ಅಮಿತ್ ಶಾ, ಯೋಗಿ ಆದಿತ್ಯನಾಥ್​ರನ್ನು ಹತ್ಯೆ ಮಾಡುವುದಾಗಿ ಸಿಆರ್​ಪಿಎಫ್​ಗೆ ಇಮೇಲ್​; ತನಿಖೆ ನಡೆಸುತ್ತಿರುವ ಅಧಿಕಾರಿಗಳು

|

Updated on: Apr 06, 2021 | 3:10 PM

ಅಮಿತ್ ಶಾ ನಿನ್ನೆ ಚತ್ತೀಸ್​ಗಡ್​​ದ ಬಸ್​ಗುಡಾ ಸಿಆರ್​ಪಿಎಫ್ ಕ್ಯಾಂಪ್​ಗೆ ಭೇಟಿ ನೀಡಿದ್ದರು. ನಕ್ಸಲ್​ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಅಮಿತ್ ಶಾ, ಯೋಗಿ ಆದಿತ್ಯನಾಥ್​ರನ್ನು ಹತ್ಯೆ ಮಾಡುವುದಾಗಿ ಸಿಆರ್​ಪಿಎಫ್​ಗೆ ಇಮೇಲ್​; ತನಿಖೆ ನಡೆಸುತ್ತಿರುವ ಅಧಿಕಾರಿಗಳು
ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್​
Follow us on

ನವದೆಹಲಿ: ಗೃಹಸಚಿವ ಅಮಿತ್​ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಹತ್ಯೆ ಮಾಡುವುದಾಗಿ ಕೇಂದ್ರೀಯ ಮೀಸಲು ಪಡೆ (CRPF)ಗೆ ಬೆದರಿಕೆ ಇಮೇಲ್​ವೊಂದು ಬಂದಿದೆ. ಈ ಇಬ್ಬರೂ ರಾಜಕೀಯ ನಾಯಕರ ಜೀವ ತೆಗೆಯುವುದಾಗಿ ಸಿಆರ್​ಪಿಎಫ್​ನ ಮುಂಬೈ ಪ್ರಧಾನ ಕಚೇರಿಗೆ ಇಮೇಲ್​ ಕಳಿಸಿದ್ದಾಗಿ ಮೂಲಗಳು ತಿಳಿಸಿದ್ದು, ಕೆಲವು ಪುಣ್ಯಸ್ಥಳಗಳು, ಪ್ರಮುಖ ಪ್ರದೇಶಗಳ ಮೇಲೆ ಕೂಡ ದಾಳಿ ನಡೆಸುವುದಾಗಿ ಮೇಲ್​ನಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್​ರನ್ನು ಆತ್ಮಾಹುತಿ ದಾಳಿಯ ಮೂಲಕ ಹತ್ಯೆ ಮಾಡುವುದಾಗಿ ಬೆದರಿಕೆ ಇಮೇಲ್​ ಬಂದಿದೆ. ತಾವು 11 ಜನ ಸೂಸೈಡ್​ ಬಾಂಬರ್​ಗಳಿದ್ದಿದ್ದಾಗ್ಯೂ ಅವರು ಹೇಳಿಕೊಂಡಿದ್ದಾರೆ. ಈ ಮೇಲ್​ನ್ನು ತನಿಖಾ ದಳಗಳು ಮತ್ತು ಭದ್ರತಾ ಪಡೆಗಳ ಮುಖ್ಯಸ್ಥರಿಗೂ ಫಾರ್​​ವರ್ಡ್ ಮಾಡಲಾಗಿದೆ ಎಂದು ಸಿಆರ್​ಪಿಎಫ್​ ಹೇಳಿದೆ. ಇಮೇಲ್​ ಬಂದು ಕೆಲವು ದಿನಗಳು ಕಳೆದಿದ್ದು, ಇಂದು ಬೆಳಗ್ಗೆಯಷ್ಟೇ ವಿಷಯ ಬೆಳಕಿಗೆ ಬಂದಿದೆ.

ಅಮಿತ್ ಶಾ ನಿನ್ನೆ ಚತ್ತೀಸ್​ಗಡ್​​ದ ಬಸ್​ಗುಡಾ ಸಿಆರ್​ಪಿಎಫ್ ಕ್ಯಾಂಪ್​ಗೆ ಭೇಟಿ ನೀಡಿದ್ದರು. ನಕ್ಸಲ್​ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಮಿತ್ ಶಾ, ಯೋಗಿ ಆದಿತ್ಯನಾಥ್​ಗೆ ಜೀವ ಬೆದರಿಕೆ ಇದೇ ಮೊದಲೇನೂ ಅಲ್ಲ. ಇದೇ ವರ್ಷ ಜನವರಿಯಲ್ಲಿ ಉತ್ತರಪ್ರದೇಶ ತುರ್ತು ಸೇವೆ ವಿಭಾಗಕ್ಕೆ, ಯೋಗಿ ಆದಿತ್ಯನಾಥ್​ರನ್ನು 24 ಗಂಟೆಯಲ್ಲಿ ಎಕೆ 47 ರೈಫಲ್​​ನಿಂದ ಕೊಲ್ಲುವುದಾಗಿ ಸಂದೇಶ ಕಳಿಸಲಾಗಿತ್ತು. ನವೆಂಬರ್​​ನಲ್ಲೂ ಇಂಥದ್ದೇ ಒಂದು ಸಂದೇಶ ಇದೇ ವಿಭಾಗಕ್ಕೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಗ್ರಾದ ಅಪ್ರಾಪ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: Kerala Assembly Elections 2021: ನಟ ಮಮ್ಮೂಟ್ಟಿಗೆ ಕೋಡು ಇದೆಯಾ; ಮತಗಟ್ಟೆಯಲ್ಲಿ ಬಿಜೆಪಿ ಪ್ರತಿಭಟನೆ

ಟೊಮ್ಯಾಟೊ ದರ ಒಮ್ಮೆಲೆ ಕುಸಿತ: ಬೆಳೆದ ಟೊಮ್ಯಾಟೊವನ್ನೆಲ್ಲಾ ರಸ್ತೆಗೆ ಸುರಿದು ರೈತರ ಆಕ್ರೋಶ

 

CRPF received an email threatening to kill UP CM Yogi Adityanath and Union Home Minister Amit Shah