ ಲಸಿಕೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ಜನಪ್ರಿಯ ವ್ಯಕ್ತಿಗಳು ಲಸಿಕೆ ಬಗ್ಗೆ ಜನರಿಗೆ ಧೈರ್ಯ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
Watch Now !
Union Health Minister Dr Harsh Vardhan set to get inoculated with #COVID19Vaccine at Delhi Heart & Lung Institute@PMOIndia @MoHFW_INDIA #LargestVaccineDrivehttps://t.co/KZS98PSh5F
— DrHarshVardhanOffice (@DrHVoffice) March 2, 2021
Got the first dose of COVID-19 vaccine. Thank you to the amazing medical professionals & scientists for empowering India ?? against the pandemic.
Extremely impressed with the professionalism shown by Kantaben & her team at Apollo, Ahmedabad in dealing with COVID-19 vaccination pic.twitter.com/EI29kMdoDF
— Ravi Shastri (@RaviShastriOfc) March 2, 2021
ಇದನ್ನೂ ಓದಿ:
ದೆಹಲಿಯ ಏಮ್ಸ್‌ನಲ್ಲಿ ಕೊರೊನಾ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ