AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big News: ಜೈಲಿನಲ್ಲಿರುವ ಮಹಿಳಾ ಕೈದಿಗಳಿನ್ನು ಮಾಂಗಲ್ಯ ಧರಿಸಬಹುದು, ಹಬ್ಬ ಆಚರಿಸಬಹುದು; ಉತ್ತರ ಪ್ರದೇಶದ ಹೊಸ ನಿಯಮ ಹೀಗಿದೆ

ಈ ಮೊದಲು ವಿವಾಹಿತ ಮಹಿಳಾ ಕೈದಿಗಳಿಗೆ ಬಳೆಗಳು, ಕಾಲುಂಗುರ ಮತ್ತು ಮೂಗುತಿಗಳನ್ನು ಮಾತ್ರ ಧರಿಸಲು ಅವಕಾಶವಿತ್ತು. ಮಹಿಳೆಯರಿಗೆ ನೀಡಲಾಗುವ ವಸ್ತುಗಳ ಪಟ್ಟಿಯಲ್ಲಿ ಸ್ಯಾನಿಟರಿ ಪ್ಯಾಡ್, ತೆಂಗಿನೆಣ್ಣೆ ಮತ್ತು ಶಾಂಪೂ ಕೂಡ ಇದೆ.

Big News: ಜೈಲಿನಲ್ಲಿರುವ ಮಹಿಳಾ ಕೈದಿಗಳಿನ್ನು ಮಾಂಗಲ್ಯ ಧರಿಸಬಹುದು, ಹಬ್ಬ ಆಚರಿಸಬಹುದು; ಉತ್ತರ ಪ್ರದೇಶದ ಹೊಸ ನಿಯಮ ಹೀಗಿದೆ
ಸಾಂದರ್ಭಿಕ ಚಿತ್ರImage Credit source: NDTV
TV9 Web
| Updated By: ಸುಷ್ಮಾ ಚಕ್ರೆ|

Updated on: Aug 20, 2022 | 3:06 PM

Share

ಲಕ್ನೋ: ಉತ್ತರ ಪ್ರದೇಶ ಸಚಿವ ಸಂಪುಟ ಜೈಲಿನ ಕೈದಿಗಳಿಗೆ ಹೊಸ ನಿಬಂಧನೆಗಳನ್ನು ಹೊಂದಿರುವ ನವೀಕರಿಸಲಾದ ಜೈಲು ಕೈಪಿಡಿಗೆ ಅನುಮೋದನೆ ನೀಡಿದೆ. ಈ ಹೊಸ ಕೈಪಿಡಿಯ ಪ್ರಕಾರ, ವಿವಾಹಿತರಾದ ಮಹಿಳಾ ಕೈದಿಗಳಿಗೆ ಶೀಘ್ರದಲ್ಲೇ ‘ಮಾಂಗಲ್ಯ’ ಧರಿಸಲು ಮತ್ತು ಉತ್ತರ ಪ್ರದೇಶದ (Uttar Pradesh) ಜೈಲುಗಳಲ್ಲಿ ಕರ್ವಾ ಚೌತ್ ಮತ್ತು ತೀಜ್‌ನಂತಹ ಹಬ್ಬಗಳನ್ನು ಮಾಡಲು ಅವಕಾಶ ನೀಡಲಾಗುವುದು. ರಾಜ್ಯ ಕ್ಯಾಬಿನೆಟ್ ಈ ವಾರದ ಆರಂಭದಲ್ಲಿ ಈ ಕೈಪಿಡಿಯನ್ನು ಅನುಮೋದಿಸಿದೆ.

1941ರ ನಿಯಮ ಪುಸ್ತಕದ ಅನಗತ್ಯ ಮತ್ತು ಅಪ್ರಾಯೋಗಿಕ ನಿಬಂಧನೆಗಳನ್ನು ತೆಗೆದುಹಾಕಲಾಗಿದೆ. ಹೊಸ ಜೈಲು ಕೈಪಿಡಿಯು ಜೈಲು ಕೈದಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಮಾನವೀಯ ಮತ್ತು ಸಂವೇದನಾಶೀಲ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಉತ್ತರ ಪ್ರದೇಶದ ಸಚಿವ ಧರಂವೀರ್ ಪ್ರಜಾಪತಿ ಹೇಳಿದ್ದಾರೆ.

ಹೊಸ ಜೈಲು ಕೈಪಿಡಿಯು ವಿವಾಹಿತ ಮಹಿಳಾ ಕೈದಿಗಳಿಗೆ ಮಂಗಳಸೂತ್ರವನ್ನು ಧರಿಸಲು ಅನುಮತಿ ನೀಡುತ್ತದೆ. ಈ ಮೊದಲು ವಿವಾಹಿತ ಮಹಿಳಾ ಕೈದಿಗಳಿಗೆ ಬಳೆಗಳು, ಕಾಲುಂಗುರ ಮತ್ತು ಮೂಗುತಿಗಳನ್ನು ಮಾತ್ರ ಧರಿಸಲು ಅವಕಾಶವಿತ್ತು. ಮಹಿಳೆಯರಿಗೆ ನೀಡಲಾಗುವ ವಸ್ತುಗಳ ಪಟ್ಟಿಯಲ್ಲಿ ಸ್ಯಾನಿಟರಿ ಪ್ಯಾಡ್, ತೆಂಗಿನೆಣ್ಣೆ ಮತ್ತು ಶಾಂಪೂ ಕೂಡ ಇದೆ.

ಇದನ್ನೂ ಓದಿ: Breaking News: ಶ್ರೀಕಾಂತ್ ತ್ಯಾಗಿಯನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು

ಜೈಲುಗಳಲ್ಲಿ ಹೆರಿಗೆಯಾಗುವ ಮಹಿಳೆಯರಿಗೆ ಉತ್ತಮ ಶಿಶುಪಾಲನಾ ಸೌಲಭ್ಯ, ಹಬ್ಬಗಳ ಉತ್ತಮ ಆಚರಣೆ ಮತ್ತು ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಅನುಮತಿಸಲು ಕೈಪಿಡಿಯಲ್ಲಿ ಸೂಚಿಸಲಾಗಿದೆ.

ಜೈಲಿನಲ್ಲಿರುವ ಮಹಿಳೆಯರಿಗೆ ಜನಿಸಿದ ಮಕ್ಕಳನ್ನು ಜನನದ ಸಮಯದಲ್ಲಿ ನೋಂದಾಯಿಸಲಾಗುತ್ತದೆ. ಅವರಿಗೆ ಎಲ್ಲಾ ಕಡ್ಡಾಯ ಲಸಿಕೆಗಳನ್ನು ಪಡೆಯಲಾಗುತ್ತದೆ. ಅವರ ನಾಮಕರಣ ಸಮಾರಂಭವನ್ನು ಸಹ ಮಾಡಬಹುದು. ಜೊತೆಗೆ ಬ್ಯಾರಕ್‌ಗಳಲ್ಲಿ ತಾಯಂದಿರೊಂದಿಗೆ ವಾಸಿಸುವ ಮಕ್ಕಳ ಶಿಕ್ಷಣದ ಬಗ್ಗೆಯೂ ಕಾಳಜಿ ವಹಿಸಲಾಗುವುದು. ಪ್ರತಿ ಜೈಲಿನಲ್ಲಿ ಮಕ್ಕಳಿಗೆ ಶಿಕ್ಷಕರನ್ನು ಒದಗಿಸಲಾಗುವುದು. ಜೈಲಿನಲ್ಲಿ ಮಕ್ಕಳ ಉದ್ಯಾನವನಗಳನ್ನು ಸಹ ಸ್ಥಾಪಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಹೊಸ ಜೈಲು ಕೈಪಿಡಿಯಲ್ಲಿ ಕ್ರೀಡೆ, ಮಕ್ಕಳ ಶಿಕ್ಷಣ ಮತ್ತು ಮನರಂಜನೆಗೆ ಸರಿಯಾದ ವ್ಯವಸ್ಥೆಯ ಜೊತೆಗೆ ಅವರ ತಾಯಿಯೊಂದಿಗೆ ವಾಸಿಸುವ ಮಕ್ಕಳಿಗಾಗಿ ಶಿಶುವಿಹಾರಗಳು ಮತ್ತು ನರ್ಸರಿಗಳು ಸ್ಥಾನ ಪಡೆದಿವೆ. ಸಾಮಾನ್ಯ ಆಹಾರದಲ್ಲಿ ಎಲ್ಲಾ ದಿನಗಳಲ್ಲಿ ಚಟ್ನಿಗಳು, ತಿಂಗಳಿಗೊಮ್ಮೆ ಚವಲ್, ಪ್ರತಿ ಸಂಜೆ ಚಹಾ-ಬಿಸ್ಕತ್ತುಗಳನ್ನು ನೀಡಲಾಗುವುದು. ಜೈಲುಗಳಲ್ಲಿ ಬೇಕರಿಗಳನ್ನು ಸಹ ಸ್ಥಾಪಿಸಲಾಗುವುದು.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಾಂಗ್ಲಾ ಮೂಲದವರ ಆಧಾರ್ ದಾಖಲೆ ಪರಿಶೀಲಿಸಲು NIAಗೆ ಹೈಕೋರ್ಟ್ ಅನುಮತಿ

ಪ್ರಸ್ತುತ ಹಲ್ಲುಜ್ಜಲು ನೀಡುತ್ತಿರುವ ಬೇವಿನ ಕೊಂಬೆಗಳಲ್ಲದೆ, ಕೈದಿಗಳಿಗೆ ಹಲ್ಲಿನ ಪುಡಿ ಕೂಡ ಸಿಗುತ್ತದೆ. ಟೂತ್ ಬ್ರಷ್ ಮತ್ತು ಪೇಸ್ಟ್ ಅನ್ನು ಬಳಸಲು ಬಯಸುವ ಕೈದಿಯು ಜೈಲಿನ ಕ್ಯಾಂಟೀನ್‌ನಿಂದ ಅದನ್ನು ಉಚಿತವಾಗಿ ಖರೀದಿಸಬಹುದು. ಶಿಕ್ಷಣ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಶ್ರವ್ಯ-ದೃಶ್ಯ ಮಾಧ್ಯಮವನ್ನು ಲಭ್ಯಗೊಳಿಸಲಾಗುವುದು. ಎಲ್ಲಾ ಸಂದರ್ಶಕರನ್ನು ಛಾಯಾಚಿತ್ರ ಮತ್ತು ವೀಡಿಯೊಗ್ರಾಫ್ ಮಾಡಲಾಗುವುದು. ಪ್ರೀತಿಪಾತ್ರರ ಮರಣದ ನಂತರ, ಕೈದಿಗಳು ಜೈಲು ಗೇಟ್​​ಗೆ ಹೋಗಿ ಅವರ ಬಂಧುಗಳು, ಸ್ನೇಹಿತರಿಗೆ ಸಾಂತ್ವನ ಹೇಳುವ ಅವಕಾಶವನ್ನು ಹೊಂದಿರುತ್ತಾರೆ.

ಜೈಲಿನಲ್ಲಿರುವ ರಕ್ತ ಸಂಬಂಧಿಗಳು ಮತ್ತು ಸಂಗಾತಿಗಳೊಂದಿಗೆ ವಾರಕ್ಕೊಮ್ಮೆ ಸಭೆಗಳನ್ನು ಅನುಮತಿಸಲಾಗುವುದು ಮತ್ತು ಈ ಸಂಬಂಧಿಗಳು ಪ್ರತ್ಯೇಕ ಜೈಲುಗಳಲ್ಲಿದ್ದರೆ, ದೂರವಾಣಿ ಕರೆಗಳನ್ನು ಅನುಮತಿಸಲಾಗುತ್ತದೆ. ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, ವಿಚಾರಣಾಧೀನ ಕೈದಿಗಳನ್ನು ಇನ್ನು ಮುಂದೆ ಕೈಕೋಳ ಅಥವಾ ಸರಪಳಿಯಿಂದ ಬಂಧಿಸಲಾಗುವುದಿಲ್ಲ ಅಥವಾ ಏಕಾಂತವಾಗಿ ಜೈಲಿನಲ್ಲಿ ಇರಿಸಲಾಗುವುದಿಲ್ಲ. ಉತ್ತರ ಪ್ರದೇಶದಲ್ಲಿ 62,000 ಕೈದಿಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವಿರುವ 75 ಜೈಲುಗಳಿವೆ. ಆದರೆ, ಪ್ರಸ್ತುತ ಜೈಲುಗಳಲ್ಲಿ 1.18 ಲಕ್ಷ ಕೈದಿಗಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?