ದೇಶದಲ್ಲಿ ತೀವ್ರವಾಗುತ್ತಿದೆ ಕೊವಿಡ್ 19; ಇಂದು ಮತ್ತೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ
ರೆಮ್ಡಿಸಿವಿರ್ ಸೇರಿ ಕೊವಿಡ್ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಔಷಧಗಳ ಉತ್ಪಾದನೆಯೂ ಗಣನೀಯವಾಗಿ ಹೆಚ್ಚಾಗಿದೆ ಎಂದು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಲಾಗಿದೆ.
ದೇಶದಲ್ಲಿ ಆಮ್ಲಜನಕ ಲಭ್ಯತೆ ಮತ್ತು ಪೂರೈಕೆಯ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ದೇಶದಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಇದೆ. ಪೂರೈಕೆಯ ಪ್ರಮಾಣ ಎಷ್ಟಿದೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಅವರು ವರದಿ ಪಡೆದಿದ್ದಾರೆ.
ಇನ್ನು ಕೊವಿಡ್ನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಮ್ಯೂಕೋರ್ಮೈಕೋಸಿಸ್ಗೆ ಅಗತ್ಯವಿರುವ ಔಷಧಿಯ ಸರಬರಾಜಿನ ಬಗ್ಗೆಯೂ ಪ್ರಧಾನಿ ಮೋದಿ ವಿವರಣೆ ಕೇಳಿದ್ದಾರೆ. ಕಪ್ಪು ಶೀಲೀಂದ್ರ ಸೋಂಕಿಗೆ ಚಿಕಿತ್ಸೆ ನೀಡಲು ಸರಬರಾಜು ಮಾಡುತ್ತಿರುವ ಔಷಧಿಯ ಮೇಲ್ವಿಚಾರಣೆಯನ್ನು ಸೂಕ್ತವಾಗಿ ನಿರ್ವಹಿಸುತ್ತಿರುವ ಬಗ್ಗೆ ಅವರಿಗೆ ಈ ಸಭೆಯಲ್ಲಿ ತಿಳಿಸಲಾಗಿದೆ. ಹಾಗೇ ರಾಜ್ಯಸರ್ಕಾರಗಳಿಗೆ ಅಗತ್ಯ ಇರುವಷ್ಟು ಪೂರೈಕೆ ಮಾಡಲಾಗುತ್ತಿದೆ ಎಂದೂ ಸಂಬಂಧಪಟ್ಟ ಸಚಿವಾಲಯದವರು ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ರೆಮ್ಡಿಸಿವಿರ್ ಸೇರಿ ಕೊವಿಡ್ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಔಷಧಗಳ ಉತ್ಪಾದನೆಯೂ ಗಣನೀಯವಾಗಿ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ. ದೇಶದಲ್ಲಿ ಕೊವಿಡ್ 19 ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಬಹುತೇಕ ರಾಜ್ಯಗಳು ಲಾಕ್ಡೌನ್ ವಿಧಿಸಿವೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಟ್ಟಿಗೆ ಪದೇಪದೆ ಮಾತುಕತೆ ನಡೆಸುತ್ತಿದ್ದಾರೆ. ಆಯಾ ರಾಜ್ಯಗಳ ಪರಿಸ್ಥಿತಿಯ ಬಗ್ಗೆ ವರದಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ: 18 ವರ್ಷ ಮೇಲ್ಪಟ್ಟವರಿಗೆ ಸದ್ಯ ಕೊವಿಡ್ ಲಸಿಕೆ ಇಲ್ಲ: ರಾಜ್ಯ ಸರ್ಕಾರ ಆದೇಶ
Prime Minister Narendra Modi chaired a high level meeting to review Covid 19 situation