ಸಿಬಿಐ ಅಧಿಕಾರಿಗಳಂತೆ ನಟಿಸಿ ಉದ್ಯಮಿಯಿಂದ ಹಣ ವಸೂಲಿ; ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

| Updated By: ಸುಷ್ಮಾ ಚಕ್ರೆ

Updated on: Aug 20, 2022 | 1:09 PM

ಸಿಬಿಐ ಅಧಿಕಾರಿಯೆಂದು ಹೇಳಿದ್ದ ವ್ಯಕ್ತಿ ಉದ್ಯಮಿಯ ಬಳಿ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಪೊಲೀಸರು ಕೂಡಲೇ ಮೊಬೈಲ್‌ ನಂಬರ್‌ ಟ್ರ್ಯಾಕ್‌ ಮಾಡಿ ಕಾರ್ಯಾಚರಣೆ ನಡೆಸಿ ದಿಲ್ವಾರ್‌ ಹುಸೇನ್‌ ಮತ್ತು ರಶೀದ್‌ ಅಹಮದ್‌ ಎಂಬಿಬ್ಬರನ್ನು ಬಂಧಿಸಿದ್ದಾರೆ.

ಸಿಬಿಐ ಅಧಿಕಾರಿಗಳಂತೆ ನಟಿಸಿ ಉದ್ಯಮಿಯಿಂದ ಹಣ ವಸೂಲಿ; ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
ಸಾಂಧರ್ಬಿಕ ಚಿತ್ರ
Follow us on

ಕರೀಂಗಂಜ್: ಹಣ ಸುಲಿಗೆ ಮಾಡುವ ಸಲುವಾಗಿ ಸಿಬಿಐ (CBI) ಅಧಿಕಾರಿಗಳಂತೆ ನಟಿಸಿದ ಆರೋಪದ ಮೇಲೆ ಕರೀಂಗಂಜ್ ಜಿಲ್ಲೆಯಲ್ಲಿ ಇಬ್ಬರನ್ನು ಅಸ್ಸಾಂ (Assam Police) ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರನ್ನು ದಿಲ್ವಾರ್ ಹುಸೇನ್ ಮತ್ತು ರಶೀದ್ ಅಹ್ಮದ್ ಎಂದು ಗುರುತಿಸಲಾಗಿದೆ.

ಕರೀಂಗಂಜ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪಾರ್ಥ ಪ್ರತಿಮ್ ದಾಸ್ ಅವರಿಗೆ ಆಗಸ್ಟ್ 18ರಂದು ಪಥರ್ಕಂಡಿ ಪ್ರದೇಶದ ಉದ್ಯಮಿಯೊಬ್ಬರು ಈ ಬಗ್ಗೆ ದೂರು ನೀಡಿದ್ದರು. ಯಾರೋ ಫೋನ್ ಮಾಡಿ ತಮ್ಮ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಸಿಬಿಐ ಅಧಿಕಾರಿಯೆಂದು ಹೇಳಿದ್ದ ವ್ಯಕ್ತಿ ಉದ್ಯಮಿಯ ಬಳಿ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಪೊಲೀಸರು ಕೂಡಲೇ ಮೊಬೈಲ್‌ ನಂಬರ್‌ ಟ್ರ್ಯಾಕ್‌ ಮಾಡಿ ಕಾರ್ಯಾಚರಣೆ ನಡೆಸಿ ದಿಲ್ವಾರ್‌ ಹುಸೇನ್‌ ಮತ್ತು ರಶೀದ್‌ ಅಹಮದ್‌ ಎಂಬಿಬ್ಬರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಮಾರಕಾಸ್ತ್ರ ಹಿಡಿದುಕೊಂಡು ಸುಲಿಗೆ, ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಆರೋಪಿಗಳಲ್ಲಿ ಒಬ್ಬನಾದ ದಿಲ್ವಾರ್ ಹುಸೇನ್ ಅವರ ಮೊಬೈಲ್ ಫೋನ್ ಬಳಸಿದ್ದರು ಮತ್ತು ಸಿಬಿಐ ಅಧಿಕಾರಿಯಂತೆ ನಟಿಸಿದ್ದರು ಎನ್ನಲಾಗಿದೆ. ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ