ದೆಹಲಿ: ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಲ್ಲಿ ಕುಳಿತು ಆಹಾರ ಸೇವಿಸುವುದನ್ನು ನಿರ್ಬಂಧಿಸಲು ನಿರ್ಧರಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೊವಿಡ್-19 (Covid-19) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸಂಸ್ಥೆಗಳಿಗೆ ‘ಟೇಕ್ ಅವೇ’ ಸೌಲಭ್ಯವನ್ನು ನಿರ್ವಹಿಸಲು ಮಾತ್ರ ಅನುಮತಿಸಲಾಗಿದೆ. ಅಂದರೆ ದೆಹಲಿಯಾದ್ಯಂತ ಇರುವ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಲ್ಲಿ (restaurants and bars) ಸದ್ಯಕ್ಕೆ ಗ್ರಾಹಕರಿಗೆ ಊಟ ಮಾಡಲು ಅನುಮತಿಸಲಾಗುವುದಿಲ್ಲ. ಸೋಮವಾರ ದೆಹಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ಅಧ್ಯಕ್ಷತೆಯಲ್ಲಿ ನಡೆದ ಡಿಡಿಎಂಎ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ಶೇಕಡಾ 50 ರಷ್ಟು ಆಸನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಡಿಡಿಎಂಎ ಅನುಮತಿ ನೀಡಿತ್ತು. ಸೋಮವಾರ ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ನೇತೃತ್ವದಲ್ಲಿ ನಡೆದ ಡಿಡಿಎಂಎ ಸಭೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾಗವಹಿಸಿದ್ದರು.
ದೆಹಲಿಯಲ್ಲಿ ಲಾಕ್‌ಡೌನ್ ಇಲ್ಲ ಎಂದು ಹೇಳಿದ್ದು ರೆಸ್ಟೋರೆಂಟ್‌ಗಳಲ್ಲಿ ಡೈನ್-ಇನ್ ಸೌಲಭ್ಯವನ್ನು ಮುಚ್ಚಲು ಮತ್ತು ಮೆಟ್ರೋ ರೈಲುಗಳು ಮತ್ತು ಬಸ್‌ಗಳಲ್ಲಿ ಆಸನ ಸಾಮರ್ಥ್ಯವನ್ನು ಕಡಿಮೆ ಮಾಡಲು ನಿರ್ಧರಿಸಲಾಯಿತು.
DDMA decides to close restaurants, only take away facility allowed: Delhi LG Anil Baijal
— Press Trust of India (@PTI_News) January 10, 2022
ಹೆಚ್ಚಿದ ಕೊವಿಡ್ ಪ್ರಕರಣ
ದೆಹಲಿಯಲ್ಲಿ ಸೋಮವಾರ 19,166 ಹೊಸ ಸೋಂಕಿನ ಪ್ರಕರಣಗಳು ಮತ್ತು 17 ಕೊವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ. ದೆಹಲಿಯಲ್ಲಿ ಈಗ ಪಾಸಿಟಿವಿಟಿ ದರವು ಶೇಕಡಾ 25 ರಷ್ಟಿದೆ, ಇದು ಕಳೆದ ವರ್ಷದ ಮೇ 5 ರಿಂದ ಅತ್ಯಧಿಕವಾಗಿದೆ. ದೆಹಲಿಯಲ್ಲಿ ಪ್ರಸ್ತುತ 60,733 ಸಕ್ರಿಯ ಸೋಂಕಿನ ಪ್ರಕರಣಗಳಿವೆ. ಈ ಅಂಕಿ ಅಂಶವು ಮನೆಯಲ್ಲಿ ಪ್ರತ್ಯೇಕವಾಗಿ ಇರುವ 35,714 ರೋಗಿಗಳನ್ನು ಒಳಗೊಂಡಿದೆ.
ದೆಹಲಿ ಪೊಲೀಸರ ಹೇಳಿಕೆಯ ಪ್ರಕಾರ, ಪಡೆಯಲ್ಲಿರುವ ಸುಮಾರು “ಸಾವಿರ ಪೊಲೀಸ್ ಸಿಬ್ಬಂದಿ” ಕೊವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ ಮತ್ತು ಕ್ವಾರಂಟೈನ್‌ನಲ್ಲಿದ್ದಾರೆ.
ಭಾನುವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಕೊವಿಡ್ ಹರಡುವುದನ್ನು “ತೀವ್ರ ಕಳವಳ” ಎಂದು ಬಣ್ಣಿಸಿದ್ದಾರೆ. ಆದಾಗ್ಯೂ, ದೆಹಲಿ ಸರ್ಕಾರವು ಇನ್ನೂ ಲಾಕ್‌ಡೌನ್ ಹೇರುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಲಾಕ್‌ಡೌನ್ ಇಲ್ಲ, ಆದರೆ ಎಚ್ಚರಿಕೆ ವಹಿಸಿ: ಅರವಿಂದ ಕೇಜ್ರಿವಾಲ್