Maharashtra Cabinet: ಮಹಾರಾಷ್ಟ್ರದ ನೂತನ ಸಚಿವರಾಗಿ ಬಿಜೆಪಿ, ಶಿವಸೇನೆಯ 18 ಶಾಸಕರಿಂದ ಪ್ರಮಾಣವಚನ ಸ್ವೀಕಾರ
Maharashtra News: ಬಿಜೆಪಿ ಮತ್ತು ಶಿವಸೇನೆ ಬಣದ ತಲಾ 9 ಮಂದಿಯಂತೆ ಒಟ್ಟು 18 ಶಾಸಕರು ಇಂದು ಮುಂಬೈನಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಇಂದು ಸಚಿವ ಸಂಪುಟ ವಿಸ್ತರಣೆ ಮಾಡಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಬಿಜೆಪಿ (BJP) ಮತ್ತು ಶಿವಸೇನೆ (Shiv Sena) ಬಣದ ತಲಾ 9 ಮಂದಿಯಂತೆ ಒಟ್ಟು 18 ಶಾಸಕರು ಇಂದು ಮುಂಬೈನಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಏಕನಾಥ್ ಶಿಂಧೆ ಅದಾದ ಒಂದು ವಾರದಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಅದಾಗಿ 1 ತಿಂಗಳ ಬಳಿಕ ಇದೀಗ ಇಂದು ಬೆಳಗ್ಗೆ ಸಚಿವ ಸಂಪುಟ ವಿಸ್ತರಣೆಯಾಗುತ್ತಿದೆ. ಸಂಪುಟ ವಿಸ್ತರಣೆ ಸಮಾರಂಭಕ್ಕೂ ಮುನ್ನ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಪಾಳಯದ ಶಾಸಕರನ್ನು ಭೇಟಿ ಮಾಡಿದರು. 55 ಶಿವಸೇನಾ ಶಾಸಕರ ಪೈಕಿ 40 ಶಾಸಕರು ಏಕನಾಥ್ ಶಿಂಧೆ ಅವರನ್ನು ಬೆಂಬಲಿಸಿದ್ದಾರೆ.
ಜೂನ್‌ನಲ್ಲಿ ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಪುಟ ವಿಸ್ತರಣೆ ವಿಳಂಬದ ಬಗ್ಗೆ ಪ್ರತಿಪಕ್ಷಗಳು ಟೀಕಿಸಿದ್ದವು.
Chandrakant Patil and Vijay Kumar Gavit are among the nine BJP leaders who are taking oath as ministers in Maharashtra Cabinet at Raj Bhavan in Mumbai pic.twitter.com/DCyzwjEVVa
— ANI (@ANI) August 9, 2022
ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರರೊಂದಿಗೆ ಸಂಭಾವ್ಯ ಸಚಿವರ ಹೆಸರುಗಳನ್ನು ಚರ್ಚಿಸಲು ಹಲವಾರು ಬಾರಿ ದೆಹಲಿಗೆ ತೆರಳಿದ್ದರು. ಇದೀಗ ಅಂತಿಮ ಪಟ್ಟಿ ಸಿದ್ಧವಾಗಿದ್ದು, ಇಂದು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಗುಜರಾತಿ-ರಾಜಸ್ತಾನಿ ಹೇಳಿಕೆಗೆ ಕ್ಷಮೆ ಕೇಳಿದ ಮಹಾರಾಷ್ಟ್ರ ರಾಜ್ಯಪಾಲ ಬಿಎಸ್ ಕೊಶಿಯಾರಿ
ನೂತನ ಸಚಿವರ ಪಟ್ಟಿ ಹೀಗಿದೆ: ಬಿಜೆಪಿ: ಚಂದ್ರಕಾಂತ್ ಪಾಟೀಲ್, ಸುಧೀರ್ ಮುಂಗಂತಿವಾರ್, ಗಿರೀಶ್ ಮಹಾಜನ್, ಸುರೇಶ್ ಖಾಡೆ, ರಾಧಾ ಕೃಷ್ಣ ವಿಖೆ ಪಾಟೀಲ್, ರವೀಂದ್ರ ಚೌಹಾಣ್, ಮಂಗಲ್ ಪ್ರಭಾತ್ ಲೋಧಾ, ವಿಜಯಕುಮಾರ್ ಗಾವಿತ್ ಮತ್ತು ಅತುಲ್ ಸೇವ್.
Shiv Sena MLAs Gulabrao Patil and Dadaji Dagadu Bhuse take oath as Maharashtra ministers at Raj Bhavan in Mumbai pic.twitter.com/jkpezoOE1d
— ANI (@ANI) August 9, 2022
ಶಿವಸೇನೆ: ದಾದಾ ಭೂಸೆ, ಸಂದೀಪನ್ ಬುಮ್ರೆ, ಉದಯ್ ಸಮಂತ್, ತಾನಾಜಿ ಸಾವಂತ್, ಅಬ್ದುಲ್ ಸತ್ತಾರ್, ದೀಪಕ್ ಕೇಸರ್ಕರ್, ಗುಲಾಬ್ರಾವ್ ಪಾಟೀಲ್, ಸಂಜಯ್ ರಾಥೋಡ್ ಮತ್ತು ಶಂಭುರಾಜೇ ದೇಸಾಯಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಚಂದ್ರಕಾಂತ್ ಪಾಟೀಲ್ ಅವರು ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥ ಮತ್ತು ಕೊತ್ತೂರು ಶಾಸಕರಾಗಿದ್ದಾರೆ. ಅವರು ಈ ಹಿಂದೆ ದೇವೇಂದ್ರ ಫಡ್ನವಿಸ್ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸುಧೀರ್ ಮುಂಗಂತಿವಾರ್ ಅವರು ರಾಜ್ಯದಲ್ಲಿ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರು ಮತ್ತು ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Maharashtra Cabinet: ಇಂದು ಮಹಾರಾಷ್ಟ್ರ ಸಂಪುಟ ವಿಸ್ತರಣೆ; ಬೆಳಗ್ಗೆ 11 ಗಂಟೆಗೆ ನೂತನ ಸಚಿವರ ಪ್ರಮಾಣವಚನ
2019ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ ವಿಖೆ ಪಾಟೀಲ್ ಅವರಿಗೂ ಸಚಿವರಾಗಿ ಅವಕಾಶ ಕಲ್ಪಿಸಲಾಗಿದೆ. ಏಕನಾಥ್ ಶಿಂಧೆ ಶಿಬಿರದಿಂದ ಕ್ಯಾಬಿನೆಟ್ ಪ್ರವೇಶಿಸುವವರಲ್ಲಿ ದಾದಾ ಭೂಸೆ ಕೂಡ ಸೇರಿದ್ದಾರೆ. ಅವರು ಈ ಹಿಂದೆ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಉದಯ್ ಸಮಂತ್ ರತ್ನಗಿರಿಯ ಶಾಸಕ ಮತ್ತು ಮಾಜಿ ಎನ್‌ಸಿಪಿ ನಾಯಕನಾಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:38 am, Tue, 9 August 22