ಗುಜರಾತಿ-ರಾಜಸ್ತಾನಿ ಹೇಳಿಕೆಗೆ ಕ್ಷಮೆ ಕೇಳಿದ ಮಹಾರಾಷ್ಟ್ರ ರಾಜ್ಯಪಾಲ ಬಿಎಸ್ ಕೊಶಿಯಾರಿ 

ಕಳೆದ ಶುಕ್ರವಾರ ಕೊಶಿಯಾರಿ ಅವರು  ಮುಂಬೈಯಿಂದ ಗುಜರಾತಿ ಮತ್ತು ರಾಜಸ್ತಾನಿ ಜನರನ್ನು ಹೊರ ಕಳುಹಿಸಿದರೆ  ಮುಂಬೈ ಮತ್ತು ಥಾಣೆಯಲ್ಲಿ  ಹಣವೇ ಇರಲ್ಲ ಎಂದಿದ್ದು ವಿವಾದವಾಗಿತ್ತು.

ಗುಜರಾತಿ-ರಾಜಸ್ತಾನಿ ಹೇಳಿಕೆಗೆ ಕ್ಷಮೆ ಕೇಳಿದ ಮಹಾರಾಷ್ಟ್ರ ರಾಜ್ಯಪಾಲ ಬಿಎಸ್ ಕೊಶಿಯಾರಿ 
ಬಿಎಸ್ ಕೊಶಿಯಾರಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 01, 2022 | 8:56 PM

ಗುಜರಾತಿಗಳು- ರಾಜಸ್ತಾನಿಗಳು ಎಂಬ ಹೇಳಿಕೆಗೆ ಮಹಾರಾಷ್ಟ್ರ ಗವರ್ನರ್  ಬಿಎಸ್ ಕೊಶಿಯಾರಿ (BS Koshyari) ಕ್ಷಮೆಯಾಚಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಕಳೆದ ಶುಕ್ರವಾರ ಕೊಶಿಯಾರಿ ಅವರು  ಮುಂಬೈಯಿಂದ ಗುಜರಾತಿ ಮತ್ತು ರಾಜಸ್ತಾನಿ ಜನರನ್ನು ಹೊರ ಕಳುಹಿಸಿದರೆ  ಮುಂಬೈ ಮತ್ತು ಥಾಣೆಯಲ್ಲಿ  ಹಣವೇ ಇರಲ್ಲ. ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಮಹಾರಾಷ್ಟ್ರ (Maharashtra) ರಾಜ್ಯಪಾಲರು ಇಂದು ಮರಾಠಿಯಲ್ಲಿ ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ.  ಮಹಾರಾಷ್ಟ್ರದ ಜನರು ಹೃದಯವಂತರು. ನನ್ನ  ಇತ್ತೀಚಿನ ಹೇಳಿಕೆಗಳನ್ನು ಕ್ಷಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ರಾಜಭವನ ಹೊರಡಿಸಿದ ಹೇಳಿಕೆಯಲ್ಲಿ ಬಿಎಸ್ ಕೊಶಿಯರಿ ಹೇಳಿದ್ದು, ಸಮಾಜದ ಕೆಲವು ಸದಸ್ಯರ ಕೊಡುಗೆಯ ಬಗ್ಗೆ ಮಾತನಾಡುವಾಗ ಅವರು ತಪ್ಪಾಗಿ ಈ ಮಾತುಗಳನ್ನಾಡಿದ್ದಾರೆ ಎಂದು ಹೇಳಿದೆ.

ಇದಕ್ಕಿಂತ ಮುಂಚೆ  ರಾಜ್ಯಪಾಲರು ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಮರಾಠಿ ಮಾತನಾಡುವ ಜನರ ಶ್ರಮವನ್ನು ಕಡಿಮೆ ಮಾಡುವ ಉದ್ದೇಶ ನನಗಿರಲಿಲ್ಲ ಎಂದು ಹೇಳಿದ್ದರು.  ರಾಜ್ಯಪಾಲರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ  ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಇದು ರಾಜ್ಯಪಾಲರ ವೈಯಕ್ತಿಕ ಹೇಳಿಕೆಗಳು. ನಾನು  ಅದನ್ನುಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಶಿಂಧೆ ಅವರ ನಿಲುವನ್ನು ಒಪ್ಪಿಕೊಂಡು ಬಿಎಸ್ ಕೊಶಿಯಾರಿ ಅವರನ್ನು ದೂರವಿಟ್ಟಿದ್ದಾರೆ.

ಶಿವಸೇನಾ ಮತ್ತು ಕಾಂಗ್ರೆಸ್‌ನ ಹಲವಾರು ನಾಯಕರು ವಾರದಲ್ಲಿ ಕೊಶಿಯಾರಿ  ಅವರನ್ನು ಟೀಕಿಸಿದ್ದು    ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದರು.

Published On - 7:41 pm, Mon, 1 August 22