ಹೆಚ್ಚಾಗಿ ಮೊಬೈಲ್ ಫೋನ್ ಬಳಕೆ ಮಾಡಬೇಡ ಎಂದಿದ್ದಕ್ಕೆ ತಂಗಿಯೊಬ್ಬಳು ಅಣ್ಣನನ್ನು ಹತ್ಯೆ ಮಾಡಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. 14 ವರ್ಷದ ಬಾಲಕಿ ಮೊಬೈಲ್ಗೆ ಅಡಿಕ್ಟ್ ಆಗಿದ್ದಳು, ಹುಡುಗರೊಂದಿಗೆ ಹೆಚ್ಚು ಕಾಲ ಮಾತನಾಡುತ್ತಿದ್ದಳು, ಇದನ್ನು ಅರಿತ ಅಣ್ಣ ತಂಗಿಗೆ ಬುದ್ಧಿವಾದ ಹೇಳಿದ್ದ. ಇದಕ್ಕೆ ಕೋಪಗೊಂಡ ಬಾಲಕಿ ಅಣ್ಣನನ್ನು ಹತ್ಯೆ ಮಾಡಿದ್ದಾಳೆ.
ಶುಕ್ರವಾರ ಚುಯಿಖಾಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಲಿದಿಹ್ಕಲಾ ಗ್ರಾಮದಲ್ಲಿ ನಡೆದ ಅಪರಾಧಕ್ಕಾಗಿ ಬಾಲಕಿಯನ್ನು ಬಂಧಿಸಲಾಗಿದೆ. ಘಟನೆಯ ಸಮಯದಲ್ಲಿ ಇತರ ಕುಟುಂಬ ಸದಸ್ಯರು ಕೆಲಸದ ಮೇಲೆ ಹೊರಗೆ ಹೋಗಿದ್ದರೆ ಬಾಲಕಿ ಮತ್ತು ಆಕೆಯ ಸಹೋದರ (18) ಮನೆಯಲ್ಲಿದ್ದರು ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಮೊಬೈಲ್ ಫೋನ್‌ನಲ್ಲಿ ಹುಡುಗರೊಂದಿಗೆ ಮಾತನಾಡುತ್ತೀಯ ಎಂದು ಬೈದಿದ್ದ, ಇನ್ನು ಮುಂದೆ ಫೋನ್ ಬಳಸದಂತೆ ತಿಳಿ ಹೇಳಿದ್ದ. ಬಳಿಕ ಅಣ್ಣ ಮಲಗಿದಾಗ ಕೊಡಲಿಯಿಂದ ಕುತ್ತಿಗೆಗೆ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ನಂತರ ಬಾಲಕಿ ಸ್ನಾನ ಮಾಡಿ ತನ್ನ ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ, ತನ್ನ ಅಣ್ಣನನ್ನು ಯಾರೋ ಹತ್ಯೆ ಮಾಡಿದ್ದಾರೆ ಎಂದು ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ.
ಮತ್ತಷ್ಟು ಓದಿ: Crime News: ಬಾತ್ರೂಂನಲ್ಲಿ ಹುಟ್ಟಿದ ಮಗುವನ್ನು ಕತ್ತು ಹಿಸುಕಿ ಕೊಂದ ತಾಯಿ!
ಪೊಲೀಸರ ವಿಚಾರಣೆ ವೇಳೆ ಆಕೆ ಆತನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ