Shocking News: ಮಗಳ ವಾಟ್ಸಾಪ್ ಸ್ಟೇಟಸ್​ ನೋಡಿ ಗೆಳತಿಯ ಮನೆಯವರಿಂದ ತಾಯಿಯ ಹತ್ಯೆ

| Updated By: ಸುಷ್ಮಾ ಚಕ್ರೆ

Updated on: Feb 14, 2022 | 3:53 PM

ತನ್ನ ಗೆಳತಿಯ ವಾಟ್ಸಾಪ್ ಸ್ಟೇಟಸ್ ನೋಡಿದ ಯುವತಿ ತನ್ನ ಮನೆಯವರಿಗೆ ತೋರಿಸಿದ್ದಾಳೆ. ಬಳಿಕ ಅವಳ ಮನೆಯವರು ವಾಟ್ಸಾಪ್ ಸ್ಟೇಟಸ್ ಹಾಕಿದ ಯುವತಿಯ ಮನೆಗೆ ಹೋಗಿ ಗಲಾಟೆ ಮಾಡಿದ್ದಾರೆ. ಬಳಿಕ ಆಕೆಗೆ ಥಳಿಸಿ, ಕೊಲೆ ಮಾಡಿದ್ದಾರೆ.

Shocking News: ಮಗಳ ವಾಟ್ಸಾಪ್ ಸ್ಟೇಟಸ್​ ನೋಡಿ ಗೆಳತಿಯ ಮನೆಯವರಿಂದ ತಾಯಿಯ ಹತ್ಯೆ
ಪ್ರಾತಿನಿಧಿಕ ಚಿತ್ರ
Follow us on

ಪಲ್ಘಾರ್: ವಾಟ್ಸಾಪ್ ಪೋಸ್ಟ್​ ಕಾರಣಕ್ಕೆ ಮಹಾರಾಷ್ಟ್ರದಲ್ಲಿ 48 ವರ್ಷದ ಮಹಿಳೆಯೊಬ್ಬರನ್ನು ಅವರ ಮಗಳ ಸ್ನೇಹಿತೆಯ ಕುಟುಂಬಸ್ಥರು ಥಳಿಸಿದ ಘಟನೆ ನಡೆದಿದೆ. ಮೃತ ಮಹಿಳೆಯ 20 ವರ್ಷದ ಮಗಳು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ (WhatsApp Status) ಒಂದು ಪೋಸ್ಟ್ ಮಾಡಿದ್ದಳು. ಆ ಮೆಸೇಜ್ ಆಕೆಯ ಸ್ನೇಹಿತೆ ತನ್ನ ಕುರಿತಾದ ಸ್ಟೇಟಸ್ ಎಂದು ತಿಳಿದು ಮನೆಯಲ್ಲಿ ತಿಳಿಸಿದ್ದಳು. ಇದರಿಂದ ಆಕೆಯ ಮನೆಯವರು ಆ ವಾಟ್ಸಾಪ್ ಪೋಸ್ಟ್ ಹಾಕಿದ ಯುವತಿಯ ತಾಯಿಯ ಜೊತೆ ಜಗಳವಾಡಿದ್ದಾರೆ ಎಂದು ಬೋಯ್ಸರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸುರೇಶ್ ಕದಮ್ ತಿಳಿಸಿದ್ದಾರೆ.

ಫೆಬ್ರವರಿ 10ರಂದು ಯುವತಿಯ ತಾಯಿ ಮತ್ತು ಆಕೆಯ ಸಹೋದರರು ಶಿವಾಜಿ ನಗರದಲ್ಲಿರುವ ಯುವತಿಯ ತಾಯಿ ಲೀಲಾವತಿ ದೇವಿ ಪ್ರಸಾದ್ ಅವರ ಮನೆಗೆ ಹೋಗಿದ್ದರು. ಆಗ ಅವರ ಮಗಳು ವಾಟ್ಸಾಪ್ ಸ್ಟೇಟಸ್​ ಹಾಕಿದ್ದಕ್ಕೆ ಆ ಯುವತಿಯ ಸ್ನೇಹಿತೆಯ ಕುಟುಂಬಸ್ಥರು ಆ ಮನೆಯವರಿಗೆ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಘಟನೆಯಿಂದ ಲೀಲಾವತಿ ದೇವಿ ಪ್ರಸಾದ್‌ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮರುದಿನ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಕುರಿತು ಆಕೆಯ ಮಗಳು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ವಾಟ್ಸಾಪ್​ನಲ್ಲಿ ಹಾಕಿದ್ದ ಸ್ಟೇಟಸ್ ಸಾಮಾನ್ಯವಾಗಿತ್ತು. ನನ್ನ ಸ್ನೇಹಿತೆಯ ಕುರಿತು ನಾನು ಯಾವುದೇ ಸ್ಟೇಟಸ್ ಹಾಕಿರಲಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

ಮಗಳ ವಾಟ್ಸಾಪ್ ಸ್ಟೇಟಸ್‌ ಗಲಾಟೆಯಿಂದ ಮಹಾರಾಷ್ಟ್ರದ ಮಹಿಳೆಗೆ ಥಳಿಸಲಾಗಿತ್ತು. ಈ ಘಟನೆಯಿಂದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಕೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಆ ಬಾಲಕಿಯ ತಾಯಿ ಮತ್ತು ಇನ್ನಿಬ್ಬರು ಕುಟುಂಬ ಸದಸ್ಯರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 15ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಸುಪ್ರೀಂ ಕೋರ್ಟ್​ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

Murder: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ

Published On - 3:47 pm, Mon, 14 February 22