Breaking News: ಶ್ರೀಕಾಂತ್ ತ್ಯಾಗಿಯನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು

ಶ್ರೀಕಾಂತ್ ತ್ಯಾಗಿ ಬಂಧಿಸಿದ ನೋಯ್ಡಾ ಪೊಲೀಸರು, ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ ಹಲ್ಲೆಗೆ ಯತ್ನಿಸಿದ್ದ,  ಬಿಜೆಪಿ ಹೆಸರಲ್ಲಿ ಜನರಿಗೆ ಧಮ್ಕಿ ಹಾಕುತ್ತಿದ್ದ ಶ್ರೀಕಾಂತ್, ನಿನ್ನೆಯಷ್ಟೇ ತ್ಯಾಗಿ ಅಕ್ರಮ ಕಟ್ಟಡವನ್ನು ನೋಯ್ಡಾ ಪ್ರಾಧಿಕಾರ ತಂಡ ಕಟ್ಟಡ ನೆಲಸಮಗೊಳಿಸಿದೆ. 

Breaking News: ಶ್ರೀಕಾಂತ್ ತ್ಯಾಗಿಯನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು
Srikanth Tyagi
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 09, 2022 | 12:06 PM

ಉತ್ತರ ಪ್ರದೇಶ: ಶ್ರೀಕಾಂತ್ ತ್ಯಾಗಿಯನ್ನು ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ  ಉತ್ತರ ಪ್ರದೇಶ ಪೊಲೀಸ್ ಮೂಲಗಳು ತಿಳಿಸಿದ್ದಾರೆ. ಇತ್ತೀಚಿನ ವೈರಲ್ ವೀಡಿಯೊದಲ್ಲಿ, ತ್ಯಾಗಿ ನೋಯ್ಡಾದ ಸೆಕ್ಟರ್ 93 ರ ಗ್ರಾಂಡ್ ಓಮ್ಯಾಕ್ಸ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮತ್ತು ನಿಂದನೆ ಮಾಡಿದ ಪ್ರಕರಣಕ್ಕಾಗಿ ಇದೀಗ ಆತನನ್ನು ಬಂಧನ ಮಾಡಿದ್ದಾರೆ.

ಶ್ರೀಕಾಂತ್ ತ್ಯಾಗಿ ಬಂಧಿಸಿದ ನೋಯ್ಡಾ ಪೊಲೀಸರು, ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ ಹಲ್ಲೆಗೆ ಯತ್ನಿಸಿದ್ದ,  ಬಿಜೆಪಿ ಹೆಸರಲ್ಲಿ ಜನರಿಗೆ ಧಮ್ಕಿ ಹಾಕುತ್ತಿದ್ದ ಶ್ರೀಕಾಂತ್, ನಿನ್ನೆಯಷ್ಟೇ ತ್ಯಾಗಿ ಅಕ್ರಮ ಕಟ್ಟಡವನ್ನು ನೋಯ್ಡಾ ಪ್ರಾಧಿಕಾರ ತಂಡ ಕಟ್ಟಡ ನೆಲಸಮಗೊಳಿಸಿದೆ.

ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂದು ಸಾಮಾಜಿಕ ಮಾಧ್ಯಮದಲ್ಲಿ ಗುರುತಿಸಿಕೊಂಡಿರುವ ಶ್ರೀಕಾಂತ್ ತ್ಯಾಗಿ ಅವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

ತ್ಯಾಗಿ ತನ್ನ ಪತ್ನಿ ಮತ್ತು ವಕೀಲರನ್ನು ಸಂಪರ್ಕಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರಿಂದ ಪೊಲೀಸರಿಗೆ ಸುಳಿವು ಸಿಕ್ಕಿತು. ನೋಯ್ಡಾದ ಸೆಕ್ಟರ್ -93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಹೌಸಿಂಗ್ ಸೊಸೈಟಿಯಲ್ಲಿ ಅವರ ಮನೆಯ ಹೊರಗೆ ಅಕ್ರಮ ನಿರ್ಮಾಣ ಮಾಡಿದ್ದ ಮನೆಯನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸಿದ ನಂತರ ಆತನ ಬಂಧನವಾಗಿದೆ.

ಇತ್ತೀಚೆಗೆಷ್ಟೇ ಆತನ ಪತ್ನಿಯನ್ನು ಮತ್ತೆ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದರು. ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಪೊಲೀಸರು ಶ್ರೀಕಾಂತ್ ಅವರ ಫ್ಲಾಟ್‌ನಿಂದ ಪತ್ನಿಯನ್ನು ಕರೆದುಕೊಂಡು ಬಂದಿದ್ದಾರೆ. ನೋಯ್ಡಾ ಪೊಲೀಸರು ಶುಕ್ರವಾರ ಆಕೆಯನ್ನು ವಶಕ್ಕೆ ಪಡೆದು 24 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದರು. ಪೊಲೀಸರು ಶ್ರೀಕಾಂತ್ ಸಂಬಂಧಿಕರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳವಾರ ಸಂಜೆ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಗೆ ಪ್ರವೇಶಕ್ಕೆ ಅನುಮತಿ ನೀಡದೆ ಪ್ರವೇಶಿಸಿದ ಮತ್ತು ತ್ಯಾಗಿಯಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯ ವಿಳಾಸವನ್ನು ಕೇಳಿದ್ದಕ್ಕಾಗಿ ಪೊಲೀಸರು ತ್ಯಾಗಿಯ ಆರು ಬೆಂಬಲಿಗರನ್ನು ಬಂಧಿಸಿದ್ದಾರೆ.

ನೋಯ್ಡಾ ಸೆಕ್ಟರ್ 93 ಬಿ ಯಲ್ಲಿನ ಗ್ರ್ಯಾಂಡ್ ಓಮ್ಯಾಕ್ಸ್ ಆವರಣದಲ್ಲಿ ಮಹಿಳೆಯೊಬ್ಬಳನ್ನು ನಿಂದಿಸಿದ ಮತ್ತು ಹಲ್ಲೆ ಮಾಡಿದ ಆರೋಪದ ಮೇಲೆ ನೋಯ್ಡಾ ಪೊಲೀಸರು ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತ್ಯಾಗಿ, ಅಲ್ಲಿಂದ ಓಡಿಹೋಗಿದ್ದ ಎಂದು ಪೊಲೀಸರು ಹೇಳಿದರು ಇದೀಗ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

Published On - 11:41 am, Tue, 9 August 22