Crude Bomb Attack: ಬಿಜೆಪಿ ರ‍್ಯಾಲಿ ಮೇಲೆ ಕಚ್ಚಾ ಬಾಂಬ್‌ ದಾಳಿ, ಪಶ್ಚಿಮ ಬಂಗಾಳದಲ್ಲಿ ಉದ್ವಿಗ್ನತೆ ಸ್ಥಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 12, 2022 | 9:54 AM

ಪಶ್ಚಿಮ ಬಂಗಾಳದಲ್ಲಿ ಭಾನುವಾರ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಬಿಜೆಪಿ ರ್ಯಾಲಿ ಮೇಲೆ ಹಲವಾರು ಕಚ್ಚಾ ಬಾಂಬ್‌ಗಳನ್ನು ಎಸೆಯುತ್ತಿದ್ದಂತೆ ಉದ್ವಿಗ್ನತೆ ಉಂಟಾಯಿತು. ರಾಜ್ಯದಲ್ಲಿ ಟಿಎಂಸಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನಾ ಮೆರವಣಿಗೆ ವೇಳೆ ಸಿತಾಲ್ಕುಚಿಯಲ್ಲಿ ಈ ಘಟನೆ ನಡೆದಿದೆ.

Crude Bomb Attack: ಬಿಜೆಪಿ ರ‍್ಯಾಲಿ ಮೇಲೆ ಕಚ್ಚಾ ಬಾಂಬ್‌ ದಾಳಿ, ಪಶ್ಚಿಮ ಬಂಗಾಳದಲ್ಲಿ ಉದ್ವಿಗ್ನತೆ ಸ್ಥಿತಿ
Crude bomb attack
Follow us on

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಭಾನುವಾರ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಬಿಜೆಪಿ ರ್ಯಾಲಿ ಮೇಲೆ ಹಲವಾರು ಕಚ್ಚಾ ಬಾಂಬ್‌ಗಳನ್ನು ಎಸೆಯುತ್ತಿದ್ದಂತೆ ಉದ್ವಿಗ್ನತೆ ಉಂಟಾಯಿತು. ರಾಜ್ಯದಲ್ಲಿ ಟಿಎಂಸಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನಾ ಮೆರವಣಿಗೆ ವೇಳೆ ಸಿತಾಲ್ಕುಚಿಯಲ್ಲಿ ಈ ಘಟನೆ ನಡೆದಿದೆ. ಕಚ್ಚಾ ಬಾಂಬ್‌ಗಳನ್ನು ಟಿಎಂಸಿ ಬೆಂಬಲಿಗರು ಎಸೆದಿದ್ದಾರೆ ಎನ್ನಲಾಗಿದ್ದು, ಇದರ ಜೊತೆಗೆ ಅವರು ಬಿಜೆಪಿ ಕಾರ್ಯಕರ್ತರ ಮೇಲೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಸಿತಾಲ್ಕುಚಿಯಲ್ಲಿ ಬಿಜೆಪಿ ರ್ಯಾಲಿ ನಡೆಸಿದೆ.

ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಉದ್ವಿಗ್ನತೆ ಸೃಷ್ಟಿಯಾಗದಂತೆ ಪೊಲೀಸರು ರ್ಯಾಲಿಯನ್ನು ತಡೆದಿದ್ದಾರೆ. ಈ ದಾಳಿಯಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಆದರೆ ಯಾರೂ ಆಸ್ಪತ್ರೆಗೆ ದಾಖಲಾಗಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಜಂಗಲ್ ರಾಜ್ ಚಾಲ್ತಿಯಲ್ಲಿದೆ ಮತ್ತು ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸುತ್ತದೆ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ಸಾರ್ವಜನಿಕರ ಗಮನ ಸೆಳೆಯಲು ಬಿಜೆಪಿಯೇ ದಾಳಿ ನಡೆಸಿದೆ ಎಂದು ಟಿಎಂಸಿ ಆರೋಪಿಸಿದೆ. ಈ ಪ್ರದೇಶದಲ್ಲಿ ಬಿಜೆಪಿ ಬೆಂಬಲಿಗರು ಟಿಎಂಸಿ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಪಕ್ಷ ಹೇಳಿಕೊಂಡಿದೆ. ನಾವು ಮಲ್ಬಜಾರ್‌ನಲ್ಲಿ ಅಭಿಷೇಕ್ ಬ್ಯಾನರ್ಜಿಯವರ ಸಾರ್ವಜನಿಕ ಸಭೆಯಲ್ಲಿ ನಿರತರಾಗಿದ್ದೆವು. ನಾವು ಸಿತಾಲ್ಕುಚಿಯಲ್ಲಿ ಏಕೆ ತೊಂದರೆ ಕೊಡಬೇಕು? ಎಂದು ಉತ್ತರ ಬಂಗಾಳ ಅಭಿವೃದ್ಧಿ ಸಚಿವ, ಟಿಎಂಸಿಯ ದಿನ್ಹತಾ ಶಾಸಕ ಉದಯನ್ ಗುಹಾ ಘಟನೆಗೆ ಪ್ರತಿಕ್ರಿಯಿಸಿದ್ದಾರೆ.

Published On - 9:52 am, Mon, 12 September 22