Covid Vaccine | ಭಾರತದಲ್ಲಿ ಕೊವಿಡ್ ಲಸಿಕೆ ಕೊರತೆ ನೀಗಿಸಲು ಕೇಂದ್ರ ಸರ್ಕಾರದಿಂದ ಹೊಸ ಪ್ಲಾನ್

| Updated By: ಸುಷ್ಮಾ ಚಕ್ರೆ

Updated on: Sep 18, 2021 | 8:12 PM

Covid-19 Vaccine in India | ಕೇವಲ 24 ಗಂಟೆಯಲ್ಲಿ 2.5 ಕೋಟಿ ಕೊವಿಡ್ ಲಸಿಕೆಗಳನ್ನು ನೀಡುವ ಮೂಲಕ ದಾಖಲೆ ಬರೆದ ಬೆನ್ನಲ್ಲೇ ದೇಶದಲ್ಲಿ ಕೊರೊನಾ ಲಸಿಕೆಗಳ ಕೊರತೆ ನೀಗಿಸಲು ಹೊಸ ಪ್ಲಾನ್ ಮಾಡಲು ಸರ್ಕಾರ ಮುಂದಾಗಿದೆ. ಪ್ರತಿ ತಿಂಗಳು 25 ಕೋಟಿ ಕೊವಿಡ್ ಲಸಿಕೆ ಡೋಸ್​ಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

Covid Vaccine | ಭಾರತದಲ್ಲಿ ಕೊವಿಡ್ ಲಸಿಕೆ ಕೊರತೆ ನೀಗಿಸಲು ಕೇಂದ್ರ ಸರ್ಕಾರದಿಂದ ಹೊಸ ಪ್ಲಾನ್
ಲಸಿಕೆ
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದಂದು ದೇಶದಾದ್ಯಂತ ನಿನ್ನೆ ಒಂದೇ ದಿನ 2.5 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಕೇವಲ 24 ಗಂಟೆಯಲ್ಲಿ 2.5 ಕೋಟಿ ಕೊವಿಡ್ ಲಸಿಕೆಗಳನ್ನು ನೀಡುವ ಮೂಲಕ ದಾಖಲೆ ಬರೆದ ಬೆನ್ನಲ್ಲೇ ದೇಶದಲ್ಲಿ ಕೊರೊನಾ ಲಸಿಕೆಗಳ ಕೊರತೆ ನೀಗಿಸಲು ಹೊಸ ಪ್ಲಾನ್ ಮಾಡಲು ಸರ್ಕಾರ ಮುಂದಾಗಿದೆ. ಪ್ರತಿ ತಿಂಗಳು 25 ಕೋಟಿ ಕೊವಿಡ್ ಲಸಿಕೆ ಡೋಸ್​ಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ಈ ತಿಂಗಳು ಭಾರತದಲ್ಲಿ 20 ಕೋಟಿ ಕೋವಿಶೀಲ್ಡ್ ಡೋಸ್ ಹಾಗೂ 3.5 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತದೆ. ಮುಂದಿನ ತಿಂಗಳಿನಿಂದ ಒಂದು ತಿಂಗಳಿಗೆ 25 ಕೋಟಿ ಕೊವಿಡ್ ಲಸಿಕೆಯ ಡೋಸ್​ಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಒಂದೇ ದಿನ ಭಾರತದಲ್ಲಿ 2.5 ಕೋಟಿ ಕೊವಿಡ್ ಲಸಿಕೆಗಳನ್ನು ನೀಡಲಾಗಿದೆ. ಈ ವರ್ಷಾಂತ್ಯದೊಳಗೆ ಭಾರತದ 135 ಕೋಟಿ ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ನೀಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಕರ್ನಾಟಕವು ಪ್ರಧಾನಿ ಮೋದಿಯವರ ಜನ್ಮದಿನದಂದು ಅತಿಹೆಚ್ಚು ಕೊವಿಡ್ ಲಸಿಕೆ ಡೋಸ್​ಗಳನ್ನು ನೀಡಿವೆ. ನಿನ್ನೆ ಕರ್ನಾಟಕದಲ್ಲಿ 29 ಲಕ್ಷ ಡೋಸ್ ಲಸಿಕೆಗಳನ್ನು ನೀಡಲಾಯಿತು.

ಭಾರತದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ಕೊವಾಕ್ಸಿನ್ ಶೀಘ್ರದಲ್ಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮತಿ ಸಿಗುವ ಸಾಧ್ಯತೆಯಿದೆ. ಅಂತಿಮವಾಗಿ ಆ ಲಸಿಕೆಗಳನ್ನು ಪಡೆಯುವವರು ಕಡ್ಡಾಯವಾಗಿ ಸಂಪರ್ಕ ತಡೆ ಇಲ್ಲದೆ ವಿದೇಶಕ್ಕೆ ಪ್ರಯಾಣಿಸಲು ಅನುವು ಮಾಡಿಕೊಡಲಾಗುತ್ತದೆ.

ಇದನ್ನೂ ಓದಿ: ಹುಬ್ಬಳ್ಳಿ: ಕೊವಿಡ್ ಬಳಿಕ ಮಕ್ಕಳನ್ನು ಕಾಡುತ್ತಿದೆ ನ್ಯುಮೋನಿಯಾ; ಒಂದೇ ವಾರದಲ್ಲಿ 7 ಮಕ್ಕಳು ಬಲಿ

(Covid-19 vaccine shortage woes to end soon as India plans to distribute 25 crore doses Coronavirus Vaccine per month)