ದೆಹಲಿ: ಕೊವಿಶೀಲ್ಡ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ಗೆ ₹ 600ಕ್ಕೆ ಮಾರಾಟ ಮಾಡುತ್ತಿರುವ ಕುರಿತು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಲಾ ಸ್ಪಷ್ಟನೆ ನೀಡಿದ್ದಾರೆ. ಕೋವಿಶೀಲ್ಡ್ ಲಸಿಕೆ ಈಗಲೂ ಅಗ್ಗದ ಬೆಲೆಯಲ್ಲಿ ಸಿಗುತ್ತಿದೆ. ಭಾರತದ ಲಸಿಕೆಯ ಬೆಲೆಯನ್ನು ವಿವಿಧ ರಾಷ್ಟ್ರಗಳಲ್ಲಿನ ಲಸಿಕೆ ಬೆಲೆಯ ಜತೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಇತರ ದೇಶಗಳಲ್ಲಿ ಬೇರೆ ಕಂಪನಿಗಳು ಮುಂಚಿತವಾಗಿ ಹೂಡಿಕೆ ಮಾಡಿದ್ದರಿಂದ ಕಡಿಮೆ ಬೆಲೆ ನಿಗದಿಪಡಿಸಲಾಗಿದೆ. ನಾವೂ ಸಹ ಪ್ರಾರಂಭದಲ್ಲಿ ಸರ್ಕಾರಕ್ಕೆ ಕಡಿಮೆ ಬೆಲೆಗೆ ಲಸಿಕೆ ಪೂರೈಸಿದ್ದೇವೆ. ಆದರೆ ಇತರ ವೈದ್ಯಕೀಯ ಚಿಕಿತ್ಸೆಗೆ ಹೋಲಿಸಿದರೆ ಕೊವಿಶೀಲ್ಡ್ನ ಪ್ರತಿ ಡೋಸ್ಗೆ ನಿಗದಿಪಡಿಸಿರುವ ₹ 600 ಕಡಿಮೆಯೇ ಆಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜನರ ಆರೋಗ್ಯದ ದೃಷ್ಟಿಯಿಂದ ಬೇರೆ ಲಸಿಕೆಗಳು ಭಾರತಕ್ಕೆ ಬರಬೇಕು. ಈಗ ಉತ್ಪಾದನೆ ಹೆಚ್ಚಿಸಲು ನಾವು ಹೆಚ್ಚಿನ ಹೂಡಿಕೆ ಮಾಡಬೇಕು. ಲಸಿಕೆ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಬೇಕು. ಸೀಮಿತ ಪ್ರಮಾಣದಲ್ಲಿ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಲಾ ತಿಳಿಸಿದರು.
ದೆಹಲಿ ಸರ್ಕಾರದ ವಿರುದ್ಧ ಬಿ.ಎಲ್.ಸಂತೋಷ್ ವ್ಯಂಗ್ಯ
ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವೆ ಮೆಡಿಕಲ್ ಆಕ್ಸಿಜನ್ ವಿಷಯದಲ್ಲಿ ಜಟಾಪಟಿ ನಡೆಯುತ್ತಿದೆ. ವೈದ್ಯಕೀಯ ಆಮ್ಲಜನಕ ಒದಗಿಸುವಂತೆ ದೆಹಲಿ ಸರ್ಕಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು. ದೆಹಲಿ ಸರ್ಕಾರದ ಬೇಡಿಕೆಗೆ ಖಾಲಿ ಟ್ಯಾಂಕರ್ ತಂದು ಆಕ್ಸಿಜನ್ ತೆಗೆದುಕೊಂಡು ಹೋಗಿ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿತ್ತು. ದೆಹಲಿ ಸರ್ಕಾರವೇ ಖಾಲಿ ಟ್ಯಾಂಕರ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದ ದೆಹಲಿ ಹೈಕೋರ್ಟ್ ಹೇಳಿತ್ತು. ಆದರೆ ದೆಹಲಿ ಸರ್ಕಾರದ ಬಳಿ ಮೆಡಿಕಲ್ ಆಕ್ಸಿಜನ್ ಸಾಗಿಸುವ ಖಾಲಿ ಟ್ಯಾಂಕರ್ಗಳೇ ಇರಲಿಲ್ಲ ಎಂದು ರಾಷ್ಟ್ರೀಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮೂಲಲ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವನ್ನು ಟೀಕಿಸಿದ್ದಾರೆ.
Not politicking just setting record straight.Delhi Govt under @ArvindKejriwal is a disgrace to Democratic Governance. It doesn’t invest on essentials. Doesn’t pick up O2 allotted. Doesn’t look for tankers . Want everything at doorstep. Busy pointing fingers. #KejriwalFailsDelhi
— B L Santhosh (@blsanthosh) April 24, 2021
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ. ಅಗತ್ಯ ಸಾಮಗ್ರಿಗಳ ಮೇಲೆ ದೆಹಲಿ ಸರ್ಕಾರ ಹೂಡಿಕೆ ಮಾಡಿಲ್ಲ. ಹಂಚಿಕೆಯಾದ ಆಕ್ಸಿಜನ್ ತೆಗೆದುಕೊಂಡು ಹೋಗಿಲ್ಲ. ಟ್ಯಾಂಕರ್ ಗಳ ವ್ಯವಸ್ಥೆ ಮಾಡಿಕೊಂಡಿಲ್ಲ. ದೆಹಲಿ ಸಿಎಂಗೆ ಎಲ್ಲವೂ ಮನೆ ಬಾಗಿಲಿಗೆ ತಂದುಕೊಡುವುದನ್ನು ಬಯಸುತ್ತಾರೆ ಬೇರೆಯವರತ್ತ ಬೆರಳು ತೋರುವುದರಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿರತರಾಗಿದ್ದಾರೆ ಎಂದು ಬಿ.ಎಲ್.ಸಂತೋಷ್ ವ್ಯಂಗ್ಯವಾಡಿದ್ದಾರೆ.
Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ
(Covishield vaccine is cheaper compared to other vaccines says Adar Poonawalla)
Published On - 5:16 pm, Sat, 24 April 21