ಮೋದಿ, ಅಮಿತ್ ಶಾ ಸಂಸತ್ತನ್ನು ಗುಜರಾತ್ ಜಿಮ್ಖಾನಾವನ್ನಾಗಿ ಮಾಡುತ್ತಿದ್ದಾರೆ; ಟಿಎಂಸಿ ಸಂಸದ ವಾಗ್ದಾಳಿ

ಸತತ ಏಳನೇ ಬಾರಿಗೆ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ. ಸಂಸತ್ತನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸಿ ಎಂದು ಟಿಎಂಸಿ ನಾಯಕ ಡೆರೆಕ್ ಒಬ್ರೇನ್ ಸರ್ಕಾರವನ್ನು ಒತ್ತಾಯಿಸಿದರು.

ಮೋದಿ, ಅಮಿತ್ ಶಾ ಸಂಸತ್ತನ್ನು ಗುಜರಾತ್ ಜಿಮ್ಖಾನಾವನ್ನಾಗಿ ಮಾಡುತ್ತಿದ್ದಾರೆ; ಟಿಎಂಸಿ ಸಂಸದ ವಾಗ್ದಾಳಿ
ಡೆರೆಕ್ ಒಬ್ರೇನ್ Image Credit source: Zee News
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 09, 2022 | 8:53 AM

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯ ಸಂಸತ್ ಅಧಿವೇಶನವನ್ನು ಸೋಮವಾರ ಮುಂದೂಡಲಾಯಿತು. ಮೇಲ್ಮನೆ ಮತ್ತು ಕೆಳಮನೆಯ ಮುಂಗಾರು ಅಧಿವೇಶನವನ್ನು (Monsoon Session) ಮೊಟಕುಗೊಳಿಸುವ ನಿರ್ಧಾರದ ಬಗ್ಗೆ ತೃಣಮೂಲ ಕಾಂಗ್ರೆಸ್ (TMC) ನಾಯಕ ಡೆರೆಕ್ ಒಬ್ರೇನ್ (Derek O’Brien) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಟಿಎಂಸಿ ನಾಯಕ ಡೆರೆಕ್ ಒಬ್ರೇನ್, ಸತತ ಏಳನೇ ಬಾರಿಗೆ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ. ಸಂಸತ್ತನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿರುವ ಟಿಎಂಸಿ ಸಂಸದ ಡೆರೆಕ್, ಇದು ಸತತ ಏಳನೇ ಬಾರಿ ಸಂಸತ್ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ. ಸಂಸತ್ತನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸಿ. ನಾವು ಸಂಸತ್​​ನ ಪವಿತ್ರತೆಗಾಗಿ ಹೋರಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಈ ಸಂಸತ್ತನ್ನು ಗುಜರಾತ್ ಜಿಮ್ಖಾನಾ ಆಗಿ ಪರಿವರ್ತಿಸುವುದನ್ನು ನಾವು ತಡೆಯುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಬೆಲೆ ಏರಿಕೆ ಚರ್ಚೆ ನಡುವೆ ಎದ್ದು ನಿಂತು ಹಸಿ ಬದನೆಕಾಯಿ ಕಚ್ಚಿ ತಿಂದ ಟಿಎಂಸಿ ಸಂಸದೆ

ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಡೆರೆಕ್ ಒಬ್ರೇನ್ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸಂಸತ್​​ನ ಪಾವಿತ್ರ್ಯದ ಬಗ್ಗೆ ಬೋಧಿಸುವುದನ್ನು ನಿಲ್ಲಿಸಬೇಕು. ಪಶ್ಚಿಮ ಬಂಗಾಳದ ಜನರು ಬಿಜೆಪಿಯನ್ನು ಪ್ರಮುಖ ಪ್ರತಿಪಕ್ಷವಾಗಿ ಆಯ್ಕೆ ಮಾಡಿದ್ದಾರೆ. ಆದರೆ ಟಿಎಂಸಿ ತನ್ನ ದುರಹಂಕಾರದಲ್ಲಿ ಬಿಜೆಪಿಗೆ ಪಿಎಸಿ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಅಸೆಂಬ್ಲಿ ಎಷ್ಟು ದಿನ ಕಾರ್ಯ ನಿರ್ವಹಿಸಿತು ಎಂಬುದನ್ನು ಡೆರೆಕ್ ಒಬ್ರೇನ್ ತಿಳಿಸಲು ಸಿದ್ಧರಿದ್ದಾರಾ? ಅಥವಾ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಜಿಮ್ಖಾನಾದಂತೆ ಕಾರ್ಯ ನಿರ್ವಹಿಸುತ್ತಿದೆಯೇ? ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.