1000 ಆಕ್ಸಿಜನ್ ಬೆಡ್ ಇರುವ, ದೇಶದಲ್ಲಿಯೇ ಅತ್ಯಂತ ದೊಡ್ಡ ಕೊವಿಡ್ ಕಾಳಜಿ ಕೇಂದ್ರ ಕೇರಳದಲ್ಲಿ ನಿರ್ಮಾಣ
ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಇಲ್ಲಿಗೆ ನೇಮಕ ಮಾಡಿಕೊಳ್ಳುವ ವೈದ್ಯಕೀಯ ಸಿಬ್ಬಂದಿಯ ಇಂಟರ್ವ್ಯೂ ಮುಗಿದಿದೆ.
ಭಾರತದಲ್ಲಿಯೇ ಅತ್ಯಂತ ದೊಡ್ಡದಾದ, ಆಕ್ಸಿಜನ್ ಬೆಡ್ಗಳನ್ನೊಳಗೊಂಡ ಕೊವಿಡ್ 19 ಕಾಳಜಿ ಕೇಂದ್ರ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ. ಇದು ಎರ್ನಾಕುಲಂನ ಅಂಬಾಲಮುಗಲ್ನಲ್ಲಿ ಸಿದ್ಧವಾಗುತ್ತಿರುವ ಈ ಕೊವಿಡ್ ಕೇರ್ ಸೆಂಟರ್ನಲ್ಲಿ 1000 ಆಕ್ಸಿಜನ್ ಬೆಡ್ಗಳು ಇರಲಿವೆ. ಗುರುವಾರ (ಮೇ 13)ದ ಹೊತ್ತಿಗೆ ಸಂಪೂರ್ಣವಾಗಿ ಸಿದ್ಧವಾಗಲಿದೆ.
ಎಲ್ಲೆಲ್ಲೂ ಆಕ್ಸಿಜನ್ ಕೊರತೆ ಮಿತಿಮೀರುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಅಂಬಾಲಮುಗಲ್ನ ರಿಫೈನರಿ ಶಾಲೆ ಮೈದಾನದಲ್ಲಿ, 1000 ಆಕ್ಸಿಜನ್ ಬೆಡ್ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಎರ್ನಾಕುಲಂ ಜಿಲ್ಲಾಧಿಕಾರಿ ಎಸ್. ಸುಹಾಸ್ ತಿಳಿಸಿದ್ದಾರೆ. ಇದು ದೇಶದಲ್ಲಿಯೇ ಅತ್ಯಂತ ದೊಡ್ಡ, ಆಕ್ಸಿಜನ್ ವ್ಯವಸ್ಥೆಯನ್ನೊಳಗೊಂಡ ವ್ಯವಸ್ಥೆಯಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಇಲ್ಲಿಗೆ ನೇಮಕ ಮಾಡಿಕೊಳ್ಳುವ ವೈದ್ಯಕೀಯ ಸಿಬ್ಬಂದಿಯ ಇಂಟರ್ವ್ಯೂ ಮುಗಿದಿದೆ. ರಾಜ್ಯದಲ್ಲಿ ಕೊವಿಡ್ 19 ವಿರುದ್ಧ ಹೋರಾಟವನ್ನು ಬಲಪಡಿಸಲು ನಿರ್ಧರಿಸಿದ್ದಾಗಿ ಕಳೆದ ವಾರ ಕೇರಳ ಸರ್ಕಾರ ಹೇಳಿತ್ತು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ 12 ಪ್ರತಿಪಕ್ಷ ನಾಯಕರಿಂದ ಪತ್ರ; ಕೊವಿಡ್ 19 ವಿರುದ್ಧ ಹೋರಾಟಕ್ಕೆ ಹಲವು ಸಲಹೆಗಳು
ಕೊವಿಡ್ ಲಸಿಕೆಯ ಮೊದಲ ಡೋಸ್ ಪಡೆದ ಆರೋಗ್ಯ ಕಾರ್ಯಕರ್ತರ ಸಂಖ್ಯೆ 95 ಲಕ್ಷಕ್ಕಿಂತಲೂ ಹೆಚ್ಚು: ಕೇಂದ್ರ ಸಚಿವ ಹರ್ಷವರ್ಧನ್