ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು(Navjot Singh Sidhu) ತಮ್ಮ ಪತ್ನಿಯ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಡೇಟ್‌ಗಳನ್ನು ಹಂಚಿಕೊಂಡಿದ್ದಾರೆ. ಸಿಧು ಪತ್ನಿ ನವಜೋತ್ ಕೌರ್ ಸ್ತನ ಕ್ಯಾನ್ಸರ್(Navjot Kaur)ನಿಂದ ಬಳಲುತ್ತಿದ್ದು, ಶಸ್ತ್ರ ಚಿಕಿತ್ಸೆ ಬಳಿಕ ಚಿತ್ರವೊಂದನ್ನು ಹಂಚಿಕೊಂಡು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
ಅಪರೂಪದ ಕಾಯಿಲೆಯಾದ ಮೆಟಾಸ್ಟಾಸಿಸ್ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ರೋಗದಿಂದ ಪೀಡಿತ ಚರ್ಮವನ್ನು ತೆಗೆದುಹಾಕಲಾಯಿತು ಮತ್ತು ಫ್ಲಾಪ್ ಬಳಸಿ ಮರುನಿರ್ಮಾಣ ಮಾಡಲಾಯಿತು ಎಂದು ಬರೆದುಕೊಂಡಿದ್ದಾರೆ.
ಆಕೆಯ ಸಂಕಲ್ಪ ಬಲವಾಗಿದೆ, ಯಾವಾಗಲೂ ಮುಖದಲ್ಲಿ ನಗು ಇರುತ್ತದೆ, ಡಾ. ರೂಪಿಂದರ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಹಾರೈಸಿದ್ದಾರೆ ಎಂದು ಸಿಧು ಹೇಳಿದ್ದಾರೆ.
ನವಜೋತ್ ಕೌರ್ ಕ್ಯಾನ್ಸರ್ನಿಂದ ಬಳಲುತ್ತಿರುವ ಬಗ್ಗೆ ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಮಾಹಿತಿ ಬಹಿರಂಗವಾಗಿತ್ತು. ನನ್ನ ಪಿಇಟಿ ಸ್ಕ್ಯಾನ್ ಪ್ರಕಾರ, ನಾನು ಕ್ಯಾನ್ಸರ್ ಮುಕ್ತ ಎಂದು ಘೋಷಿಸಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಕೌರ್ ಬರೆದುಕೊಂಡಿದ್ದರು.
ಮತ್ತಷ್ಟು ಓದಿ: Navjot Singh Sidhu: ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ನವಜೋತ್ ಸಿಂಗ್ ಸಿಧು: ವರದಿ
ಏಪ್ರಿಲ್ 4 ರಂದು, ಸಿಧು ತಮ್ಮ ಪತ್ನಿ ಎರಡನೇ ಬಾರಿಗೆ ಸ್ತನ ಕ್ಯಾನ್ಸರ್ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.
Operation for rarest of rare Metastasis – lasted three and a half hours …. Affected skin removed and reconstruction done with flaps … her resolve is steadfast , the smile never leaves her face – courage thy name is Noni … Dr Rupinder hoping for a speedy recovery…. pic.twitter.com/qsC6MJW1zE
— Navjot Singh Sidhu (@sherryontopp) April 5, 2024
ಇಲ್ಲಿಯವರೆಗೆ 6 ಬಾರಿ ಕಿಮೋಥೆರಪಿಗೆ ಒಳಗಾಗಿದ್ದಾರೆ. ಇದಕ್ಕೂ ಮುನ್ನ ಅವರು ಆಪರೇಷನ್‌ಗೆ ಒಳಗಾಗಿದ್ದರು. ನವಜೋತ್ ಕೌರ್ ಚಿಕಿತ್ಸೆಗಾಗಿ ಸಿಧು ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ